ಪ್ರೀತಿಯಲ್ಲಿ ಏಕೆ ಕುಚ್ ಕುಚ್ ಹೋತಾ ಹೈ ಅನುಭವ ಉಂಟಾಗುತ್ತದೆ? ಈ ಲೇಖನ ಓದಿ ಗೊತ್ತಾಗುತ್ತೆ!

Science Behind Love Feeling: ವಿಜ್ಞಾನವನ್ನು ನಂಬುವುದಾದರೆ ಪ್ರೀತಿಯ ಅನುಭವದ ಸಂಬಂಧ ಹೃದಯದ ಜೊತೆಗೆ ಅಲ್ಲ ಮೆದುಳಿನ ಜೊತೆಗಿರುತ್ತದೆ ಎನ್ನಲಾಗಿದೆ. ಯಾರೊಬ್ಬರ ಮೇಲೆ ಪ್ರೀತಿ ಹುಟ್ಟಿದಾಗ ಆಗುವ ಅನುಭವದ ಹಿಂದೆ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಇದೆ ಎಂದು ವಿಜ್ಞಾನ ಹೇಳುತ್ತದೆ. (Technology News In Kannada)  

Written by - Nitin Tabib | Last Updated : Nov 27, 2023, 10:49 PM IST
  • ಹೃದಯದ ಮುಖ್ಯ ಕೆಲಸವೆಂದರೆ ದೇಹದಲ್ಲಿ ರಕ್ತದ ಪರಿಚಲನೆಯನ್ನು ನಿರ್ವಹಿಸುವುದಾಗಿದೆ.
  • ಆದರೂ ಅದರ ಎದೆಬಡಿತ ಇದ್ದಕ್ಕಿದ್ದಂತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
  • ಯಾರೊಬ್ಬ ವಿಶಿಷ್ಟ ವ್ಯಕ್ತಿಯನ್ನು ಕಂಡರೆ ಹೃದಯ ಮತ್ತೆ ಮತ್ತೆ ಬಡಿದುಕೊಳ್ಳುತ್ತದೆ.
ಪ್ರೀತಿಯಲ್ಲಿ ಏಕೆ ಕುಚ್ ಕುಚ್ ಹೋತಾ ಹೈ ಅನುಭವ ಉಂಟಾಗುತ್ತದೆ? ಈ ಲೇಖನ ಓದಿ ಗೊತ್ತಾಗುತ್ತೆ! title=

ಬೆಂಗಳೂರು: ನೀವೂ ಕೂಡ ನಿಮ್ಮ ಜೀವನದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರೆ ಅಥವಾ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಹೊಟ್ಟೆಗೆ ಕಚಗುಳಿ ಇಟ್ಟ ಅನುಭವ ನಿಮಗೂ ಆಗಿರುತ್ತದೆ, ನಿದ್ದೆ ಹಾರಿಹೋಗಿರುತ್ತದೆ, ಹಸಿವು-ಬಾಯಾರಿಕೆಯಂತಹ ಅನುಭವಗಳು ಕೂಡ ಹಿಂದೆ ಬಿದ್ದಿರುತ್ತವೆ. ಇದರ ಹಿಂದಿನ ಕಾರಣವೇನು ಎಂದು ಎಂದಾದ್ದರು ಯೋಚಿಸಿದ್ದೀರಾ? ವಾಸ್ತವದಲ್ಲಿ, ಪ್ರೀತಿಯ ವಿಜ್ಞಾನವು ಎಲ್ಲರ ತಿಳುವಳಿಕೆಯನ್ನು ಮೀರಿದೆ. ಹೀಗಾಗಿ ಪ್ರೀತಿ, ಪ್ರೇಮ ಮತ್ತು ಪ್ರಣಯದಂತಹ ವಿಷಯಗಳು ನಮ್ಮ ಹೃದಯಕ್ಕೆ ಸಂಬಂಧಿಸಿದೆ ಎಂದು ನಾವೆಲ್ಲರೂ ಭಾವಿಸುತ್ತೇವೆ, ಆದರೆ ವಿಜ್ಞಾನವು ಅದನ್ನು ನಂಬುವುದಿಲ್ಲ. 'ಕುಚ್-ಕುಚ್ ಹೋತಾ ಹೈ' ಎಂಬ ಭಾವನೆಯು ನಮ್ಮ ಮನಸ್ಸಿನೊಂದಿಗೆ ಅಥವಾ ಮೆದುಳಿನ ಜೊತೆ ಸಂಪರ್ಕ ಹೊಂದಿದೆ ಎಂದು ವಿಜ್ಞಾನ ನಂಬುತ್ತದೆ. ಯಾರಾದರೂ ಪ್ರೀತಿಯಲ್ಲಿ ಬಿದ್ದಾಗ, ಆ ಭಾವನೆಯ ಹಿಂದೆ ಮೆದುಳಿನಿಂದ ಬಿಡುಗಡೆಯಾಗುವ ಹಾರ್ಮೋನ್ (ಲವ್ ಹಾರ್ಮೋನ್) ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ವಿಜ್ಞಾನ ಕೂಡ ಪ್ರೀತಿಯನ್ನು ಮನಸ್ಸಿನ ಸಂಬಂಧವೆಂದು ಪರಿಗಣಿಸುತ್ತದೆ ಮತ್ತು ಹೃದಯದ ಸಂಬಂಧವಲ್ಲ ಎಂದು ಹೇಳುತ್ತದೆ. (Technology News In Kannada)

