WhatsApp ಯಾವ ಕ್ಷಣದಲ್ಲಾದರೂ ಪರಿಚಯಿಸಬಹುದು ಈ ವೈಶಿಷ್ಟ್ಯ, ನಿಮಗೆಷ್ಟು ಲಾಭದಾಯಕ ತಿಳಿಯಿರಿ

ಮುಂಬರುವ Disappearing Chats ವೈಶಿಷ್ಟ್ಯವು "ಹೊಸ ಚಾಟ್ ಥ್ರೆಡ್‌ಗಳನ್ನು ಸ್ವಯಂಚಾಲಿತವಾಗಿ ಅಲ್ಪಾವಧಿಯ ಚಾಟ್‌ಗಳಾಗಿ ಪರಿವರ್ತಿಸುತ್ತದೆ.

Written by - Ranjitha R K | Last Updated : Sep 3, 2021, 01:51 PM IST
  • WhatsApp ತನ್ನ ಹೊಸ Disappearing Chats ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ.
  • ವಾಟ್ಸಾಪ್‌ನಲ್ಲಿ ಒನ್ ಆನ್ ಒನ್ ಚಾಟ್ ಮತ್ತು ಗ್ರೂಪ್ ಚಾಟ್ ಎರಡಕ್ಕೂ ಲಭ್ಯವಿರುತ್ತದೆ.
  • ಈಗಾಗಲೇ ಅಸ್ತಿತ್ವದಲ್ಲಿರುವ Disappearing ಮೆಸೇಜ್ ವೈಶಿಷ್ಟ್ಯದ ವಿಸ್ತರಣೆಯಾಗಿದೆ.
WhatsApp ಯಾವ ಕ್ಷಣದಲ್ಲಾದರೂ ಪರಿಚಯಿಸಬಹುದು ಈ ವೈಶಿಷ್ಟ್ಯ, ನಿಮಗೆಷ್ಟು ಲಾಭದಾಯಕ ತಿಳಿಯಿರಿ   title=
WhatsApp Disappearing Chats (File photo)

ನವದೆಹಲಿ : WhatsApp ತನ್ನ ಹೊಸ Disappearing Chats ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ. WaBetaInfo ಪ್ರಕಾರ, ಈ ಮೋಡ್ ವಾಟ್ಸಾಪ್‌ನಲ್ಲಿ ಒನ್ ಆನ್ ಒನ್ ಚಾಟ್ ಮತ್ತು ಗ್ರೂಪ್ ಚಾಟ್ ಗಳಿಗೆ ಲಭ್ಯವಿರುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಅಸ್ತಿತ್ವದಲ್ಲಿರುವ Disappearing ಮೆಸೇಜ್ ವೈಶಿಷ್ಟ್ಯದ ವಿಸ್ತರಣೆಯಾಗಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ನಿಮ್ಮ WhatsApp ನಲ್ಲಿ ಕಾಣಿಸಿಕೊಳ್ಳಬಹುದು. 

ಶೀಘ್ರದಲ್ಲೇ ಪರಿಚಯವಾಗಲಿದೆ ಹೊಸ ವೈಶಿಷ್ಟ್ಯ : 
ಫೇಸ್‌ಬುಕ್ (Facebook) ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಇಬ್ಬರೂ ಈ ವೈಶಿಷ್ಟ್ಯವು ಶೀಘ್ರದಲ್ಲೇ ಪ್ಲಾಟ್ ಫಾರಂನಲ್ಲಿ ಲಭ್ಯವಾಗುವ ಬಗ್ಗೆ ಪುಷ್ಟೀಕರಿಸಿದ್ದಾರೆ. ಈ ಬಗ್ಗೆ WaBetaInfo ಈ ಹಿಂದೆಯೇ ಹೇಳಿತ್ತು. ಈ ವೈಶಿಷ್ಟ್ಯವು ಪ್ರಸ್ತುತ WhatsApp ಬೀಟಾ ಆವೃತ್ತಿ 2.21.18.7 ನಲ್ಲಿ ಕಾಣಿಸುತ್ತಿದೆ. ಇದು ಮೊದಲು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ : ನಿಮ್ಮ ಬೈಕ್ ಕೂಡಾ ಕಡಿಮೆ ಮೈಲೇಜ್ ನೀಡುತ್ತಿದೆಯೇ ? ಹಾಗಿದ್ದರೆ ಈ ಟಿಪ್ಸ್ ಬಳಸಿ ನೋಡಿ

