iPhone 13 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಖರೀದಿಸಿ ಸ್ಮಾರ್ಟ್ ಫೋನ್

ಇತ್ತೀಚೆಗೆ ಬಿಡುಗಡೆಯಾದ ಐಫೋನ್ 13 ಸರಣಿಯನ್ನು ಸೇಲ್ ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದರೂ, ಐಫೋನ್ 13ರ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. 

Written by - Ranjitha R K | Last Updated : Jan 21, 2022, 12:55 PM IST
  • iPhone 13 ಮೇಲೆ ಭಾರೀ ರಿಯಾಯಿತಿ
  • iPhone 13 128GB ರೂಪಾಂತರದಲ್ಲಿ ಲಭ್ಯವಿದೆ ಬ್ಯಾಂಕ್ ಮತ್ತು ವಿನಿಮಯ ಕೊಡುಗೆ
  • 79,900 ರೂ. ಬದಲಿಗೆ 57,455 ರೂ.ಗೆ ಖರೀದಿಸಿ iPhone 13
iPhone 13 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಖರೀದಿಸಿ ಸ್ಮಾರ್ಟ್ ಫೋನ್  title=
iPhone 13 ಮೇಲೆ ಭಾರೀ ರಿಯಾಯಿತಿ (file photo)

ನವದೆಹಲಿ : Flipkart Big Saving Days Sale: ಬಿಗ್ ಸೇವಿಂಗ್ ಡೇಸ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ನಾಳೆ ಈ ಸೇಲ್ ನ ಕೊನೆಯ ದಿನವಾಗಿದೆ. ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ(Flipkart sale), ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಹಲವು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು. ಆದರೆ, ಕೆಲವು ಉತ್ಪನ್ನಗಳನ್ನು ಈ ಸೇಲ್ ನಿಂದ ದೂರ ಇಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 13 ಸರಣಿಯನ್ನು ಸೇಲ್ ನಲ್ಲಿ ಪಟ್ಟಿ ಮಾಡಲಾಗಿಲ್ಲ. ಆದರೂ, ಐಫೋನ್ 13ರ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ.  iPhone 13 128GB ರೂಪಾಂತರದ ಮೇಲೆ, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಲಭ್ಯವಿದೆ. 

iPhone 13 ಕೊಡುಗೆಗಳು ಮತ್ತು ರಿಯಾಯಿತಿಗಳು :
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಪಲ್ iPhone 13  ಸರಣಿಯನ್ನು ಬಿಡುಗಡೆ ಮಾಡಿದೆ. ಇದಾದ ನಂತರ ವರ್ಷದ ಅಂತ್ಯದ ವೇಳೆಗೆ, ಐಫೋನ್ 13 ರ ದಾಖಲೆಯ ಮಾರಾಟ ಕಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ (Flipkart sale) iPhone 13 128GB ರೂಪಾಂತರದ ಬೆಲೆ 79,900 ರೂ. ಆಗಿದೆ. ಆದರೆ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಮೂಲಕ ಈ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. 

ಇದನ್ನೂ ಓದಿ : ಕೇವಲ 800 ರೂ. ಗೆ ಖರೀದಿಸಿ Motorola ಸ್ಮಾರ್ಟ್ ಫೋನ್

iPhone 13 ಬ್ಯಾಂಕ್ ಕೊಡುಗೆಗಳು :
Apple iPhone 13 ಅನ್ನು ಖರೀದಿಸುವಾಗ,  Axis ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ (Credit card) ಪಾವತಿಸಿದರೆ, ಶೇಕಡಾ 5 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಅಂದರೆ ಫೋನ್ ಮೇಲೆ 3,995 ರೂ.ಗಳ ರಿಯಾಯಿತಿ ಸಿಕ್ಕಿದಂತಾಗುತ್ತದೆ. 

iPhone 13 ವಿನಿಮಯ ಕೊಡುಗೆಗಳು :
iPhone 13 ನಲ್ಲಿ 18,450 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ (exchange offer) ಕೂಡಾ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್  ವಿನಿಮಯ ಅಂದರೆ  ಎಕ್ಸ್‌ಚೇಂಜ್ ಮಾಡಿಕೊಂಡರೆ  ಇಷ್ಟು ರಿಯಾಯಿತಿ ಪಡೆಯಬಹುದು. ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನೀವು 18,450 ರೂಪಾಯಿಗಳ ಎಕ್ಸ್‌ಚೇಂಜ್ ಬೆಲೆ ಪಡೆಯುವುದು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ, ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ, ಫೋನ್‌ನ ಬೆಲೆ 57,455 ರೂ.ಗೆ ಇಳಿಯುತ್ತದೆ. 

ಇದನ್ನೂ ಓದಿ  : Flipkart Sale: Vivo 5G ಫೋನ್ ಮೇಲೆ ಪಡೆಯಿರಿ ಭರ್ಜರಿ 24,000 ರೂ.ಗಳ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News