ಸ್ವಾತಂತ್ರ್ಯೋತ್ಸವಾದ ಅಂಗವಾಗಿ ತನ್ನ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದ ಓಲಾ, ಏಕಕಾಲಕ್ಕೆ 5 ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

Ola News Scooter Launch: ಭವಿಷ್ಯದಲ್ಲಿ ಬಿಡುಗಡೆಯಾಗಬೇಕಿರುವ ತನ್ನ ಕ್ರೂಜರ್, ಎಡ್ವೆಂಚರ್, ರೋಡ್ಸ್ಟರ್ ಬೈಕ್ ಗಳ ಬಗ್ಗೆಯೂ ಕೂಡ ಮಾಹಿತಿಯನ್ನು ಓಲಾ ಹಂಚಿಕೊಂಡಿದೆ. ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಈ ಬೈಕ್‌ಗಳ ಮೇಲೆ ಕೆಲಸ ನಡೆಯುತ್ತಿದೆ ಎಂದು ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ (Technology News In Kannada).  

Written by - Nitin Tabib | Last Updated : Aug 15, 2023, 10:31 PM IST
  • ನೀವು ಆಗಸ್ಟ್ 21 ರೊಳಗೆ ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿದರೆ,
  • ಕಂಪನಿಯು ಭಾರಿ ಕೊಡುಗೆಗಳನ್ನು ನೀಡುತ್ತಿದ್ದು, ಅದರ ಅಡಿಯಲ್ಲಿ ನೀವು ರೂ 10,000 ಉಳಿಸಬಹುದು.
  • ಆಫರ್ ಬೆಲೆಯಲ್ಲಿ, ನೀವು S1X+ ಅನ್ನು ರೂ 99,999, S1X (2kwh) ರೂ 79,999, S1X (3kwh) ರೂ 89,999 ನಲ್ಲಿ ಖರೀದಿಸಬಹುದು.
ಸ್ವಾತಂತ್ರ್ಯೋತ್ಸವಾದ ಅಂಗವಾಗಿ ತನ್ನ ಗ್ರಾಹಕರಿಗೆ ಭಾರಿ ಉಡುಗೊರೆ ನೀಡಿದ ಓಲಾ, ಏಕಕಾಲಕ್ಕೆ 5 ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! title=

ಬೆಂಗಳೂರು: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ದಿಗ್ಗಜ ಓಲಾ ಎಲೆಕ್ಟ್ರಿಕ್ ಇಂದು S1X, S1X+ ಮತ್ತು ಎರಡನೇ ತಲೆಮಾರಿನ Ola S1 Pro ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ, ಆಗಸ್ಟ್ 15 ರ ಸಂದರ್ಭದಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ಕಂಪನಿ ವಿಸ್ತರಿಸಿದೆ. ಕಂಪನಿಯು S1 ಪ್ರೊಗೆ 2 ಹೊಸ ಬಣ್ಣ ರೂಪಾಂತರಗಳನ್ನು ಸೇರಿಸಿದೆ (Technology News In Kannada). ಹೊಸ Ola S1 Pro 0 ರಿಂದ 40 km/h ವೇಗವನ್ನು 2.6 ಸೆಕೆಂಡುಗಳಲ್ಲಿ ಪಡೆಯಬಹುದು. ಮತ್ತು ಇದರ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ. ಹೊಸ Ola S1 Pro 11 KW ಮೋಟಾರ್ ಅನ್ನು ಹೊಂದಿದೆ, ಜೊತೆಗೆ ಅದರ ವ್ಯಾಪ್ತಿಯ ಬಗ್ಗೆ ಹೇಳುವ್ದುಯಾದರೆ, ಅದು 195 ಕಿ.ಮೀ.ಗಳಷ್ಟಾಗಿದೆ. 

ಕಳೆದ ತಿಂಗಳು ಬಿಡುಗಡೆಯಾದ S1 ಏರ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಎಂದು ಕಂಪನಿ ತಿಳಿಸಿದೆ. ಒಂದು ತಿಂಗಳೊಳಗೆ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ ಗಳನ್ನು ಅದು ಸಂಪಾದಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 0-40 ಕಿಮೀ ವೇಗವನ್ನು 3.3 ಸೆಕೆಂಡುಗಳಲ್ಲಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, S1Air ನ ಗರಿಷ್ಠ ವೇಗವು 90km/h ಆಗಿದೆ. ಮತ್ತು ಅದರ ಪ್ರಮಾಣೀಕೃತ ವ್ಯಾಪ್ತಿಯು 151 ಕಿ.ಮೀ. ಇದು 6 KW ಮೋಟಾರ್ ಹೊಂದಿದೆ. ಇದನ್ನು ವಿಶೇಷವಾಗಿ ನಗರ ಸಾರಿಗೆಗಾಗಿ ವಿನ್ಯಾಸಗೊಳಿಸಲಾಗಿದೆ.