ಏನಿದರ ವೈಶಿಷ್ಟ್ಯ ? 
ಮುಂಬರುವ Disappearing Chats ವೈಶಿಷ್ಟ್ಯವು "ಹೊಸ ಚಾಟ್ ಥ್ರೆಡ್‌ಗಳನ್ನು ಸ್ವಯಂಚಾಲಿತವಾಗಿ ಅಲ್ಪಾವಧಿಯ ಚಾಟ್‌ಗಳಾಗಿ ಪರಿವರ್ತಿಸುತ್ತದೆ." ನೀವು ಅದನ್ನು ಸಕ್ರಿಯಗೊಳಿಸಿದಾಗ ಅದನ್ನು ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಕಾಣಬಹುದು. ಪ್ರತಿ ಹೊಸ ಚಾಟ್ (chat) ಅಥವಾ ಗುಂಪಿನಲ್ಲಿರುವ ಎಲ್ಲಾ ಸಂದೇಶಗಳು ಅಲ್ಪಾವಧಿಯ ನಂತರ ಕಣ್ಮರೆಯಾಗುತ್ತವೆ.

ಯಾರಾದರೂ ತಮ್ಮ ಸಂದೇಶಗಳನ್ನು ಡಿಲೀಟ್ ಮಾಡಲು ಬಯಸಿದರೆ, ಅವರು  Disappearing Chats ವೈಶಿಷ್ಟ್ಯವನ್ನು ಆಫ್ ಮಾಡಬೇಕಾಗುತ್ತದೆ. ಮೂಲಗಳ ಪ್ರಕಾರ, ಹೊಸ ಚಾಟ್‌ನಲ್ಲಿ Disappearing Chats ಮೋಡ್  ಅನ್ ಆದಾಗ  ವಾಟ್ಸಾಪ್ ಬಳಕೆದಾರರಿಗೆ ತಿಳಿಸುತ್ತದೆ.

ಇದನ್ನೂ ಓದಿ : JioPhone ಬಳಕೆದಾರರಿಗೆ ಬಿಗ್ ಶಾಕ್ : ಇನ್ನುಮೇಲೆ ಫೋನ್‌ನಲ್ಲಿ ಇರುವುದಿಲ್ಲ ಈ ಫೀಚರ್! 

ವ್ಯೂ ವನ್ಸ್ ಫೀಚರ್ : 
WhatsApp ಪ್ರಸ್ತುತ Disappearing Chats ಮತ್ತು ವ್ಯೂ ವನ್ಸ್ ಫೀಚರ್ ಅನ್ನು ಒಳಗೊಂಡಿದೆ.  ವ್ಯೂ ವನ್ಸ್ ವೈಶಿಷ್ಟ್ಯವು  ಫೋಟೋ ಕಳುಹಿಸುವ ಅವಕಾಶವನ್ನು ನೀಡುತ್ತದೆ. ರಿಸೀವರ್ ಅದನ್ನು ಓಪನ್ ಮಾಡಿ ಮತ್ತೆ WhatsApp  ಕ್ಲೋಸ್ ಮಾಡಿದರೆ ಆ ಫೋಟೋ ಕಾಣಿಸುವುದಿಲ್ಲ. ಆದರೆ, ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಕಳುಹಿಸುವಾಗಲೆಲ್ಲಾ ವ್ಯೂ ವನ್ಸ್ ಮಿಡಿಯಾ ವನ್ನು ಆಯ್ಕೆ ಮಾಡಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News