Rogue Planets: ಬಾನಂಗಳದಲ್ಲಿ 170 'ದುಷ್ಟ' ಗ್ರಹಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಅವುಗಳಿಂದ ಏನು ಅಪಾಯ?

Rogue Planets - ಸಾಮಾನ್ಯವಾಗಿ ನಾವು ಗ್ರಹವು ಅಸ್ತಿತ್ವದಲ್ಲಿರಲು ನಕ್ಷತ್ರವನ್ನು ಹೊಂದಿರುವುದು ಅವಶ್ಯಕ ಎಂದು ನಂಬುತ್ತೇವೆ, ಆದರೆ ಬಾಹ್ಯಾಕಾಶದಲ್ಲಿ ನಕ್ಷತ್ರಗಳಿಲ್ಲದೆಯೇ ಹಲವು ಗ್ರಹಗಳಿರುವುದು ಬ್ಯಾಹ್ಯಾಕಾಶದ ಹಲವು ರಹಸ್ಯಗಳಲ್ಲಿ ಒಂದು. ಈ ಗ್ರಹಗಳು ಮುಕ್ತವಾಗಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿವೆ. ಇವುಗಳನ್ನು 'ದುಷ್ಟ ನಕ್ಷತ್ರಗಳು' ಎಂದು ಕರೆಯಲಾಗುತ್ತದೆ.

Written by - Nitin Tabib | Last Updated : Dec 24, 2021, 07:21 PM IST
  • ಗ್ಯಾಲಕ್ಸಿ ಹತ್ತಿರ ಲಕ್ಷಾಂತರ ದುಷ್ಟ ಗ್ರಹಗಳಿವೆ.
  • ಇದುವರೆಗೆ 170 ದುಷ್ಟ ಗ್ರಹಗಳನ್ನು ಪತ್ತೆಹಚ್ಚಲಾಗಿದೆ.
  • ಯಾವುದೇ ನಕ್ಷತ್ರಗಳಿಲ್ಲದೆ ಇವು ಬಾಹ್ಯಾಕಾಶದಲ್ಲಿ ಸುತ್ತಾಡುತ್ತಿವೆ.
Rogue Planets: ಬಾನಂಗಳದಲ್ಲಿ 170 'ದುಷ್ಟ' ಗ್ರಹಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಅವುಗಳಿಂದ ಏನು ಅಪಾಯ? title=
Rogue Planets (File Photo)

ನವದೆಹಲಿ:  Rogue Planets - ಗ್ರಹಗಳು ಮತ್ತು ನಕ್ಷತ್ರಗಳ ವಿಷಯ ಬಂದಾಗಲೆಲ್ಲಾ ನಮ್ಮ ಸೌರವ್ಯೂಹದ ಮಾದರಿ ನಮ್ಮ ಕಣ್ಣಿನ ಮುಂದೆ ಬರುತ್ತದೆ. ನಮ್ಮ ಭೂಮಿ ಸೇರಿದಂತೆ 8 ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿವೆ. ಸೂರ್ಯನು ಸೌರವ್ಯೂಹದ ಕೇಂದ್ರದಲ್ಲಿದ್ದಾನೆ ಮತ್ತು ಗ್ರಹಗಳು ಸೂರ್ಯನ ಸುತ್ತ ಒಂದು ಸ್ಥಿರ ಕಕ್ಷೆಯಲ್ಲಿ ಸುತ್ತುತ್ತವೆ. ಇಡೀ ಬ್ರಹ್ಮಾಂಡದ ಬಹುತೇಕಇದೆ ಮಾದರಿಯಲ್ಲಿದ್ದು, ನಕ್ಷತ್ರಗಳ ಸುತ್ತ ಗ್ರಹಗಳು ಸುತ್ತುತ್ತವೆ. ನಾವು ಅವುಗಳನ್ನು ಒಂದು ಒಳ್ಳೆಯ ಕುಟುಂಬದಂತೆ ಪರಿಗಣಿಸುತ್ತವೆ ಮತ್ತು ಅವು ಎಲ್ಲಾ ನಿಯಮಗಳನ್ನು ಪಾಲಿಸುತ್ತವೆ. 

ಬಾಹ್ಯಾಕಾಶದಲ್ಲಿ ಇಂತಹ ಲಕ್ಷಾಂತರ ಗ್ರಹಗಳು ಸ್ವತಂತ್ರವಾಗಿ ಸುತ್ತುತ್ತಿವೆ (Shocking Fact)
ನಮ್ಮ ಪಾಲುದಾರ ವೆಬ್‌ಸೈಟ್ WION ನ್ಯೂಸ್ ಪ್ರಕಾರ, ಬ್ರಹ್ಮಾಂಡದಲ್ಲಿ ಯಾವುದೇ ನಕ್ಷತ್ರಗಳಿಲ್ಲದ ಕೆಲವು ಗ್ರಹಗಳಿವೆ. ಹಾಗಾದರೆ ಈ ಗ್ರಹಗಳು ಯಾವುದರ ಸುತ್ತ ಸುತ್ತುತ್ತವೆ? ಈ ಗ್ರಹಗಳು ಬ್ರಹ್ಮಾಂಡದಲ್ಲಿ  ತಿರುಗುತ್ತಲೇ ಇವೆಯಾ? ಒಂದು ಅಂದಾಜಿನ ಪ್ರಕಾರ, ನಮ್ಮ ನಕ್ಷತ್ರಪುಂಜದಲ್ಲಿ ಇಂತಹ ಶತಕೋಟಿ ಗ್ರಹಗಳು ಬಾಹ್ಯಾಕಾಶದಲ್ಲಿ ಚಲಿಸುತ್ತಿವೆ. ಈ ಗ್ರಹಗಳು ಸಮುದ್ರದಲ್ಲಿ ಚಲಿಸುವ ಭೂತದ ಹಡಗುಗಳಂತೆ ಇದ್ದು, ಅವುಗಳಿಗೆ ಎಲ್ಲಿಗೆ ಹೋಗಬೇಕು ತಿಳಿದಿಲ್ಲ. 