ಹೊಸ ಸ್ಕೂಟರ್ S1X ಬಿಡುಗಡೆಯಾಗಿದೆ
ಕಂಪನಿಯು ಹೊಸ ಸ್ಕೂಟರ್ S1X ಅನ್ನು ಎರಡು ರೂಪಾಂತರಗಳಲ್ಲಿ ಅಂದರೆ  S1X ಮತ್ತು S1X + ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಹೊಸ ಮಲ್ಟಿ ಟೋನ್ ವಿನ್ಯಾಸದೊಂದಿಗೆ ಲಭ್ಯವಿರಲಿದೆ. ಇದರ ವ್ಯಾಪ್ತಿ 151 ಕಿ.ಮೀ ಆಗಿರುತ್ತದೆ. ಇದು 2 kwh ಮತ್ತು 3 kwh ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದೆ. ಈ ಸ್ಕೂಟರ್ 3.3 ಸೆಕೆಂಡುಗಳಲ್ಲಿ ಗಂಟೆಗೆ 0-40 ಕಿಮೀ ವೇಗವನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಇದರ ಬೂಟ್ ಸ್ಪೇಸ್ 34 ಲೀಟರ್ ಆಗಿದೆ. S1 Pro, S1 Air, S1X+, S1X, S1X (2kwh) ಅನ್ನು ಒಳಗೊಂಡಿರುವ ಕಂಪನಿಯ ಸಾಲಿನಲ್ಲಿ ಇದೀಗ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ.

ಬೆಲೆ ಎಷ್ಟು
ಎರಡನೇ ತಲೆಮಾರಿನ Ola S1 Pro ಬೆಲೆ ರೂ 1,47,499, S1 ಏರ್ ರೂ 1,19,999, S1X + ರೂ 1, 09,999, S1X (2kwh) ರೂ 89,999, S1X (3kwh) ರೂ 99,999 ಗಳಷ್ಟಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳಾಗಿವೆ.

ಈ ವಾರ ಈ ಸ್ಕೂಟರ್‌ಗಳ ಮೇಲೆ ಭಾರಿ ರಿಯಾಯಿತಿ
ನೀವು ಆಗಸ್ಟ್ 21 ರೊಳಗೆ ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿದರೆ, ಕಂಪನಿಯು ಭಾರಿ ಕೊಡುಗೆಗಳನ್ನು ನೀಡುತ್ತಿದ್ದು, ಅದರ ಅಡಿಯಲ್ಲಿ ನೀವು ರೂ 10,000 ಉಳಿಸಬಹುದು. ಆಫರ್ ಬೆಲೆಯಲ್ಲಿ, ನೀವು S1X+ ಅನ್ನು ರೂ 99,999, S1X (2kwh) ರೂ 79,999, S1X (3kwh) ರೂ 89,999 ನಲ್ಲಿ ಖರೀದಿಸಬಹುದು.

ವಿತರಣೆ ಯಾವಾಗ ಪ್ರಾರಂಭವಾಗುತ್ತದೆ?
ಎರಡನೇ ತಲೆಮಾರಿನ Ola S1 Pro ನ ಡೆಲಿವರಿಗಳು ಸೆಪ್ಟೆಂಬರ್ ಎರಡನೇ ವಾರದಿಂದ ಆರಂಭಗೊಳ್ಳಲಿವೆ, S1X+ ಸೆಪ್ಟೆಂಬರ್ ಅಂತ್ಯದ ವೇಳೆಗೆ ಮತ್ತು S1X ಡಿಸೆಂಬರ್‌ ವರೆಗೆ ವಿತರಣೆಯಾಗಲಿವೆ.

ಇದನ್ನೂ ಓದಿ-365 ದಿನಗಳವರೆಗೆ ನಿತ್ಯ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ನೀಡುವ ಅತ್ಯಂತ ಅಗ್ಗದ ಮೊಬೈಲ್ ರೀಚಾರ್ಜ್ ಪ್ಲಾನ್ ಇದು!

ಸಾಫ್ಟ್‌ವೇರ್ ನವೀಕರಣವನ್ನು ಪಡೆದುಕೊಂಡಿದೆ
ಕಂಪನಿಯು ತನ್ನ ಸ್ಕೂಟರ್‌ಗಳಿಗಾಗಿ Moves OS4 ಸಾಫ್ಟ್‌ವೇರ್ ನವೀಕರಣವನ್ನು ಬಿಡುಗಡೆ ಮಾಡಿದೆ, ಅದರ ಬೀಟಾ ಆವೃತ್ತಿಯು ಸೆಪ್ಟೆಂಬರ್ 15 ರಿಂದ ಹೊರಬರಲಿದೆ. ಈ ಸಾಫ್ಟ್‌ವೇರ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ರಿಲಯನ್ಸ್ ಜಿಯೋನಿಂದ ದೇಶದ ಅತ್ಯಂತ ಅಗ್ಗದ 5ಜಿ ಫೋನ್ ಬಿಡುಗಡೆ, ವೈಶಿಷ್ಟ್ಯ-ಬೆಲೆ ಮಾಹಿತಿ ಇಲ್ಲಿದೆ!

ಕಂಪನಿಯು ಭವಿಷ್ಯದ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ
ಕ್ರೂಸರ್, ಸಾಹಸ, ರೋಡ್‌ಸ್ಟರ್ ಬೈಕ್‌ಗಳನ್ನು ಒಳಗೊಂಡಿರುವ ಭವಿಷ್ಯದ ಬೈಕ್‌ಗಳ ಬಗ್ಗೆಯೂ ಓಲಾ ಬಹಿರಂಗಪಡಿಸಿದೆ. ಕಂಪನಿಯು ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಈ ಬೈಕ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News