ಜಿಯೋ ಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ

Paris Paralympic Games 2024: ಜಿಯೋಸಿನಿಮಾ ಎರಡು ಏಕಕಾಲೀನ ಫೀಡ್‌ಗಳಲ್ಲಿ ವೀಕ್ಷಕರಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ ಅತ್ಯುತ್ತಮ ಕ್ರೀಡಾಸ್ಪರ್ಧೆಗಳ ಸಮಗ್ರ ಪ್ರಸ್ತುತಿಯನ್ನು ನೀಡಲಿದೆ. 

Written by - Yashaswini V | Last Updated : Aug 28, 2024, 03:31 PM IST
  • 84 ಪ್ಯಾರಾ-ಕ್ರೀಡಾಪಟುಗಳೊಂದಿಗೆ ಭಾರತವು ಇಲ್ಲಿಯವರೆಗಿನ ಅತಿದೊಡ್ಡ ತಂಡವನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಿದೆ.
  • 12 ಕ್ರೀಡಾ ವಿಭಾಗಗಳಲ್ಲಿ ಭಾರತವು ಭಾಗವಹಿಸಲಿದ್ದು, ನಾಲ್ವರು ಪ್ಯಾರಾ-ಕ್ರೀಡಾಪಟುಗಳು ಪ್ಯಾರಿಸ್ಗೆ ಹಾಲಿ ಚಾಂಪಿಯನ್ಗಳಾಗಿ ಹೋಗುತ್ತಿದ್ದಾರೆ.
ಜಿಯೋ ಸಿನಿಮಾದಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024 ನೇರಪ್ರಸಾರ title=

Paris Paralympic Games 2024 : ಪ್ಯಾರಿಸ್ ಒಲಿಂಪಿಕ್-2024ರ ಐತಿಹಾಸಿಕ ವೀಕ್ಷಣೆ ದಾಖಲೆ ಪ್ರಸ್ತುತಿಯ ನಂತರದಲ್ಲಿ ಜಿಯೋ ಸಿನಿಮಾದಲ್ಲಿ ಪ್ಯಾರಾಲಿಂಪಿಕ್ ಗೇಮ್ಸ್ ಪ್ಯಾರಿಸ್-2024ರ ನೇರಪ್ರಸಾರದ ಘೋಷಣೆಯನ್ನು ವಯಾಕಾಮ್18 ಮಾಡುತ್ತಿದೆ. ಫ್ರೆಂಚ್ ರಾಜಧಾನಿಯಲ್ಲಿ ಆಗಸ್ಟ್ 28ರಿಂದ ಸೆಪ್ಟೆಂಬರ್ 8ರವರೆಗೆ ಪ್ಯಾರಾಲಿಂಪಿಕ್ ನಡೆಯಲಿದೆ. ಜಿಯೋ ಸಿನಿಮಾದಲ್ಲಿ 12 ದಿನಗಳ ಕ್ರೀಡಾಕೂಟದ ನೇರಪ್ರಸಾರ ನೀಡುವ ಜೊತೆಗೆ ಸ್ಪೋರ್ಟ್ಸ್18 ಟಿವಿ ನೆಟ್‌ವರ್ಕ್‌ನಲ್ಲಿ ಸ್ಪರ್ಧೆಗಳ ದೈನಂದಿನ ಮುಖ್ಯಾಂಶಗಳನ್ನು ಸಹ ನೀಡಲಾಗುತ್ತದೆ. 

ಜಿಯೋಸಿನಿಮಾ ಎರಡು ಏಕಕಾಲೀನ ಫೀಡ್‌ಗಳಲ್ಲಿ ವೀಕ್ಷಕರಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ ಅತ್ಯುತ್ತಮ ಕ್ರೀಡಾಸ್ಪರ್ಧೆಗಳ ಸಮಗ್ರ ಪ್ರಸ್ತುತಿಯನ್ನು ನೀಡಲಿದೆ. ವೀಕ್ಷಕರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್-2024ರ (Paris Paralympics-2024) ಉದ್ಘಾಟನಾ ಸಮಾರಂಭವನ್ನು ಇಂದು (ಬುಧವಾರ) ರಾತ್ರಿ 11:30 (ಭಾರತೀಯ ಕಾಲಮಾನ)ರಿಂದ ವೀಕ್ಷಿಸಲು ಸಾಧ್ಯವಾಗುತ್ತದೆ . ಆಗಸ್ಟ್ 29ರಿಂದ(ಗುರುವಾರ) ಪ್ರತಿದಿನ ಮಧ್ಯಾಹ್ನ 12ರಿಂದ ಕ್ರೀಡಾಸ್ಪರ್ಧೆಗಳ ನೇರಪ್ರಸಾರವನ್ನು ಕಾಣಬಹುದಾಗಿರುತ್ತದೆ.

ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಪ್ರಸ್ತುತಿಯು ಭಾರತದಲ್ಲಿ 17 ಕೋಟಿಗೂ ಅಧಿಕ ವೀಕ್ಷಕರು, 1,500 ಕೋಟಿ ನಿಮಿಷಗಳ ವೀಕ್ಷಣೆಯ ಅಭೂತಪೂರ್ವ ದಾಖಲೆಯನ್ನು ನಿರ್ಮಿಸಿದ ಬಗ್ಗೆ ವಯಾಕಾಮ್18 ಘೋಷಣೆ ಮಾಡಿದ ಬೆನ್ನಲ್ಲೇ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ (Paris Paralympic Games-2024) ನೇರಪ್ರಸಾರದ ಬಗ್ಗೆಯೂ ಅಧಿಕೃತ ಪ್ರಕಟಣೆಯನ್ನು ನೀಡುತ್ತಿದೆ. 

ಇದನ್ನೂ ಓದಿ- ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?

'ಒಲಿಂಪಿಕ್ ಚಳುವಳಿಯ ಉತ್ಸಾಹವನ್ನು ಆಚರಿಸುವ ಮತ್ತು ಮುಂದಕ್ಕೆ ಕೊಂಡೊಯ್ಯುವ ನಮ್ಮ ಬದ್ಧತೆಯು ಪ್ಯಾರಾಲಿಂಪಿಕ್ ಗೇಮ್ಸ್ ಪ್ರಸ್ತುತಿಯೊಂದಿಗೆ ವಿಸ್ತರಣೆಯಾಗುತ್ತಿದೆ. ನಮ್ಮ ಕ್ರೀಡಾಪಟುಗಳ ಪದಕ ಗೆಲುವಿನ ಸಾಹಸಗಳೊಂದಿಗೆ ಭಾರತದಲ್ಲಿ ಪ್ಯಾರಾಲಿಂಪಿಕ್ ಚಳುವಳಿಯು ಬೆಳೆಯುತ್ತಿದೆ. ಜಗತ್ತಿನ ಅತ್ಯುತ್ತಮ ಪ್ಯಾರಾ-ಕ್ರೀಡಾಪಟುಗಳ ಸ್ಪೂರ್ತಿದಾಯಕ ಕಥೆಗಳನ್ನು ಪ್ರಸ್ತುತಪಡಿಸಲು ನಾವು ಸಂತೋಷಪಡುತ್ತೇವೆ' ಎಂದು ವಯಾಕಾಮ್18ರ ಮಾರ್ಕೆಟಿಂಗ್ ಕ್ರೀಡಾ ಮುಖ್ಯಸ್ಥ ದಮಯಂತ್ ಸಿಂಗ್ ಹೇಳಿದ್ದಾರೆ. 

84 ಪ್ಯಾರಾ-ಕ್ರೀಡಾಪಟುಗಳೊಂದಿಗೆ  ಭಾರತವು ಇಲ್ಲಿಯವರೆಗಿನ ಅತಿದೊಡ್ಡ ತಂಡವನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸಿದೆ. 12 ಕ್ರೀಡಾ ವಿಭಾಗಗಳಲ್ಲಿ ಭಾರತವು ಭಾಗವಹಿಸಲಿದ್ದು, ನಾಲ್ವರು ಪ್ಯಾರಾ-ಕ್ರೀಡಾಪಟುಗಳು ಪ್ಯಾರಿಸ್ಗೆ ಹಾಲಿ ಚಾಂಪಿಯನ್ಗಳಾಗಿ ಹೋಗುತ್ತಿದ್ದಾರೆ. ಅವರೆಂದರೆ ಸುಮಿತ್ ಆಂಟಿಲ್ (ಪುರುಷರ ಜಾವೆಲಿನ್ ಎಸೆತ ಎಫ್64), ಕೃಷ್ಣ ನಗರ್ (ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಚ್6), ಮನೀಷ್ ನರ್ವಾಲ್ (ಪುರುಷರ ಶೂಟಿಂಗ್ 50ಮೀ, ಪಿಸ್ತೂಲ್ ಎಸ್ಎಚ್1) ಮತ್ತು ಅವನಿ ಲೇಖರ (ಮಹಿಳೆಯರ 10ಮೀ. ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ಎಚ್).

ಇದನ್ನೂ ಓದಿ- ಏಕಲವ್ಯ ಪ್ರಶಸ್ತಿ/ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಭಾರತ ತಂಡದಲ್ಲಿ ವಿಶ್ವ ನಂ. 1 ಮಹಿಳಾ ಸಿಂಗಲ್ಸ್ ಎಸ್ಎಚ್6 ಆಟಗಾರ್ತಿ ನಿತ್ಯಾಶ್ರೀ ಸುಮತಿ ಶಿವನ್ ಕೂಡ ಇದ್ದಾರೆ. ಎಸ್ಎಚ್6 ಸ್ಪರ್ಧೆಯನ್ನು ಈ ಬಾರಿ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆಸಲಾಗುತ್ತಿದೆ. 

ಐದು ಚಿನ್ನ, ಎಂಟು ಬೆಳ್ಳಿ, ಆರು ಕಂಚು ಸೇರಿದಂತೆ ದಾಖಲೆಯ 19 ಪದಕಗಳೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್-2020 ಭಾರತದ ಪಾಲಿಗೆ ಅತ್ಯಂತ ಯಶಸ್ವಿ ಪ್ಯಾರಾಲಿಂಪಿಕ್ಸ್ ಆಗಿದೆ. ಶೂಟರ್ ಅವನಿ ಲೇಖರ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News