ನವದೆಹಲಿ : ಸೆಪ್ಟೆಂಬರ್ 1ರಿಂದ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಕೆಲ ಬದಲಾವಣೆಗಳು ತಿಂಗಳ ಮಧ್ಯದಿಂದ ಜಾರಿಗೆ ಬರಲಿದೆ. ಹೀಗಿರುವಾಗ ಈ ಬದಲಾವಣೆಗಳ ಪರಿಣಾಮವು ಬಳಕೆದಾರರ ಜೇಬಿನ ಮೇಲೆ ನೇರವಾಗಿ ಬೀಳುವುದಂತೂ ಖಚಿತ. ಈ ಬದಲಾವಣೆಗಳು ಯಾವ ರೀತಿ ನಿಮ್ಮ ಮೇಲೆ ಪರಿಣಾಮ ಬೀರಲಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಫೇಕ್ ಕಂಟೆಂಟ್ ನೀಡುವ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ :
Googleನ ಹೊಸ ನೀತಿ ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ. ಇದರ ಅಡಿಯಲ್ಲಿ, ಗೂಗಲ್ ಪ್ಲೇ ಸ್ಟೋರ್‌ನ (Google play store) ನಿಯಮವನ್ನು ಗೂಗಲ್ ಹಿಂದೆಂದಿಗಿಂತಲೂ ಕಠಿಣಗೊಳಿಸಿದೆ. ಹೊಸ ನೀತಿಯ ಅಡಿಯಲ್ಲಿ, ಫೇಕ್ ಕಂಟೆಂಟ್ ಪ್ರಚಾರ ಮಾಡುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ : ನಿಮ್ಮ PCಯನ್ನು ಸಂಪೂರ್ಣ ಆಧುನಿಕವಾಗಿಸಲಿದೆ Windows 11, ಏನಿರಲಿದೆ ವೈಶಿಷ್ಯ ತಿಳಿಯಿರಿ
OTT ಪ್ಲಾಟ್‌ಫಾರ್ಮ್ ದುಬಾರಿ :
OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ (Disney + Hotstar) ಭಾರತದಲ್ಲಿ ಸೆಪ್ಟೆಂಬರ್ 1ರಿಂದ ದುಬಾರಿಯಾಗಿದೆ. ಈಗ ಬಳಕೆದಾರರು 399 ರೂ. ಬದಲಾಗಿ 499ರೂ. ಪ್ಲಾನ್ ಸಿಗಲಿದೆ. ಅಂದರೆ ಈಗ ಬಳಕೆದಾರರು ಹೆಚ್ಚುವರಿ 100 ರೂ.ಗಳನ್ನು ಪಾವತಿಸಬೇಕಾಗುತ್ತದೆ. 899 ರೂ. ಪ್ಲಾನ್ ತೆಗೆದುಕೊಂಡರೆ, ಬಳಕೆದಾರರು, ಡಿಸ್ನಿ + ಹಾಟ್‌ಸ್ಟಾರ್ ಅನ್ನು ಎರಡು ಫೋನ್‌ಗಳಲ್ಲಿ ಚಲಾಯಿಸಬಹುದು.
online business ಕಂಪನಿ ಅಮೆಜಾನ್ (Amazon) ತನ್ನ ದರಗಳನ್ನು ಹೆಚ್ಚಿಸಬಹುದು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ (petrol diesel price) ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಕಾರಣದಿಂದಾಗಿ, 500 ಗ್ರಾಂ ಪ್ಯಾಕೇಜ್‌ಗೆ ರೂ 58 ಪಾವತಿಸಬೇಕಾಗಬಹುದು.
ಇದನ್ನೂ ಓದಿ : BSNL NEW PLAN: ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ BSNLನ ಹೊಸ ಯೋಜನೆ
Google ಡ್ರೈವ್ ವೈಶಿಷ್ಟ್ಯ ಮತ್ತಷ್ಟು ಸುರಕ್ಷಿತವಾಗಿರಲಿದೆ :
ಈ ತಿಂಗಳಿನಿಂದ ಗೂಗಲ್ ಡ್ರೈವ್ (Google Drive) ವೈಶಿಷ್ಟ್ಯ ಹೆಚ್ಚು ಸುರಕ್ಷಿತವಾಗಿರಲಿದೆ. ತನ್ನ ಬಳಕೆದಾರರಿಗೆ ಇದು ಸೆಪ್ಟೆಂಬರ್ 13 ರಂದು ಹೊಸ ಸೆಕ್ಯೂರಿಟಿ ಅಪ್ಡೇಟ್ ಜಾರಿ ಮಾಡಲಿದೆ. ಇದರಿಂದಾಗಿ ಗೂಗಲ್ ಡ್ರೈವ್ ಬಳಕೆ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಲಿದೆ.
ಲೋನ್ app ಗಳಿಗೆ ಬೀಳಲಿದೆ ಅಂಕುಶ :
ಆ್ಯಪ್‌ಗಳ ಮೂಲಕ ಸಾಲ ವಿತರಿಸುವಂತೆ ನಟಿಸಿ ಜನರನ್ನು ವಂಚಿಸುತ್ತಿರುವ ಆ್ಯಪ್‌ಗಳ ವಿರುದ್ದ ಈ ತಿಂಗಳು ಕ್ರಮ ಕೈಗೊಳ್ಳಲಾಗುವುದು. 15 ಸೆಪ್ಟೆಂಬರ್ 2021 ರಿಂದ ಲೋನ್ ಆಪ್‌ಗಳ (Loan app) ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಂಪನಿಯ ಈ ನಿರ್ಧಾರದಿಂದ, ಭಾರತದಲ್ಲಿ ಶಾರ್ಟ್ ಪರ್ಸನಲ್ ಲೋನ್ ಆಪ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಇದರೊಂದಿಗೆ, ಈಗಾಗಲೇ ಚಾಲನೆಯಲ್ಲಿರುವ ಸಾಲದ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