170 ದುಷ್ಟ ಗ್ರಹಗಳ ಆವಿಷ್ಕಾರ (Weird News)
ಫ್ರಾನ್ಸ್‌ನ Laboratoire d'Astrophysique de Bordeaux ಸಂಶೋಧಕರು ಇಂತಹ 170 ದುಷ್ಟ ಗ್ರಹಗಳನ್ನು ಪತ್ತೆಹಚ್ಚಿದ್ದಾರೆ. ಈ ಸಂಶೋಧಕರು (Scientists) ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ಸಂಪನ್ಮೂಲಗಳನ್ನು ಇದಕ್ಕಾಗಿ ಬಳಸಿದ್ದಾರೆ. 

ಬಾಹ್ಯಾಕಾಶದಲ್ಲಿರುವ ಈ ದುಷ್ಟ ಗ್ರಹಗಳು  ಅನಿಲ ಮತ್ತು ಧೂಳಿನಿಂದ ಮಾಡಲ್ಪಟ್ಟಿದೆ. ನಕ್ಷತ್ರಗಳು ಅನಿಲ ಮತ್ತು ಧೂಳಿನಿಂದ ಬಾಹ್ಯಾಕಾಶದಲ್ಲಿ ರೂಪುಗೊಳ್ಳುತ್ತವೆ, ಆದರೆ ಈ ಧೂಳು ಮತ್ತು ಅನಿಲವು ನಕ್ಷತ್ರಗಳಾಗಲು ಸಾಕಾಗದೇ ಹೋದಾಗ, ಅವು ಗ್ರಹಗಳಾಗುತ್ತವೆ. ಸೌರವ್ಯೂಹದಿಂದ ಗ್ರಹ ಹೊರಬಂದರೂ ಅದು ದುಷ್ಟ ಗ್ರಹವಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ-World's First SMS Auction: 1.5 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತಕ್ಕೆ ಹರಾಜಾಗುತ್ತಿರುವ ವಿಶ್ವದ ಮೊಟ್ಟಮೊದಲ SMSನಲ್ಲಿ ಎಷ್ಟು ಅಕ್ಷರಗಳಿದ್ದವು ಗೊತ್ತಾ?

ಇಂತಹ ದುಷ್ಟ ಗ್ರಹಗಳ ಬಗ್ಗೆ ತಿಳಿದು ಬಂದಿದೆ (Science News)
ಈ ಕುರಿತು ಹೇಳುವ ಲ್ಯಾಬೊರೇಟೊರ್ ಡಿ ಆಸ್ಟ್ರೋಫಿಸಿಕ್ ಡಿ ಬೋರ್ಡೆಕ್ಸ್, ಖಗೋಳಶಾಸ್ತ್ರಜ್ಞ ಮತ್ತು ಈ ಲೇಖನದ ಮೊದಲ ಲೇಖಕ ನುರಿಯಾ ಮಿರೆಟ್ ರೋಗ್,  ನಾವು ಆಕಾಶದ ದೊಡ್ಡ ಪ್ರದೇಶದಲ್ಲಿ ಲಕ್ಷಾಂತರ ಮೂಲಗಳ ಸಣ್ಣ ಚಲನೆಗಳು, ಬಣ್ಣಗಳು ಮತ್ತು ಹೊಳಪನ್ನು ಅಳೆಯಿದ್ದೇವೆ, ನಂತರ  ಇವು ದುಷ್ಟ ಗ್ರಹಗಳಾಗಿರುವುದು ಕಂಡುಬಂದಿದೆ ಎಂದಿದ್ದಾರೆ. 

ಇದನ್ನೂ ಓದಿ-ಭೂಮಿಯ ಈ ಸ್ಥಳವು ಸೂರ್ಯನಿಗಿಂತ ಹೆಚ್ಚು ಬಿಸಿಯಾಗಿರುತ್ತದಂತೆ.. ಇಲ್ಲಿನ ತಾಪಮಾನ 50 ಕೋಟಿ ಡಿಗ್ರಿ ಸೆಲ್ಸಿಯಸ್.!!

ಈ ಗ್ರಹಗಳು ಅಪ್ಪರ್ ಸ್ಕಾರ್ಪಿಯಸ್ ಮತ್ತು ಓಫಿಯುಚಸ್ ನಕ್ಷತ್ರಪುಂಜಗಳಲ್ಲಿ ಕಂಡುಬಂದಿವೆ. ಈ ಸಂಶೋಧನೆಯನ್ನು ನೇಚರ್ ಆಸ್ಟ್ರಾನಮಿ ಜರ್ನಲ್‌ನಲ್ಲಿ (Journal Nature Astronomy) ಪ್ರಕಟಿಸಲಾಗಿದೆ.

ಇದನ್ನೂ ಓದಿ-ಸೌರ ವಿಜ್ಞಾನದಲ್ಲಿ ಐತಿಹಾಸಿಕ ಮೈಲಿಗಲ್ಲು.. ಸೂರ್ಯನನ್ನು ಸ್ಪರ್ಶಿಸಿದ ನಾಸಾ ಬಾಹ್ಯಾಕಾಶ ನೌಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News