ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ ಯಾವುದು ಗೊತ್ತಾ? ಇಲ್ಲಿನ ಜನರು ಒಂದೇ ಒಂದು ರುಪಾಯಿಯೂ Tax ಕಟ್ಟಲ್ಲ...

List of tax free state in india: ಸಿಕ್ಕಿಂ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲಿ ತೆರಿಗೆ ಮುಕ್ತ ಷರತ್ತು ಹಾಕಲಾಗಿತ್ತು. ಇದೇ ಕಾರಣದಿಂದ ಇಂದಿಗೂ ಈ ರಾಜ್ಯದ ಜನರು ತೆರಿಗೆ ಕಟ್ಟಲ್ಲ. 1975 ರ ವಿಲೀನ ಒಪ್ಪಂದ ಮತ್ತು ಸಂವಿಧಾನದ 371 ಎಫ್ ಅಡಿಯಲ್ಲಿ ಸಿಕ್ಕಿಂ ನಿವಾಸಿಗಳು ಈ ವಿಶೇಷ ವಿನಾಯಿತಿಯನ್ನು ಪಡೆದಿದ್ದಾರೆ.

Written by - Bhavishya Shetty | Last Updated : Sep 29, 2024, 07:27 PM IST
    • ಇಡೀ ದೇಶವೇ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತದೆ.
    • ರಾಜ್ಯದ ಜನರು ಒಂದೇ ಒಂದು ರೂಪಾಯಿ ಆದಾಯ ತೆರಿಗೆಯನ್ನು ಸಹ ಪಾವತಿಸಬೇಕಾಗಿಲ್ಲ
    • ಸಿಕ್ಕಿಂ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲಿ ತೆರಿಗೆ ಮುಕ್ತ ಷರತ್ತು ಹಾಕಲಾಗಿತ್ತು.
ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ ಯಾವುದು ಗೊತ್ತಾ? ಇಲ್ಲಿನ ಜನರು ಒಂದೇ ಒಂದು ರುಪಾಯಿಯೂ Tax ಕಟ್ಟಲ್ಲ... title=
tax free state in india

Indias Only Tax-Free State: ಇಡೀ ದೇಶವೇ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತದೆ. ಆದರೆ ಒಂದು ರಾಜ್ಯ ಮಾತ್ರ ಈ ಪ್ರಕ್ರಿಯೆಯಿಂದ ಮುಕ್ತವಾಗಿದೆ. ಆ ರಾಜ್ಯದ ಜನರು ಒಂದೇ ಒಂದು ರೂಪಾಯಿ ಆದಾಯ ತೆರಿಗೆಯನ್ನು ಸಹ ಪಾವತಿಸಬೇಕಾಗಿಲ್ಲ. ಆ ಏಕೈಕ ರಾಜ್ಯ ಸಿಕ್ಕಿಂ.

ಇದನ್ನೂ ಓದಿ: ಮೈದಾನದಲ್ಲೇ ಬೌಲರ್‌ನನ್ನು ನೆಲಕ್ಕೆಸೆದು ಹೊಡೆದ ಕ್ರಿಕೆಟಿಗ! ಶಾಕಿಂಗ್‌ ವಿಡಿಯೋ ವೈರಲ್

ಸಿಕ್ಕಿಂ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲಿ ತೆರಿಗೆ ಮುಕ್ತ ಷರತ್ತು ಹಾಕಲಾಗಿತ್ತು. ಇದೇ ಕಾರಣದಿಂದ ಇಂದಿಗೂ ಈ ರಾಜ್ಯದ ಜನರು ತೆರಿಗೆ ಕಟ್ಟಲ್ಲ. 1975 ರ ವಿಲೀನ ಒಪ್ಪಂದ ಮತ್ತು ಸಂವಿಧಾನದ 371 ಎಫ್ ಅಡಿಯಲ್ಲಿ ಸಿಕ್ಕಿಂ ನಿವಾಸಿಗಳು ಈ ವಿಶೇಷ ವಿನಾಯಿತಿಯನ್ನು ಪಡೆದಿದ್ದಾರೆ. ಈ ಜನರಿಗೆ ಆದಾಯ ತೆರಿಗೆ ಕಾಯಿದೆ, 1961 ಅನ್ವಯಿಸುವುದಿಲ್ಲ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ಪ್ರತಿಯೊಬ್ಬ ನಾಗರಿಕನು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಇಲ್ಲಿಯವರೆಗೆ, 2023-24 ರ ಹಣಕಾಸು ವರ್ಷಕ್ಕೆ 5 ಕೋಟಿಗೂ ಹೆಚ್ಚು ಜನರು ರಿಟರ್ನ್ಸ್ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಈ ಸಂಖ್ಯೆ ಪ್ರತಿದಿನ ಲಕ್ಷಗಟ್ಟಲೆ ಹೆಚ್ಚುತ್ತಿದೆ.

ಇದನ್ನೂ ಓದಿ:  ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಾಕು: ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ದಿಢೀರ್ ಕರಗಿ ಹೋರಬರುತ್ತೆ! ಕಿಡ್ನಿ ಸ್ಟೋನ್‌ ಪುಡಿಯಾಗಲು ಸಹ ಇದು ರಾಮಬಾಣ!

ಸಿಕ್ಕಿಂ 1975 ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು. ಆ ಸಮಯದಲ್ಲಿ ಅವರು ವಿಶೇಷ ಸ್ಥಾನಮಾನವನ್ನು ತೆಗೆದುಕೊಳ್ಳುವುದಷ್ಟೇ ಅಲ್ಲದೆ, ತಮ್ಮ ಹಳೆಯ ಕಾನೂನುಗಳನ್ನೇ ಅನುಸರಿಸುತ್ತಾರೆ ಎಂದು ಷರತ್ತು ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಸಿಕ್ಕಿಂ ನಿವಾಸಿಗಳು ಆದಾಯ ತೆರಿಗೆ ಜಾಲದಿಂದ ಹೊರಗುಳಿಯುತ್ತಾರೆ ಎಂದು ಸ್ಪಷ್ಟಪಡಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News