ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು

ಈ ಗ್ರಹವು ದಕ್ಷಿಣದ ಆಕಾಶದಲ್ಲಿ ಎರಡು ಪ್ರಕಾಶಮಾನವಾದ ನಕ್ಷತ್ರಗಳ ಸುತ್ತ ಸುತ್ತುತ್ತಿದೆ. ವಿಜ್ಞಾನಿಗಳು ಇದನ್ನು ಬಿ ಸೆಂಟೌರಿ (b Centauri)  ಎಂದು ಹೆಸರಿಸಿದ್ದಾರೆ. 

Written by - Ranjitha R K | Last Updated : Dec 9, 2021, 04:51 PM IST
  • ವಿಜ್ಞಾನಿಗಳಲ್ಲೂ ಈ ಗ್ರಹದ ಬಗ್ಗೆ ಅಚ್ಚರಿ
  • b Centauri ಗ್ರಹವು ಭೂಮಿಯಿಂದ ಸುಮಾರು 325 ಬೆಳಕಿನ ವರ್ಷಗಳ ದೂರದಲ್ಲಿದೆ
  • ಈ ಅನಿಲ ತುಂಬಿದ ಗ್ರಹದ ಕಕ್ಷೆಯು ಗುರುಗ್ರಹಕ್ಕಿಂತ 100 ಪಟ್ಟು ಅಗಲವಾಗಿದೆ.
ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು  title=
ವಿಜ್ಞಾನಿಗಳಲ್ಲೂ ಈ ಗ್ರಹದ ಬಗ್ಗೆ ಅಚ್ಚರಿ (file photo)

ಸ್ಯಾಂಟಿಯಾಗೊ: ಚಿಲಿಯಲ್ಲಿರುವ ವಿಶಾಲಕಾಯ ದೂರದರ್ಶಕದ ಸಹಾಯದಿಂದ ಸೌರವ್ಯೂಹದ ಅತಿದೊಡ್ಡ ಗ್ರಹವನ್ನು ಪತ್ತೆ ಹಚ್ಚಲಾಗಿದೆ. ಗಾತ್ರದಲ್ಲಿ ಇದು ಗುರು ಗ್ರಹಕ್ಕಿಂತ 11 ಪಟ್ಟು ದೊಡ್ಡದಾಗಿದೆ. 

ವಿಜ್ಞಾನಿಗಳು ನೀಡಿದ  ಹೆಸರು : 
ಈ ಗ್ರಹವು ದಕ್ಷಿಣದ ಆಕಾಶದಲ್ಲಿ ಎರಡು ಪ್ರಕಾಶಮಾನವಾದ ನಕ್ಷತ್ರಗಳ (stars) ಸುತ್ತ ಸುತ್ತುತ್ತಿದೆ. ವಿಜ್ಞಾನಿಗಳು ಇದನ್ನು ಬಿ ಸೆಂಟೌರಿ (b Centauri)  ಎಂದು ಹೆಸರಿಸಿದ್ದಾರೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. b Centauri ಗ್ರಹವು ಭೂಮಿಯಿಂದ (earth) ಸುಮಾರು 325 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ಅನಿಲ ತುಂಬಿದ ಗ್ರಹದ ಕಕ್ಷೆಯು ಗುರುಗ್ರಹಕ್ಕಿಂತ (jupiter) 100 ಪಟ್ಟು ಅಗಲವಾಗಿದೆ.

ಇದನ್ನೂ ಓದಿ : Multiple SIM Cards: ನೀವೂ ಸಹ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುತ್ತೀರಾ? ಜಾಗರೂಕರಾಗಿರಿ!

ಸುತ್ತಲೂ ಅನೇಕ ಸಂಭವನೀಯ ಗ್ರಹಗಳು :
ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಖಗೋಳಶಾಸ್ತ್ರಜ್ಞರು ತಮ್ಮ ಆವಿಷ್ಕಾರದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಸೂರ್ಯನ ಮೂರು ಪಟ್ಟು ಗಾತ್ರದ ಅನಿಲ ತುಂಬಿದ ಗ್ರಹವು ನಕ್ಷತ್ರದ ಸುತ್ತಲೂ ಸುತ್ತುತ್ತಿರುವ ಗ್ರಹ ಪತ್ತೆಯಾಗಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. 

ಇನ್ವರ್ಸ್ ವರದಿಯ ಪ್ರಕಾರ, ಮಾರ್ಕಸ್ ಜಾನ್ಸನ್ ಮತ್ತು ಅವರ ತಂಡ ಚಿಲಿಯ ಯುರೋಪಿಯನ್ ಟೆಲಿಸ್ಕೋಪ್ ಮೂಲಕ ಈ ಗ್ರಹವನ್ನು ಕಂಡುಹಿಡಿದಿದೆ. ನಕ್ಷತ್ರಗಳ (stars) ಸುತ್ತಲೂ ಯಾವುದೇ ಗ್ರಹಗಳಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ನಕ್ಷತ್ರಗಳ ಸುತ್ತಲೂ ಅನೇಕ ಸಂಭವನೀಯ ಗ್ರಹಗಳಿವೆ ಎಂದು ಜಾನ್ಸನ್ ಹೇಳಿದ್ದಾರೆ.  

ಇದನ್ನೂ ಓದಿ : Xiaomi 11 Lite NE 5G: Xiaomi ಅತ್ಯಂತ ಸ್ಲಿಮ್ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 3,000 ರೂ.ಗಳಲ್ಲಿ ಖರೀದಿಸಿ

ವಿಜ್ಞಾನಿಗಳಲ್ಲೂ ಅಚ್ಚರಿ : 
ಈ ಗ್ರಹದ ಗುಣಲಕ್ಷಣಗಳು ಮಾರ್ಕಸ್ ಮತ್ತು ಅವನ ತಂಡವನ್ನು ಗೊಂದಲಗೊಳಿಸುತ್ತಿವೆ. ಬಿ-ಸೆಂಚುರಿ ವ್ಯವಸ್ಥೆಯಲ್ಲಿ ಎರಡು ನಕ್ಷತ್ರಗಳಿವೆ, ಬಿ ಸೆಂಟೌರಿ ಎ ಮತ್ತು ಬಿ ಸೆಂಟೌರಿ ಬಿ. ಇವೆರಡನ್ನು ಒಟ್ಟುಗೂಡಿಸಿದರೆ, ಅವು ಸೂರ್ಯನಿಗಿಂತ 6 ರಿಂದ 10 ಪಟ್ಟು ಹೆಚ್ಚು ಬೃಹತ್ ಪ್ರಮಾಣದಲ್ಲಿರಬಹುದು. ಇವೆರಡೂ ತುಂಬಾ ಬಿಸಿಯಾಗಿದ್ದು ಸಾಮಾನ್ಯಕ್ಕಿಂತ ಭಿನ್ನವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News