Smart Clothes Dryer: ಕೊರೆಯುವ ಚಳಿಯಲ್ಲೂ ಒದ್ದೆ ಬಟ್ಟೆ ನಿಮಿಷಗಳಲ್ಲಿ ಒಣಗುತ್ತದೆ!

Smart Clothes Dryer:  Xiaomi ಒಂದು ಅದ್ಭುತ ಉತ್ಪನ್ನವನ್ನು ತಂದಿದೆ. ಎಂತಹ ಕೊರೆಯುವ ಚಳಿಯ ಮಧ್ಯೆಯೂ ಇದು ನಿಮಿಷಗಳಲ್ಲಿ ಬಟ್ಟೆಗಳನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಈ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದು ಸಾಕಷ್ಟು ಜನಪ್ರಿಯವಾಗಿದೆ. ಇದು ಇಲ್ಲಿಯವರೆಗೆ ಒಂದು ಮಿಲಿಯನ್ ಯೂನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ.  

Written by - Chetana Devarmani | Last Updated : Dec 2, 2022, 03:56 PM IST
  • Xiaomi ಒಂದು ಅದ್ಭುತ ಉತ್ಪನ್ನವನ್ನು ತಂದಿದೆ
  • ಕೊರೆಯುವ ಚಳಿಯಲ್ಲೂ ಒದ್ದೆ ಬಟ್ಟೆ ನಿಮಿಷಗಳಲ್ಲಿ ಒಣಗುತ್ತದೆ!
  • ಚಳಿಗಾಲದಲ್ಲಿ ಈ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ
Smart Clothes Dryer: ಕೊರೆಯುವ ಚಳಿಯಲ್ಲೂ ಒದ್ದೆ ಬಟ್ಟೆ ನಿಮಿಷಗಳಲ್ಲಿ ಒಣಗುತ್ತದೆ!   title=
Clothes Dryer

Xiaomi MIJIA Smart Clothes Dryer: ಚಳಿಗಾಲದಲ್ಲಿ ದೊಡ್ಡ ಸಮಸ್ಯೆ ಎಂದರೆ ಬಟ್ಟೆ ಒಣಗಿಸುವುದು. ಸೂರ್ಯನ ಬೆಳಕಿನ ಕೊರತೆಯಿಂದಾಗಿ, ಬಟ್ಟೆ ಒದ್ದೆಯಾಗಿ ಉಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಟ್ಟೆಗಳನ್ನು ತ್ವರಿತವಾಗಿ ಒಣಗಿಸಲು ಪರದಾಡಬೇಕಾಗುತ್ತದೆ. ಬಟ್ಟೆರಯನ್ನು ನಿಮಿಷಗಳಲ್ಲೇ ಡ್ರೈ ಮಾಡುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬರಲಾರಂಭಿಸಿವೆ. Xiaomi 2020 ರಲ್ಲಿ ಮೊದಲ ಬಾರಿಗೆ MIJIA Smart Clothes Dryer ಅನ್ನು ಬಿಡುಗಡೆ ಮಾಡಿತು. ಇದು ಸಾಕಷ್ಟು ಜನಪ್ರಿಯವಾಯಿತು. ಇದು ಇಲ್ಲಿಯವರೆಗೆ ಒಂದು ಮಿಲಿಯನ್ ಯೂನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ.  

ಇದನ್ನೂ ಓದಿ : ಮನೆಯಲ್ಲಿ ಈ ಡಿವೈಸ್ ಅಳವಡಿಸಿದರೆ ವರ್ಷವಿಡೀ ಕರೆಂಟ್ ಬಿಲ್ ಬರೋದೇ ಇಲ್ಲ!

Xiaomi MIJIA Smart Clothes Dryer ಬೆಲೆ :

ಏಪ್ರಿಲ್ 2020 ರಂದು, Xiaomi ಕ್ರೌಡ್‌ಫಂಡಿಂಗ್ ಮೂಲಕ ಮೊದಲ ಬಾರಿಗೆ MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಅನ್ನು ಪರಿಚಯಿಸಿತು. ಕಂಪನಿಯು ಇದನ್ನು ಡಿಸೆಂಬರ್ 2021 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ವಿಶೇಷವೆಂದರೆ 1 ಗಂಟೆಯಲ್ಲಿ 10 ಬಟ್ಟೆಗಳನ್ನು ಒಣಗಿಸುತ್ತದೆ. MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಪ್ರೊ ಅನ್ನು 1,199 ಯುವಾನ್ (ರೂ. 13,806) ಗೆ ಬಿಡುಗಡೆ ಮಾಡಲಾಗಿದೆ.

Xiaomi MIJIA Smart Clothes Dryer ವಿಶೇಷಣಗಳು : 

ಇದು ತುಂಬಾ ತೆಳ್ಳಗಿರುವ ಒಂದು ಸಾಧನವಾಗಿದೆ. ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಒಣಗಿಸುತ್ತದೆ. ಅದನ್ನು ಬಾಲ್ಕನಿಯಲ್ಲಿ ಇಡುವ ಅಗತ್ಯವಿಲ್ಲ. ಮನೆಯೊಳಗೆ ಯಾವುದೇ ಛಾವಣಿಯ ಮೇಲೆ ಅಳವಡಿಸಬಹುದಾಗಿದೆ. ಅದು ತನ್ನಿಂದ ತಾನೇ ಬಟ್ಟೆಗಳನ್ನು ಒಣಗಿಸುತ್ತದೆ. ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಅನ್ನು ಸ್ವಲ್ಪ ತಳ್ಳುವ ಮೂಲಕ ಕೆಳಕ್ಕೆ ಇಳಿಸಬಹುದು. ರಾಡ್‌ಗಳನ್ನು ಯಾವುದೇ ಕೋನದಲ್ಲಿ ಹೊಂದಿಸಬಹುದು.

ಇದನ್ನೂ ಓದಿ : Smartphone Tips: ನಿಮ್ಮ ಸ್ಮಾರ್ಟ್ ಫೋನ್ ನ ಈ ಭಾಗವನ್ನು ಮರೆತೂ ಕೂಡ ಟಚ್ ಮಾಡಬೇಡಿ... ಇಲ್ದಿದ್ರೆ!

MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ವೈಶಿಷ್ಟ್ಯಗಳು : 

ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ರಿಮೋಟ್ ಕಂಟ್ರೋಲ್ ಅನ್ನು ರಾಕ್ ಅನ್ನು ತೆಗೆದುಹಾಕಲು ಮತ್ತು ಲೈಟ್‌ ಆನ್ ಮಾಡಲು ಬಳಸಲಾಗುತ್ತದೆ. MIJIA ಅಪ್ಲಿಕೇಶನ್ ಸ್ಮಾರ್ಟ್ ನಿಯಂತ್ರಣ ಮತ್ತು XiaoAI ಧ್ವನಿ ನಿಯಂತ್ರಣದೊಂದಿಗೆ ಉತ್ಪನ್ನಗಳನ್ನು ನಿಯಂತ್ರಿಸಬಹುದು. MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಅನ್ನು ಚೀನಾದ ಹೊರಗೆ ಮಾರಾಟ ಮಾಡಲಾಗುವುದಿಲ್ಲ. Xiaomi ಶೀಘ್ರದಲ್ಲೇ ಈ ಉತ್ಪನ್ನವನ್ನು ಜಾಗತಿಕವಾಗಿ ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News