ಇದನ್ನೂ ಓದಿ-ಫೋನ್ ನಲ್ಲಿ ಪದೇ ಪದೇ ಬರುವ ಜಾಹೀರಾತುಗಳಿಂದ ತಲೆ ಚಿಟ್ಟು ಹಿಡಿದಿದೆಯಾ? ಈ ಸಣ್ಣ ಸೇಟ್ಟಿಂಗ್ ಮಾಡ್ಕೊಳ್ಳಿ ಸಾಕು!
 
ಪ್ರೀತಿಯ ಹಾರ್ಮೋನ್ ಎಂದರೇನು?
ಯಾವುದೇ ಓರ್ವ ನಿರ್ಧಿಷ್ಟ ವ್ಯಕ್ತಿಯ ಮೇಲೆ ಪ್ರೀತಿ ಹುಟ್ಟಿದಾಗ, ಆ ಭಾವನೆಗೆ ಕಾರಣ ಆಕ್ಸಿಟೋಸಿನ್ ಹಾರ್ಮೋನ್. ಮಗುವಿನ ಮೇಲಿನ ತಾಯಿಯ ಈ ಪ್ರೀತಿಯಾಗಿರಲಿ, ಬಾಳಸಂಗಾತಿ ಮೇಲಿನ ಪ್ರೀತಿಯ ಭಾವನೆಯೇ ಆಗಿರಲಿ, ಪ್ರೇಮ ಜೋಡಿಗಳ ಪ್ರೀತಿಯೇ ಆಗಿರಲಿ, ಅದು ಯಾವುದೇ ರೀತಿಯ ಪ್ರೀತಿ ಹುಟ್ಟಿದಾಗ. ಅಂತಹ ಭಾವನೆಗಳ ನಂತರ, ಮೆದುಳಿನಲ್ಲಿನ ಹೈಪೋಥಾಲಮಸ್ನ ಕೆಳಗಿನ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದೆ ಕಾರಣದಿಂದ  ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಲವ್ ಹಾರ್ಮೋನ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-ಕೇವಲ 329 ರೂ.ಗಳಿಗೆ 1000ಜಿಬಿ ಡೇಟಾ ನೀಡುತ್ತೇ ಈ ಟೆಲಿಕಾಂ ಕಂಪನಿ!
 
ಯಾರನ್ನಾದರೂ ನೋಡಿದಾಗ ಹೃದಯ ಏಕೆ ಮಿಡಿಯುತ್ತದೆ
ಹೃದಯದ ಮುಖ್ಯ ಕೆಲಸವೆಂದರೆ ದೇಹದಲ್ಲಿ ರಕ್ತದ ಪರಿಚಲನೆಯನ್ನು ನಿರ್ವಹಿಸುವುದಾಗಿದೆ. ಆದರೂ ಅದರ ಎದೆಬಡಿತ ಇದ್ದಕ್ಕಿದ್ದಂತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಯಾರೊಬ್ಬ ವಿಶಿಷ್ಟ ವ್ಯಕ್ತಿಯನ್ನು ಕಂಡರೆ ಹೃದಯ ಮತ್ತೆ ಮತ್ತೆ ಬಡಿದುಕೊಳ್ಳುತ್ತದೆ. ವಾಸ್ತವದಲ್ಲಿ  ನಾವು ಹೆಚ್ಚು ಭಯದಲ್ಲಿರುವಾಗ ಅಥವಾ ಸಂತೋಷಗೊಂಡಾಗ ಅಥವಾ ಉತ್ಸುಕರಾದಾಗ ಕ್ಯಾಟೆಕೊಲಮೈನ್ಸ್ ರಾಸಾಯನಿಕವು ದೇಹದಲ್ಲಿ ಸಕ್ರಿಯವಾಗುತ್ತದೆ. ಇದು ಮೂತ್ರಪಿಂಡದ ಬಳಿ ಇರುವ ಅಂತಃಸ್ರಾವಕ ಗ್ರಂಥಿಯಿಂದ ಹೊರಬರುತ್ತದೆ ಮತ್ತು ನರಗಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಹೃದಯ ಮತ್ತು ಮೆದುಳಿನ ಆರೋಗ್ಯವು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದು ಅನೇಕ ವರದಿಗಳಲ್ಲಿ ಕಂಡುಬಂದಿದೆ. ಮೆದುಳಿನಿಂದ ಸಿಗ್ನಲ್ ಪಡೆದ ತಕ್ಷಣ ಅದು ಹೃದಯ ಬಡಿತದ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದೇ ಇದರ ಹಿಂದಿನ ಕಾರಣ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News