ನವದಹಲಿ: 4ಜಿ ನೆಟ್ (4G Net) ಇದ್ದರೂ ಇಂಟರ್ನೆಟ್ ಸ್ಪೀಡ್ ಸ್ಲೋ ಇದೆಯಾ? ಚಿಂತೆ ಮಾಡಬೇಡಿ,. ನೆಟ್ ಸ್ಪೀಡ್ (Net Speed) ಹೆಚ್ಚಿಸುವ ಬಗ್ಗೆ ಟಿಪ್ಸ್ ಇವತ್ತು ಹೇಳ್ತೇವೆ.
1. ಮೊದಲು ಸೆಟ್ಟಿಂಗ್ಸ್ ಚೆಕ್ ಮಾಡಿ.
ನೆಟ್ ಸ್ಪೀಡ್ (Net Speed) ಹೆಚ್ಚಿಸಲು ಫೋನ್ ಸೆಟ್ಟಿಂಗ್ ಚೇಂಜ್ ಮಾಡಬೇಕಾಗುತ್ತದೆ. ಕೆಲವು ಫೋನ್ ಗಳಲ್ಲಿ ಸಿಮ್ ಹಾಕಿದ ತಕ್ಷಣ ಅಟೋಮ್ಯಾಟಿಕ್ ಸೆಟ್ಟಿಂಗ್ ಆಗಿ ಬಿಡುತ್ತದೆ. ಇನ್ನು ಕೆಲವು ಫೋನ್ ಗಳಲ್ಲಿ (Phone) ಅದನ್ನು ಮಾನ್ಯುವಲೀ ಬದಲಾಯಿಸಬೇಕಾಗುತ್ತದೆ. ಹಾಗಾಗಿ ಮೊದಲು ಫೋನ್ ಸೆಟ್ಟಿಂಗ್ ಹೋಗಿ. ಅಲ್ಲಿ ನೆಟ್ ವರ್ಕ್ ಸೆಟ್ಟಿಂಗ್ ಕ್ಲಿಕ್ ಮಾಡಿ. ಅಲ್ಲಿ ಪ್ರಿಪರ್ಡ್ ಟೈಪ್ ಅಪ್ ನೆಟ್ ವರ್ಕ್ ಕಾಣಿಸುತ್ತದೆ. ಅದರಲ್ಲಿ 4G ಅಥವಾ LTE ಆಯ್ಕೆ ಮಾಡಿ.
ಇದನ್ನೂ ಓದಿ : Cheapest Recharge Plan:ಕೇವಲ 1 ರೂಪಾಯಿ ನೀಡಿ 56 GB 4G Internet ಹಾಗೂ 28 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಕೊಡುಗೆ!
2. ಎಪಿಎನ್ ಸೆಟಿಂಗ್ ಚೇಂಜ್ ಮಾಡಿ :
ಇಂಟರ್ ನೆಟ್ ಸ್ಪೀಡ್ ಹೆಚ್ಚಿಸಲು ಎಪಿಎನ್ ಅಥವಾ Access Point Network ಸೆಟ್ಟಿಂಗ್ ಚೇಂಜ್ ಮಾಡಿ. ನೆಟ್ವರ್ಕ್ ಸೆಟ್ಟಿಂಗ್ (Network setting) ನಲ್ಲಿಯೇ ಅದರ ಅಪ್ಶನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಎಪಿಎನ್ ಟೈಪ್ ನಿಮಗೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. Default ಎಂದು ಬರೆದಿರುವುದು ಕಾಣಿಸುತ್ತದೆ. ಅದರ ನಂತರ APN protocol ಕ್ಲಿಕ್ ಮಾಡಿ. ಮತ್ತು ಅಲ್ಲಿ IPv4/IPv6 ಅಪ್ಶನ್ ಮೇಲೆ ಕ್ಲಿಕ್ ಮಾಡಿ, ಓಕೆ ಬಟನ್ ಪ್ರೆಸ್ ಮಾಡಿ. APN roaming protocol ಮೇಲೆ ಕ್ಲಿಕ್ ಮಾಡಿ. ಮತ್ತು IPv4/IPv6 ಅಪ್ಶನ್ ಮೇಲೆ ಕ್ಲಿಕ್ ಮಾಡಿ ಓಕೆ ಮಾಡಿ. ನಿಮ್ಮ ಸೆಟ್ಟಿಂಗ್ ಸೇವ್ ಆಗಿರುತ್ತದೆ.
