ಬೆಂಗಳೂರು : ಸ್ಟಾರ್ಟ್-ಅಪ್ ಸಂಸ್ಥೆಯಾದ ಸಿಂಪಲ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರ ತಂದಿದೆ. ತನ್ನ ಪ್ರಪ್ರಥಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ. ಆಗಸ್ಟ್1 5, 2021ರಂದು ಜಾಗತಿಕವಾಗಿ ಈ ಸ್ಕೂಟರ್ ಅನ್ನು ಅನಾವರಣಗೊಳಿಸಲಾಗಿತ್ತು. ಇದಾದ ನಂತರ ಸ್ವೀಕರಿಸಿದ ಅಭಿಪ್ರಾಯ ಮಾಹಿತಿಯ ಆಧಾರದ ಮೇಲೆ ಅನೇಕ ಸುಧಾರನೆಗಳನ್ನು ಮಾಡಿ ಅಂತಿಮವಾಗಿ ಈಗ ಭಾರತೀಯ ರಸ್ತೆಗಳ ಮೇಲೆ ಓಡುವುದಕ್ಕೆ ಸಿದ್ಧವಾಗಿದೆ ನಿಂತಿದೆ Simple ONE.
ಬೆಂಗಳೂರಿನಲ್ಲಿ ಬಿಡುಗಡೆ :
Simple ONE ಕೇವಲ 18 ತಿಂಗಳುಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಪ್ರೀ ಬುಕಿಂಗ್ಗಳನ್ನು ಪಡೆದುಕೊಂಡಿದೆ. ಅಂದರೆ ಈ ಸ್ಕೂಟರ್ ಗೆ ಗ್ರಾಹಕರಿಂದ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ, ಅಧಿಕೃತ ಲಾಂಛನದೊಂದಿಗೆ, ಸಂಸ್ಥೆಯು ಬೆಂಗಳೂರಿನಲ್ಲಿ ಈ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಗ್ರಾಹಕರಿಗೆ ಸ್ಕೂಟರ್ ಗಳನ್ನು ಡೆಲಿವರಿ ಮಾಡುವ ಯೋಜನೆಗಳನ್ನು ಹೊಂದಿದೆ. ಜೊತೆಗೆ ಮುಂದಿನ 12 ತಿಂಗಳುಗಳಲ್ಲಿ ತನ್ನ ರೀಟೇಲ್ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ.
ಇದನ್ನೂ ಓದಿ : ಬಲೆನೋಗೆ ಪರ್ಯಾಯ ಈ ಕಾರು ! ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ ಇರುವ ಈ ಕಾರಿನ ಬೆಲೆ ಕೂಡಾ ಕಡಿಮೆ
Simple ONE ಬೆಲೆ :
Simple ONE ಎನ್ನುವ ಈ ಸ್ಕೂಟರ್ ನ ಆರಂಭಿಕ ಬೆಲೆ 1,45,000 ರೂಪಾಯಿಯಿಂದ 1,58,000 ರೂಪಾಯಿವರೆಗೆ ಇರಲಿದೆ. ಈ ಬೆಲೆಯು 750W ಚಾರ್ಜರ್ ಅನ್ನು ಕೂಡಾ ಒಳಗೊಂಡಿರುತ್ತದೆ.
Simple ONE ವೈಶಿಷ್ಟ್ಯತೆಗಳು :
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 4.5 kw ಪವರ್ ಫುಲ್ ಮೋಟರ್ ಅನ್ನು ಬಳಸುತ್ತದೆ. ಆದ್ದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 105 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಸ್ಕೂಟರ್ನ ಮೋಟಾರ್ 72 ಎನ್ಎಂ ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. Simple ONE ಈ ವರ್ಗದಲ್ಲೇ ಅತಿವೇಗದ E2W ಆಗಿದ್ದು, ಗಂಟೆಗೆ 0 ರಿಂದ 40 ಕಿಮೀ ವೇಗವನ್ನು ತಲುಪಲು 2.77 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದು 4.8 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಸ್ಕೂಟರ್ ನಿಮಗೆ 236 ಕಿಮೀ ವರೆಗೆ ರೇಂಜ್ ನೀಡುತ್ತದೆ.
ಇದನ್ನೂ ಓದಿ :ಬಿಸಿಲ ಬೇಗೆ ಕಡಿಮೆ ಮಾಡುತ್ತದೆ ಈ ಮಿನಿ ಎಸಿ ! ಬೆಲೆ ಕೇವಲ 990 ರೂಪಾಯಿ
ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ :
ಹೊಸ ಸಿಂಪಲ್ ಒನ್ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಆದರೆ ಇದು ನಾಲ್ಕು ಬಣ್ಣಗಳಲ್ಲಿ ಗ ಗ್ರಾಹಕರ ಮನಸೂರೆ ಗೊಳ್ಳಲಿದೆ. ಹೌದು ಈ ಇವಿ ಅಜುರೆ ಬ್ಲೂ, ಬ್ರೆಜೆನ್ ಬ್ಲಾಕ್, ರೆಡ್ ಮತ್ತು ಗ್ರೇಸ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
ಇನ್ನು ಸಮಾರಂಭದಲ್ಲಿ ಮಾತನಾಡಿದ ಸಿಂಪಲ್ ಎನರ್ಜಿಯ ಸ್ಥಾಪಕ ಮತ್ತು ಸಿಇಒ ಶ್ರೀ ಸುಹಾಸ್ ರಾಜ್ಕುಮಾರ್, Simple ONE ಡೆಲಿವೆರಿಗೆ ಕಾಯುತ್ತಿರುವ ಗ್ರಾಹಕರಿಗೆ ಆದಷ್ಟು ಶೀಘ್ರದಲ್ಲಿ ವಾಹವನ್ನು ಪೂರೈಸಲಾಗುವುದು ಎಂದು ಹೇಳಿದ್ದಾರೆ. ಗ್ರಾಹಕರಿಗೆ ಕ್ಷಿಪ್ರವಾಗಿ ಡೆಲಿವರಿ ಮಾಡುವುದೇ ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ : ola ಇಂದಿನಿಂದಲೇ ಆರಂಭಿಸಿದೆ Premium Plus Service
ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಈ ಸ್ಟಾರ್ಟ್-ಅಪ್, ತಮಿಳುನಾಡಿನ ಶೂಲಗಿರಿಯಲ್ಲಿ Simple Vision 1.0,ಎಂಬ ತನ್ನ ಹೊಸ ಕಾರ್ಖಾನೆಯನ್ನು ಉದ್ಘಾಟಿಸಿದೆ. ವಾರ್ಷಿಕ ಸರಿಸುಮಾರು 5 ಲಕ್ಷ ಯೂನಿಟ್ಗಳ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಕಂಪನಿಯು ಇನ್ನೂ ಅನೇಕ ಉತ್ಪನ್ನಗಳನ್ನು ಹೊರ ತರಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.