Vivo T1x SmartPhone: 12 ಸಾವಿರಕ್ಕಿಂತ ಕಡಿಮೆ ಬೆಲೆಯ ವಿವೋ ಸ್ಮಾರ್ಟ್‌ಫೋನ್ ಬಿಡುಗಡೆ

Vivo T1x ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಬಜೆಟ್ ಬೆಲೆಯ ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಿರಿ

Written by - Puttaraj K Alur | Last Updated : Jul 20, 2022, 04:17 PM IST
  • Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo T1x ಅನ್ನು ಇಂದು ಬಿಡುಗಡೆ ಮಾಡಿದೆ
  • 12 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಈ ಫೋನಿನಲ್ಲಿವೆ ಹಲವಾರು ವೈಶಿಷ್ಟ್ಯಗಳು
  • ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ವಿಶೇಷತೆ ಮತ್ತು ಆಫರ್ ಬಗ್ಗೆ ತಿಳಿದುಕೊಳ್ಳಿರಿ
Vivo T1x SmartPhone: 12 ಸಾವಿರಕ್ಕಿಂತ ಕಡಿಮೆ ಬೆಲೆಯ ವಿವೋ ಸ್ಮಾರ್ಟ್‌ಫೋನ್ ಬಿಡುಗಡೆ  title=
Vivo t1x smartphone specification

ನವದಹಲಿ: ನೀವು ಕಡಿಮೆ ಬಜೆಟ್‍ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಇಲ್ಲಿದೆ ಸಂತಸದ ಸುದ್ದಿ. Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo T1x ಅನ್ನು ಇಂದು(ಜುಲೈ 20) ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯೆಂದರೆ ಇದರ ಬೆಲೆ 12 ಸಾವಿರ ರೂ.ಗಿಂತ ಕಡಿಮೆ. Vivo T1x ನ ಬೆಲೆ ಎಷ್ಟು, ವಿಶೇಷಣಗಳು ಯಾವುವು ಮತ್ತು ಇದನ್ನು ಯಾವಾಗ ಮತ್ತು ಎಲ್ಲಿಂದ ಖರೀದಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

T1x ಸ್ಮಾರ್ಟ್‌ಫೋನ್ ಬೆಲೆ

Vivo, Vivo T1xನ ಈ ಕೈಗೆಟುಕುವ ಸ್ಮಾರ್ಟ್‌ಫೋನ್ 12 ಸಾವಿರ ರೂ.ಗಿಂತ ಅಗ್ಗವಾಗಿದೆ. ಈ ಸ್ಮಾರ್ಟ್‌ಫೋನ್ 11,999 ರೂ.ಗೆ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಇದನ್ನು ಖರೀದಿಸುವಾಗ HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ ನೀವು 1 ಸಾವಿರ ರೂ.ಗಳ ತ್ವರಿತ ರಿಯಾಯಿತಿ ಪಡೆಯುತ್ತೀರಿ. ಆಗ ಈ ಫೋನ್ ನಿಮಗೆ ಕೇವಲ 10,999 ರೂ.ಗೆ ಲಭ್ಯವಾಗುತ್ತದೆ.  

ಇದನ್ನೂ ಓದಿ: ಶೀಘ್ರದಲ್ಲೇ 10,000ರೂ.ಗಳಲ್ಲಿ 5G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ ಸ್ಯಾಮ್‌ಸಂಗ್

Vivo T1x ಸ್ಮಾರ್ಟ್‌ಫೋನ್ ಸೇಲ್!

ನೀವು ಈ Vivo, Vivo T1x ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಕೆಲ ದಿನಗಳವರೆಗೆ ಕಾಯಬೇಕಾಗುತ್ತದೆ. ಈ ಸ್ಮಾರ್ಟ್‌ಫೋನ್ ಜುಲೈ 27ರ ಮಧ್ಯಾಹ್ನ 12ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಫೋನ್ ಖರೀದಿಯ ಮೇಲೆ ನಿಮಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಆವೃತ್ತಿಗೆ 1 ವರ್ಷದ ಚಂದಾದಾರಿಕೆ ಸಹ ನೀಡಲಾಗುತ್ತಿದೆ.

Vivo T1x ವೈಶಿಷ್ಟ್ಯಗಳು

Vivo T1x ನಲ್ಲಿ ನಿಮಗೆ 6.58-ಇಂಚಿನ Full HD + LCD ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗುತ್ತಿದೆ. Qualcomm Snapdragon 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ 4G ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಇದರಲ್ಲಿ 50MP ಪ್ರಾಥಮಿಕ ಸೆನ್ಸಾರ್ ಮತ್ತು 2MP 2ನೇ ಸೆನ್ಸಾರ್‍ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನಿಮಗೆ ನೀಡಲಾಗುತ್ತಿದೆ. Vivo T1x ನಲ್ಲಿ 8MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. 

ಇದನ್ನೂ ಓದಿ: ಇನ್ಫಿನಿಕ್ಸ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News