3.Cache ಕ್ಲೀಯರ್ ಮಾಡುವುದು ಮರೆಯಬೇಡಿ :
Cache ಇದು ನಮ್ಮ ಫೋನಿನಲ್ಲಿರುವ ಅನ್ ವಾಂಟೆಡ್ ಫೈಲ್ಸ್ ಆಗಿರುತ್ತದೆ. ಇವು ಅಂಡ್ರಾಯಿಡ್ ಫೋನಿನಲ್ಲಿ ಅಟೋಮ್ಯಾಟಿಕ್ ಆಗಿ ಜನರೇಟ್ ಆಗಿರುತ್ತದೆ. ಇದನ್ನು ಆಗಾಗ ಕ್ಲೀಯರ್ ಮಾಡುತ್ತಿರಬೇಕು. ಇಲ್ಲದೇ ಹೋದರೆ ಫೋನ್ ಸ್ಲೋ ಆಗುತ್ತದೆ. ಇದರಿಂದ ನೆಟ್ ಸ್ಪೀಡ್ ಕೂಡಾ ಸ್ಲೋ ಆಗುತ್ತದೆ. Cacheಯನ್ನು ಆವಾಗಾವಗ ಕ್ಲಿಯರ್ ಮಾಡುತ್ತಿರಿ. ಇದರಿಂದ ಇಂಟರ್ ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
ಇದನ್ನೂ ಓದಿ : Powerful Fiber Broadband Plan: 500Mbps ಸ್ಪೀಡ್ ಹೊಂದಿರುವ ಪವರ್ ಫುಲ್ ಫೈಬರ್ ಬ್ರಾಡ್ ಬ್ಯಾಂಡ್ ಪ್ಲಾನ್ ಇದು, ಬೆಲೆಯೂ ಜಾಸ್ತಿ ಇಲ್ಲ
4. ಸೋಶಿಯಲ್ ಮೀಡಿಯಾ ಆಪ್ಸ್ :
ನಿಮ್ಮ ನೆಟ್ ಸ್ಲೋ ಆಗಲು ಫೇಸ್ ಬುಕ್ (Facebook), ಟ್ವಿಟರ್, ಇನ್ ಸ್ಟಾಗ್ರಾಂ ಮುಂತಾದ ಸೋಶಿಯಲ್ ಮೀಡಿಯಾ (Social Media) ಆಪ್ ಗಳು ಕಾರಣವಾಗುತ್ತವೆ. ನೀವು ಈ ಆಪ್ ಗಳನ್ನು ಬಳಸದೇ ಇದ್ದರೂ ಕೂಡಾ ಬ್ಯಾಕ್ ಗ್ರೌಂಡಿನಲ್ಲಿ ಈ ಆಪ್ ಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಹಾಗಾಗಿ, ನೆಟ್ ಸ್ಲೋ ಆಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಇದನ್ನು ಕಂಟ್ರೋಲ್ ಮಾಡಲು ಸೆಟ್ಟಿಂಗ್ ಹೋಗಿ. ಅಟೋ ಪ್ಲೇ ಮತ್ತು ಡೌನ್ ಲೋಡ್ (download)ಅಪ್ಶನ್ ಬಂದ್ ಮಾಡಿ. ಜೊತೆಗೆ ಬ್ರೌಸರ್ ನಲ್ಲಿ ಡಾಟಾ ಸೇವ್ ಮೋಡ್ ಓಪನ್ ಮಾಡಿ. ಇವೆಲ್ಲಾ ಟ್ರಿಕ್ಸ್ ಯೂಸ್ ಮಾಡಿದರೆ ಖಂಡಿತಾ ನಿಮ್ಮ ಫೋನಿನಲ್ಲಿ ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.