ಹೀಗೆ ಮಾಡಿದರೆ block ಆದ WhatsApp ಅಕೌಂಟ್ ಅನ್ಲಾಕ್ ಮಾಡಬಹುದು

ವರದಿಯ ಪ್ರಕಾರ WhatsApp ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಈ ವೈಶಿಷ್ಟ್ಯದೊಂದಿಗೆ, ಯಾರ ಖಾತೆಯನ್ನು ನಿರ್ಬಂಧಿಸಲಾಗಿದೆ ಆ ಬಳಕೆದಾರರು ತಮ್ಮ ಖಾತೆಯನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Jul 1, 2022, 01:12 PM IST
  • WhatsApp ನಲ್ಲಿ ಹೊಸ ವೈಶಿಷ್ಟ್ಯ
  • ಬ್ಲಾಕ್ ಆದ ಖಾತೆ ಅನ್ ಬ್ಲಾಕ್ ಮಾಡುವುದು ಹೇಗೆ ?
  • ಸರಳ ಪ್ರಕ್ರಿಯೆ ಇಲ್ಲಿದೆ
ಹೀಗೆ ಮಾಡಿದರೆ block ಆದ  WhatsApp ಅಕೌಂಟ್ ಅನ್ಲಾಕ್ ಮಾಡಬಹುದು  title=
how to unblock whats app (file photo)

ಬೆಂಗಳೂರು : ಪ್ರತಿ ವರ್ಷ WhatsApp ಹಲವಾರು ಸಾವಿರ ಖಾತೆಗಳ ಮೇಲೆ ನಿರ್ಬಂಧ ಹೇರುತ್ತದೆ. ಆದರೆ ಈಗ, WhatsApp ತನ್ನ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಬಳಸಲು ಎರಡನೇ ಅವಕಾಶವನ್ನು ನೀಡಲು ನಿರ್ಧರಿಸುವಂತೆ ಕಾಣುತ್ತದೆ. WhatsApp ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಹೊಸ ವೈಶಿಷ್ಟ್ಯ ಯಾರ ಖಾತೆಯನ್ನು ನಿರ್ಬಂಧಿಸಲಾಗಿದೆಯೋ ಆ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ. 

WhatsApp ನಲ್ಲಿ ಹೊಸ ವೈಶಿಷ್ಟ್ಯ  :
ವರದಿಯ ಪ್ರಕಾರ WhatsApp ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಈ ವೈಶಿಷ್ಟ್ಯದೊಂದಿಗೆ, ಯಾರ ಖಾತೆಯನ್ನು ನಿರ್ಬಂಧಿಸಲಾಗಿದೆ ಆ ಬಳಕೆದಾರರು ತಮ್ಮ ಖಾತೆಯನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ.  ಆದರೆ ಇದಕ್ಕಾಗಿ ಬಳಕೆದಾರರು ಕೆಲವು ಹಂತಗಳನ್ನು ಅನುಸರಿಸಬೇಕು.  ಹೀಗೆ ಮಾಡಿದರೆ ತಮ್ಮ ಹಳೆಯ ಖಾತೆಯನ್ನು ಡಿಲೀಟ್ ಮಾಡದೆ ಅಧಿಕೃತವಾಗಿ,  ಮರಳಿ ಪಡೆಯುವುದು ಸಾಧ್ಯವಾಗುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವು WhatsApp ನ ಬೀಟಾ ಆವೃತ್ತಿಯಲ್ಲಿ ಕಂಡುಬಂದಿದೆ. 

ಇದನ್ನೂ ಓದಿ : Flipkart Big Bachat Dhamaal sale: ಇಂದಿನಿಂದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಕಾ ಸೇಲ್ ಆರಂಭ

ನಿರ್ಬಂಧಿಸಲಾದ ಖಾತೆಯನ್ನು ಮತ್ತೆ ಪಡೆಯುವುದು ಹೇಗೆ ?  :
ಇದಕ್ಕಾಗಿ ಬಳಕೆದಾರರು WhatsApp ಅಪ್ಲಿಕೇಶನ್‌ನಲ್ಲಿಯೇ ಆಯ್ಕೆಯನ್ನು ಪಡೆಯುತ್ತಾರೆ. ಈ ಆಯ್ಕೆ ಮೂಲಕ ನಿರ್ಬಂಧಿಸಿದ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.  ಆ್ಯಪ್‌ ಮೂಲಕವೇ ಬಳಕೆದಾರರು WhatsApp support ಜೊತೆ ಮಾತನಾಡಿ, ಪರಿಶೀಲನೆಗೆ ವಿನಂತಿಸಬಹುದು. ಈ ವಿನಂತಿ ಸಲ್ಲಿಸಿದ ನಂತರ, WhatsApp support ಅಪ್ಲಿಕೇಶನ್‌ನ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಬಳಕೆದಾರರ ಖಾತೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆಯೇ ಎಂದು ಪರಿಶೀಲಿಸುತ್ತದೆ. 

ವಿಮರ್ಶೆಯನ್ನು ಸಲ್ಲಿಸಿದ ನಂತರ ಮತ್ತು ಅಪ್ಲಿಕೇಶನ್ ಮಾನ್ಯವಾಗಿದೆ ಎಂದು ಕಂಡುಬಂದರೆ ನಿಮ್ಮ ಖಾತೆಯನ್ನು ಅನ್ ಬ್ಲಾಕ್ ಮಾಡಲಾಗುತ್ತದೆ. ಈ ವೈಶಿಷ್ಟ್ಯವು ಮುಂಬರುವ ವಾರಗಳಲ್ಲಿ ಐಒಎಸ್ ಬೀಟಾನಲ್ಲಿಯೂ ಬಿಡುಗಡೆಯಾಗಲಿದೆ. ಈ ವೈಶಿಷ್ಟ್ಯವಿಲ್ಲದಿದ್ದರೂ WhatsApp support ಗೆ ಮೇಲ್ ಮಾಡುವ ಮೂಲಕ ಕೂಡಾ ನಿಮ್ಮ ಖಾತೆಯನ್ನು ಮರಳಿ ಪಡೆಯಬಹುದು. 

ಇದನ್ನೂ ಓದಿ : Amazon Fab Phone Fest: ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಕೇವಲ 3,000ರೂ.ಗೆ ಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News