Tata Play Fiber vs Jio Fiber vs Airtel Xstream 1Gbps Plan: ದೇಶದ ಪ್ರಮುಖ DTH ಸೇವಾ ಪೂರೈಕೆದಾರ, ಟಾಟಾ ಪ್ಲೇ (Tata Play), ಹಿಂದೆ ಟಾಟಾ ಸ್ಕೈ (Tata Sky) ಆಗಿತ್ತು, ಇದೀಗ ಅದು ತನ್ನ ಗ್ರಾಹಕರಿಗೆ ಅತ್ಯುತ್ತಮ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಸಹ ನೀಡುತ್ತದೆ. ಟಾಟಾ ಪ್ಲೇ ಫೈಬರ್ ಹೆಸರಿನ ಈ ಸೇವೆಯಲ್ಲಿ ಹಲವು ಯೋಜನೆಗಳನ್ನು ಸೇರಿಸಲಾಗಿದೆ. ಇಂದು ನಾವು 1Gbps ಬ್ರಾಡ್ಬ್ಯಾಂಡ್ ಪ್ಲಾನ್ (Internet Plan) ಕುರಿತು ಮಾಹಿತಿಯನ್ನು ನೀಡಲಿದ್ದೇವೆ, ಇದರಲ್ಲಿ ನಿಮಗೆ ಟಾಟಾ ಪ್ಲೇ ಫೈಬರ್ ಬ್ರಾಡ್ ಬ್ಯಾಂಡ್ ಯೋಜನೆಯ ಜೊತೆಗೆ ರಿಲಯನ್ಸ್ ಜಿಯೋ (Reliance Jio) ಮತ್ತು ಏರ್ಟೆಲ್ (Airtel) ಯೋಜನೆಗಳ ಬಗ್ಗೆಯೂ ಕೂಡ ಮಾಹಿತಿ ಶಾಮೀಲಾಗಿದೆ. ಟಾಟಾ ಪ್ಲೇನ ಈ ಯೋಜನೆಯು ಇತರ ಕಂಪನಿಗಳ ಯೋಜನೆಗಳಿಗಿಂತ ಹೇಗೆ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಟಾಟಾ ಪ್ಲೇ ಫೈಬರ್ 1Gbps ಯೋಜನೆ
ಮೊದಲಿಗೆ, ಟಾಟಾ ಪ್ಲೇ ಫೈಬರ್ನ ಯೋಜನೆಯ ಬಗ್ಗೆ ಮಾತನಾಡೋಣ, ಇದು ತಿಂಗಳಿಗೆ 3,600 ರೂ. ಯೋಜನೆಯಾಗಿದೆ. ಈ ಯೋಜನೆಯಲ್ಲಿ, ನೀವು 1 Gbps ವೇಗದಲ್ಲಿ 3,300GB ಅಥವಾ 3.3TB ಇಂಟರ್ನೆಟ್ ಅನ್ನು ಪಡೆಯುತ್ತೀರಿ, ಇದರ ನಂತರ ನಂತರ ಇಂಟರ್ನೆಟ್ ವೇಗವು 3Mbps ಗೆ ಇಳಿಕೆಯಾಗುತ್ತದೆ. ಈ ಯೋಜನೆ ವಿಭಿನ್ನ ಮಾನ್ಯತೆಗಳೊಂದಿಗೆ ಲಭ್ಯವಿದೆ. ನೀವು ಈ ಯೋಜನೆಯನ್ನು ಒಂದು ತಿಂಗಳ ಬದಲಿಗೆ ಮೂರು ತಿಂಗಳಿಗಾಗಿ ತೆಗೆದುಕೊಂಡರೆ, ನೀವು 10,800 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಆರು ತಿಂಗಳ ಅವಧಿಯ ಯೋಜನೆಗೆ 19,800 ರೂ.ಪಾವಗಿಸಬೇಕು.
ಜಿಯೋ ಫೈಬರ್ನ 1Gbps ಯೋಜನೆ
Jio ನ ಯೋಜನೆಯಲ್ಲಿ, ನಿಮಗೆ 3.3TB ಅಥವಾ 3,300GB ಇಂಟರ್ನೆಟ್ ನೀಡಲಾಗುತ್ತದೆ ಮತ್ತು ನೀವು ಈ ಯೋಜನೆಗೆ ತಿಂಗಳಿಗೆ 3,999 ರೂ.ಪಾವತಿಸಬೇಕು. ಈ ಯೋಜನೆಯಲ್ಲಿ, ನೀವು ಒಂದು ವರ್ಷದವರೆಗೆ Amazon Prime ವೀಡಿಯೊಗೆ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ, Netflix ಮತ್ತು Disney + Hotstar ಗೆ ಪ್ರವೇಶ ಮತ್ತು ಇತರ OTT ಪ್ಲಾಟ್ಫಾರ್ಮ್ಗಳ ಸದಸ್ಯತ್ವವನ್ನು ಪಡೆಯುತ್ತೀರಿ.
ಇದನ್ನೂ ಓದಿ-Plastic in Lungs: ಮಾನವನ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್, ಹೊಸ ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
ಏರ್ಟೆಲ್ ಎಕ್ಸ್ಸ್ಟ್ರೀಮ್ 1Gbps ಯೋಜನೆ
ಏರ್ಟೆಲ್ನ ಈ 'ಇನ್ಫಿನಿಟಿ ಪ್ಲಾನ್' ಒಂದು ತಿಂಗಳಿಗೆ 1Gbps ಹೈಸ್ಪೀಡ್ ಇಂಟರ್ನೆಟ್ ಡೇಟಾವನ್ನು ರೂ 3,999 ಬೆಲೆಗೆ ನೀಡುತ್ತಿದೆ. ಈ ಯೋಜನೆಯಲ್ಲಿ 3500GB ಅಥವಾ 3.5TB ಡೇಟಾದೊಂದಿಗೆ, ನೀವು Amazon Prime Video ಮತ್ತು Disney + Hotstar ನಂತಹ ಪ್ರಮುಖ OTT ಪ್ಲಾಟ್ಫಾರ್ಮ್ಗಳಿಗೆ ಚಂದಾದಾರಿಕೆಗಳನ್ನು ಪಡೆಯುತ್ತೀರಿ ಮತ್ತು ವಿಂಕ್ ಸಂಗೀತಕ್ಕೆ ಪ್ರವೇಶವನ್ನು ಸಹ ಪಡೆಯುವಿರಿ.
ಇದನ್ನೂ ಓದಿ-Samsung Security Alert: ನಿಮ್ಮ ಸ್ಮಾರ್ಟ್ ಫೋನ್ ಕೂಡ ಹ್ಯಾಕ್ ಆಗಬಹುದು, ತಕ್ಷಣ ಈ ಕೆಲಸ ಮಾಡಿ
ಈ ಯೋಜನೆಗಳಲ್ಲಿ ಯಾವುದು ನಿಮಗೆ ಉತ್ತಮವಾಗಿದೆ ಮತ್ತು ಯಾವ ಯೋಜನೆಯಲ್ಲಿ ನೀವು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬುದನ್ನು ಈಗ ನೀವು ನಿರ್ಧರಿಸಿಕೊಳ್ಳಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.