Smartphone Tips And Tricks: ಸ್ಮಾರ್ಟ್ ಫೋನ್ ಕಳೆದುಹೋದರೆ ತಕ್ಷಣ ನೀವು ಮಾಡಲೇ ಬೇಕಾದ ಕೆಲಸ ಇದು

ಸ್ಮಾರ್ಟ್ ಫೋನ್  ಇಂದು ನಮ್ಮ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಇದಿಲ್ಲದ ಬದುಕನ್ನು ಇಂದಿನ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳುವದು ಕೂಡಾ ಕೆಲವರಿಗೆ ಕಷ್ಟವಾಗಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್‌ಫೋನ್‌ನಲ್ಲಿ ಇಡುತ್ತಾರೆ.  

Written by - Ranjitha R K | Last Updated : Jul 30, 2021, 09:08 PM IST
  • ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್‌ಫೋನ್‌ನಲ್ಲಿ ಇಡುತ್ತಾರೆ
  • ಫೋನ್ ಕಳೆದುಹೋದರೆ ಕೂಡಲೇ ಈ ಕೆಲಸ ಮಾಡಿ
  • ತಪ್ಪಿದರೆ ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು
Smartphone Tips And Tricks: ಸ್ಮಾರ್ಟ್ ಫೋನ್ ಕಳೆದುಹೋದರೆ ತಕ್ಷಣ ನೀವು ಮಾಡಲೇ ಬೇಕಾದ ಕೆಲಸ ಇದು title=
ಸ್ಮಾರ್ಟ್ ಫೋನ್ ಕಳೆದುಹೋದರೆ ಕೂಡಲೇ ಈ ಕೆಲಸ ಮಾಡಿ (file photo)

ನವದೆಹಲಿ : ಸ್ಮಾರ್ಟ್ ಫೋನ್  ಇಂದು ನಮ್ಮ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಇದಿಲ್ಲದ ಬದುಕನ್ನು ಇಂದಿನ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳುವದು ಕೂಡಾ ಕೆಲವರಿಗೆ ಕಷ್ಟವಾಗಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್‌ಫೋನ್‌ನಲ್ಲಿ (Smart phone) ಇಡುತ್ತಾರೆ. ಹಾಗೆಯೇ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಲವು ವಿವರಗಳು ಸ್ಮಾರ್ಟ್ ಫೋನಿನಲ್ಲಿ ಅಡಗಿರುತ್ತವೆ. ಎಲ್ಲಾ ಪೇಮೆಂಟ್ ಗಳು ಕೂಡಾ ಸ್ಮಾರ್ಟ್‌ಫೋನ್ ಮೂಲಕವೇ ಆಗಿ ಬಿಡುತ್ತದೆ. ಹೀಗಿರುವಾಗ, ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ ದೊಡ್ಡ ತೊಂದರೆಗೆ ಸಿಲುಕಬಹುದು. ಏಕೆಂದರೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಂಕ್ ವಿವರಗಳನ್ನು (Bank Detail) ಬಳಸಿಕೊಂಡು ವಂಚನೆಗೆ ಒಳಗಾಗಬಹುದು. ಈ ಅಪಾಯವನ್ನು ತಪ್ಪಿಸಲು ಬಯಸುವುದಾದರೆ, ಸ್ಮಾರ್ಟ್ಫೋನ್ ಕಳೆದುಹೋದ ವನ್ನು ಮಾಡಬೇಕು. 

ಸಿಮ್ ಕಾರ್ಡ್ ಅನ್ನು ತಕ್ಞಣ ಬ್ಲಾಕ್ ಮಾಡಿ : 
ಸ್ಮಾರ್ಟ್ಫೋನ್ (Smart phone) ಕಳೆದುಹೋದ ಅಥವಾ ಕಳವಾದ  ನಂತರ, ಮೊದಲು ಮಾಡಬೇಕಾಗಿರುವುದು ನಿಮ್ಮ ಸಿಮ್ ಕಾರ್ಡ್ (Sim card) ಅನ್ನು ಬ್ಲಾಕ್ ಮಾಡುವುದು. ಹೀಗೆ ಮಾಡುವುದರಿಂದ ಫೋನ್ ಪಡೆದ ವ್ಯಕ್ತಿ, ನಿಮ್ಮ ಬ್ಯಾಂಕ್ (Bank) ವಿವರ ಪಡೆದು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಒಟಿಪಿ (OTP) ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಸಿಮ್ ಬ್ಲಾಕ್ (SIM card block) ಮಾಡಿ ನಂತರ ಅದೇ ನಂಬರ್ ಅನ್ನು  ಹೊಸ ಸಿಮ್ ನಲ್ಲಿ ಆಕ್ಟಿವ್ ಮಾಡಿಕೊಳ್ಳಬಹುದು.

