ಬೆಂಗಳೂರು : ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ ಅತ್ಯಂತ ಕಡಿಮೆ ಬೆಲೆಯ JioBook ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೇವಲ 16,499 ರೂ. ಇದು ಬೇಸಿಕ್ ಲ್ಯಾಪ್ಟಾಪ್ ಆಗಿದ್ದು, ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲ್ಯಾಪ್ಟಾಪ್ನೊಂದಿಗೆ ಜನರು ಡಿಜಿಬಾಕ್ಸ್ನಲ್ಲಿ 100GB ಉಚಿತ ಕ್ಲೌಡ್ ಸ್ಟೋರೇಜ್ ಸ್ಪೇಸ್ ಕ್ಲೈಮ್ ಮಾಡುವುದು ಸಾಧ್ಯವಾಗುತ್ತದೆ. ಅಲ್ಲದೆ, ಇದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.
JioBook ಲ್ಯಾಪ್ಟಾಪ್ ಬಿಡುಗಡೆ :
ಇದು ಶಕ್ತಿಯುತವಾದ ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 4GB LPDDR4 RAM ನಿಂದ ಚಾಲಿತವಾಗಿದೆ. ಇದು ಮಲ್ಟಿ ಟಾಸ್ಕಿಂಗ್ ಮತ್ತು ಸ್ಮೂತ್ ಪರ್ಫಾರ್ಮರ್ ಆಗಿರಲಿದೆ. ಈ ಲ್ಯಾಪ್ಟಾಪ್ 64GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, SD ಕಾರ್ಡ್ನೊಂದಿಗೆ ಇದನ್ನು 256GBವರೆಗೆ ವಿಸ್ತರಿಸಬಹುದು. ಜಿಯೋಬುಕ್ನ ಪ್ರಮುಖ ವೈಶಿಷ್ಟ್ಯವೆಂದರೆ ಇನ್ಫಿನಿಟಿ ಕೀಬೋರ್ಡ್ ಮತ್ತು ಮಲ್ಟಿ -ಗೆಸ್ಚರ್ ಟ್ರ್ಯಾಕ್ಪ್ಯಾಡ್. ಲ್ಯಾಪ್ಟಾಪ್ ಇನ್ ಬಿಲ್ಟ್ USB ಮತ್ತು HDMI ಪೋರ್ಟ್ಗಳೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ ಬಾಹ್ಯ ಸಾಧನಗಳು ಮತ್ತು ಪೆರಿಫೆರಲ್ಗಳಿಗೆ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ : ಗರ್ಲ್ ಫ್ರೆಂಡ್ ಸಿಗುತ್ತಿಲ್ಲ ಎನ್ನುವವರಿಗೆ ಗುಡ್ ನ್ಯೂಸ್ ! ನಿಮ್ಮ ಆಯ್ಕೆ, ಆದ್ಯತೆಗೆ ತಕ್ಕಂತೆ ಕನ್ಯೆ ಹುಡುಕಲಿದೆ AI Tool
ಈ ಲ್ಯಾಪ್ಟಾಪ್ ನ ಕೆಲವು ಪ್ರಮುಖ ಅಂಶಗಳು :
- ಇದು JioOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಯುಸರ್ ಫ್ರೆಂಡ್ಲಿ ಮತ್ತು ