ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡುತ್ತದೆ ಈ ಡಿವೈಸ್ ! ಅಳವಡಿಸಿದ ಒಂದು ವಾರದಲ್ಲೇ ಪರಿಣಾಮ

Bill Reducing Tips: ಈ ಗ್ಯಾಜೆಟ್ ಗಳನ್ನು ಬಳಸುವ  ಮೂಲಕ ಗಣನೀಯ ಪ್ರಮಾಣದಲ್ಲಿ ವಿದುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.   

Written by - Ranjitha R K | Last Updated : Apr 17, 2023, 03:00 PM IST
  • ಇದೀಗ ಬೇಸಿಗೆ ಆರಂಭವಾಗಿದೆ.
  • ಹಗಲಿರುಳು ಫ್ಯಾನ್, ಕೂಲರ್ ರನ್ ಆಗುತ್ತಲೇ ಇರುತ್ತದೆ.
  • ವಿದುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಈ ಗ್ಯಾಜೆಟ್ .
ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಮಾಡುತ್ತದೆ ಈ ಡಿವೈಸ್ ! ಅಳವಡಿಸಿದ ಒಂದು ವಾರದಲ್ಲೇ ಪರಿಣಾಮ  title=

Bill Reducing Tips : ಇದೀಗ ಬೇಸಿಗೆ ಆರಂಭವಾಗಿದೆ. ಹಗಲಿರುಳು ಫ್ಯಾನ್, ಕೂಲರ್ ರನ್ ಆಗುತ್ತಲೇ ಇರುತ್ತದೆ. ಇದರ ಜೊತೆ ವಿದ್ಯುತ್ ಬಿಲ್ ಜಾಸ್ತಿ ಬರುತ್ತದೆ ಎನ್ನುವ ಚಿಂತೆಯೂ ಸತಾಯಿಸುತ್ತದೆ.  ಆದರೆ ನಾವು ಇಲ್ಲಿ ಹೇಳುವ ಡಿವೈಸ್ ಗಳನ್ನು ಬಳಸುವ ಮೂಲಕ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಗ್ಯಾಜೆಟ್‌ಗಳನ್ನು ಬಳಸುವುದು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ಗ್ಯಾಜೆಟ್ ಬಳಕೆಯ ಮೂಲಕ ಗಣನೀಯ ಪ್ರಮಾಣದಲ್ಲಿ ವಿದುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಸ್ಮಾರ್ಟ್ ಪ್ಲಗ್‌ಗಳು - ಮನೆಯಲ್ಲಿರುವ ವಿದ್ಯುತ್ ಉಪಕರಣಗಳನ್ನು ಸುಲಭವಾಗಿ ಆನ್ ಅಥವಾ ಆಫ್ ಮಾಡಲು ಸ್ಮಾರ್ಟ್ ಪ್ಲಗ್‌ಗಳು ಅವಕಾಶ ಮಾಡಿಕೊಡುತ್ತವೆ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇತರ ಸ್ಮಾರ್ಟ್ ಸಾಧನದ ಮೂಲಕ ಅವುಗಳನ್ನು ನಿಯಂತ್ರಿಸಬಹುದು. ಟೈಮರ್ ಹೊಂದಿಸುವ ಮೂಲಕ ಅವುಗಳನ್ನು ಆನ್ ಮತ್ತು ಆಫ್ ಮಾಡಬಹುದು. ಇದರೊಂದಿಗೆ ವಿದ್ಯುಚ್ಛಕ್ತಿಯನ್ನು ಉಳಿಸಬಹುದು. 

ಇದನ್ನೂ ಓದಿ : ಹೊಸ ಸೂಪರ್ ಕ್ಯಾರಿ ಬಿಡುಗಡೆ ಮಾಡಿದ ಮಾರುತಿ ! ಬೆಲೆ ಕೇವಲ 5.15 ಲಕ್ಷ !

ಪವರ್ ಕಟ್ ಸ್ವಿಚ್‌ಗಳು - ಪವರ್ ಕಟ್ ಸ್ವಿಚ್‌ಗಳನ್ನು ಬಳಸಿಕೊಂಡು ವಿದ್ಯುತ್ ಅನ್ನು ಉಳಿಸಬಹುದು. ಇದರ ಮೂಲಕ ವಿದ್ಯುತ್ ಅನ್ನು ಆಫ್ ಮಾಡಿದಾಗ,  ಸಂಪೂರ್ಣ ಬಂದ್ ಆಗುತ್ತದೆ. ಈ ಮೂಲಕ ವಿದ್ಯುತ್ ಉಳಿಯುತ್ತದೆ. 

ಸ್ಮಾರ್ಟ್ ಥರ್ಮೋಸ್ಟಾಟ್ - ಸ್ಮಾರ್ಟ್ ಥರ್ಮೋಸ್ಟಾಟ್ ಗಳು ವಿದ್ಯುತ್ ಉಳಿತಾಯಕ್ಕೆ ತುಂಬಾ ಉಪಯುಕ್ತವಾಗಿವೆ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಈ ಸಾಧನಗಳನ್ನು ನಿಯಂತ್ರಿಸಬಹುದು ಮತ್ತು  ಮನೆಯ ತಾಪಮಾನವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದನ್ನು  ಎಸಿಗೂ ಬಳಸಲಾಗುತ್ತದೆ.

ಸೌರ ಫಲಕ - ಸೋಲಾರ್ ಪ್ಯಾನೆಲ್ ಶಕ್ತಿಯನ್ನು ಸೌರ ಶಕ್ತಿಯನ್ನಾಗಿ ಪರಿವರ್ತಿಸಲು ಸೌರ ಫಲಕಗಳನ್ನು ಬಳಸಲಾಗುತ್ತದೆ. ಅವರು ವಿದ್ಯುಚ್ಛಕ್ತಿಯೊಂದಿಗೆ ಗ್ರಿಡ್ ಆಫ್ ಕೆಲಸವನ್ನು ಕೂಡಾ ನಿರ್ವಹಿಸುತ್ತದೆ. ಹೀಗಾಗಿ ವಿದ್ಯುತ್ ಉಳಿತಾಯವಾಗುತ್ತದೆ. ಮನೆಯ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸೌರ ಫಲಕಗಳು ಸಹಾಯ ಮಾಡುತ್ತವೆ.

ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸೆಟ್ಟಿಂಗ್ ಚೇಂಜ್ ಮಾಡಿದ್ರೆ ನೆಟ್‌ವರ್ಕ್ ಇಲ್ಲದಿದ್ರೂ ಕಾಲ್ ಮಾಡಬಹುದು!

ಎನರ್ಜಿ ಸೇವಿಂಗ್ ಲೈಟ್ - ಎನರ್ಜಿ ಸೇವಿಂಗ್ ಲೈಟ್ ಗಳು ಕಡಿಮೆ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸುವ ಬಲ್ಬ್ ಗಳಾಗಿವೆ. ಈ ಬಲ್ಬ್‌ಗಳನ್ನು ಬಳಸುವುದರಿಂದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು. ಈ ಮೂಲಕ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುತ್ತದೆ.

ಸ್ಮಾರ್ಟ್ ಅಪ್ಲಿಕೇಶನ್‌ಗಳು - ಕೆಲವು ಸ್ಮಾರ್ಟ್ ಅಪ್ಲಿಕೇಶನ್‌ಗಳು ನಿಮ್ಮ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್‌ಗಳ ಮೂಲಕ, ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು  ನಿಯಂತ್ರಿಸಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News