WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು

WaBetaInfo ಪ್ರಕಾರ, ವಾಟ್ಸಾಪ್ ಬೀಟಾದಲ್ಲಿ ಈಗ  Voice Notes Waveforms ಅನ್ನು ಸೇರಿಸಲಾಗಿದೆ. ವಾಟ್ಸಾಪ್ನ ವಾಯ್ಸ್ ನೋಟ್ ಗಳಲ್ಲಿ ಈಗ ನೇರ ರೇಖೆಗಳ ಬದಲು Waveforms ಕಾಣಿಸಲಿದೆ. 

Written by - Ranjitha R K | Last Updated : Jun 28, 2021, 03:35 PM IST
  • ವಾಯ್ಸ್ ನೋಟ್ಸ್ ವೇವ್ ಫಾರ್ಮ್ ಅನ್ನುವಾಟ್ಸಾಪ್‌ಗೆ ಸೇರಿಸಲಾಗಿದೆ
  • ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಇದರ ಲಾಭ ಸಿಗುತ್ತದೆ
  • ಈಗ ಸ್ಟಿಕ್ಕರ್ ಪ್ಯಾಕ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ
WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು title=
ವಾಯ್ಸ್ ನೋಟ್ಸ್ ವೇವ್ ಫಾರ್ಮ್ ಅನ್ನುವಾಟ್ಸಾಪ್‌ಗೆ ಸೇರಿಸಲಾಗಿದೆ (file photo)

ನವದೆಹಲಿ: ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾದಲ್ಲಿ 2 ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ವೈಶಿಷ್ಟ್ಯಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ. ವಾಟ್ಸಾಪ್ ನ  ಹೊಸ ವೈಶಿಷ್ಟ್ಯಗಳು Voice Notes ಮತ್ತು ಸ್ಟಿಕ್ಕರ್ ಪ್ಯಾಕ್‌ಗಳಿಗೆ (Sticker pack) ಸಂಬಂಧಿಸಿವೆ. ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರು ಈ ಹೊಸ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ.

ವೇವ್ ಫಾರ್ಮ್ ನೊಂದಿಗೆ ವಾಯ್ಸ್ ನೋಟ್  :
WaBetaInfo ಪ್ರಕಾರ, ವಾಟ್ಸಾಪ್ ಬೀಟಾದಲ್ಲಿ ಈಗ  Voice Notes Waveforms ಅನ್ನು ಸೇರಿಸಲಾಗಿದೆ. ವಾಟ್ಸಾಪ್ನ ವಾಯ್ಸ್ ನೋಟ್ ಗಳಲ್ಲಿ ಈಗ ನೇರ ರೇಖೆಗಳ ಬದಲು Waveforms ಕಾಣಿಸಲಿದೆ. ವಾಟ್ಸಾಪ್ನ ಈ ಹೊಸ ವೈಶಿಷ್ಟ್ಯವು ಆಂಡ್ರಾಯ್ಡ್ ಆವೃತ್ತಿ (Android Version ) 2.21.13.17 ರಲ್ಲಿ ಎಲ್ಲಾ ಬೀಟಾ ಟೆಸ್ಟರ್ಸ್ ಗೆ ಕಾಣಿಸಲಿದೆ. 

ಇದನ್ನೂ ಓದಿ : Mi 11 Lite: ಇಂದಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ ಸ್ಲಿಮ್ಮೆಸ್ಟ್ ಸ್ಮಾರ್ಟ್‌ಫೋನ್ ಎಂಐ 11 ಲೈಟ್

ಡಾರ್ಕ್ ಮೋಡ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು : 
ಬೇರೆ ಬೇರೆ ಸ್ಥಳಗಳಿಂದ ವಾಯ್ಸ್ ನೋಟ್ ಗಳನ್ನು ಪ್ಲೆ ಮತ್ತು ಪಾಸ್ ಮಾಡುವಾಗ ಕೆಲವು ಬಳಕೆದಾರರಿಗೆ ಸಮಸ್ಯೆ ಎದುರಾಗಬಹುದು. ಯಾಕೆಂದರೆ, ವಾಯ್ಸ್ ನೋಟ್ಸ್  ತರಂಗರೂಪಗಳು ಡಾರ್ಕ್ ಮೋಡ್‌ನಲ್ಲಿ (Dark Mode) ಹೆಚ್ಚು ಗೋಚರಿಸುವುದಿಲ್ಲ. ಪ್ರಸ್ತುತ, ಈ ವೈಶಿಷ್ಟ್ಯವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸ್ವಲ್ಪ ಸಮಯದ ನಂತರ ಈ ಹೊಸ ವೈಶಿಷ್ಟ್ಯವು ಐಒಎಸ್ (iOS ) ಬಳಕೆದಾರರಿಗೂ ಲಭ್ಯವಾಗಲಿದೆ.

ಈಗ ಫಾವರ್ಡ್ ಮಾಡಬಹುದು ಸ್ಟಿಕ್ಕರ್ ಪ್ಯಾಕ್ : 
ವಾಟ್ಸಾಪ್ ಬೀಟಾದಲ್ಲಿ ಹೊಸ ಅಪ್ ಡೇಟ್ ಮಾಡಿದ ನಂತರ, ಬಳಕೆದಾರರು ತಮ್ಮ ಸ್ನೇಹಿತರಿಗೆ ಸ್ಟಿಕ್ಕರ್ ಪ್ಯಾಕ್‌ಗಳನ್ನು (Sticker Packs)  ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ನಿಂದ ಡೌನ್‌ಲೋಡ್ (whatsapp download) ಮಾಡಲಾದ ಸ್ಟಿಕ್ಕರ್ ಪ್ಯಾಕ್‌ಗಳನ್ನು ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ಐಫೋನ್ (iPhone ) ಬಳಕೆದಾರರಿಗಾಗಿ ಸ್ಟಿಕ್ಕರ್ ಪ್ಯಾಕ್‌ಗಳ ವೈಶಿಷ್ಟ್ಯವು ಈಗಾಗಲೇ ವಾಟ್ಸಾಪ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ : Electricity Saving Tips: ಈ ನಾಲ್ಕು ವಿಧಾನಗಳನ್ನು ಅನುಸರಿಸಿದರೆ ಕಡಿಮೆಯಾಗಲಿದೆ ವಿದ್ಯುತ್ ಬಿಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News