ಇದನ್ನೂ ಓದಿ : ನಂಬರ್ ಸೇವ್ ಮಾಡದೆಯೇ ವಾಟ್ಸ್ ಆಪ್ ನಲ್ಲಿ ಮೆಸೇಜ್ ಮಾಡಲು ಈ ಟ್ರಿಕ್ ಬಳಸಿ

ಮೊಬೈಲ್ ಬ್ಯಾಂಕಿಂಗ್ ಅನ್ನು ಬ್ಲಾಕ್ ಮಾಡುವುದು ಅವಶ್ಯಕ :
ಲ್ಯಾಪ್ಟಾಪ್ ಅಥವಾ ಇನ್ನಾವುದೇ ಫೋನಿನ ಸಹಾಯದಿಂದ, ಮೊಬೈಲ್ ಬ್ಯಾಂಕಿಂಗ್ (Mobile Banking) ಅನ್ನು ಬ್ಲಾಕ್ ಮಾಡಬೇಕಾಗುತ್ತದೆ.  ಇದರಿಂದ ನಿಮ್ಮ ಖಾತೆಯನ್ನು ಯಾರೂ ದುರುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಲ್ಲದೆ, ಬ್ಯಾಂಕ್‌ಗೆ ಕರೆ ಮಾಡುವ ಮೂಲಕ ಕೂಡಾ, ಅಕೌಂಟ್ ಬ್ಲಾಕ್ ಮಾಡಬಹುದು. 

ಬ್ಯಾಂಕ್ ಖಾತೆಯಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ :
ಬ್ಯಾಂಕ್ ಅಕೌಂಟ್ (Bank account) ಬ್ಲಾಕ್ ಮಾಡಿದ ನಂತರವೂ ನಿಮ್ಮ ಬ್ಯಾಂಕ್ ಖಾತೆಗೆ ಆಡ್ ಮಾಡಲಾಗಿರುವ ಮೊಬೈಲ್ ನಂಬರ್ ಅನ್ನು ತಕ್ಷಣ ಬದಲಾಯಿಸಬೇಕು. 

ಮೊಬೈಲ್ ವ್ಯಾಲೆಟ್ ಆಕ್ಸೆಸ್ ಬ್ಲಾಕ್ ಮಾಡಿ : 
ಫೋನ್ ಕಳವಾದರೆ ಅಥವಾ ಕಳೆದುಹೋದರೆ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ವ್ಯಾಲೆಟ್‌ಗೆ (Mobile Wallet) ಆಕ್ಸೆಸ್ ಅನ್ನು ತಕ್ಷಣ ಬ್ಲಾಕ್ ಮಾಡಬೇಕು. ಏಕೆಂದರೆ ಪೇಮೆಂಟ್ ಗಾಗಿ, ನೀವು ಅದನ್ನು ಅನೇಕ ಕಡೆ ಬಳಸಿರುತ್ತೀರಿ. ನಿಮ್ಮ ಬ್ಯಾಂಕ್ ವಿವರಗಳು ಹಾಗೆಯೇ ಉಳಿಯುತ್ತದೆ. 

ಇದನ್ನೂ ಓದಿ : Realme ಯಲ್ಲಿ 10 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಫೋನ್ ಗಳು, ಲಾಂಗ್ ಬ್ಯಾಟರಿ, ಉತ್ತಮ ಕ್ಯಾಮೆರಾ!

ಪೊಲೀಸ್ ಠಾಣೆಗೆ ದೂರು ಸಲ್ಲಿಸಿ : 
ನಿಮ್ಮ ಮೊಬೈಲ್ ಕಳುವಾಗಿದ್ದರೆ, ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ಆದ್ದರಿಂದ ಯಾರಾದರೂ ಅದನ್ನು ದುರುಪಯೋಗಪಡಿಸಿಕೊಂಡರೆ, ನಿಮಗೆ ತೊಂದರೆಯಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News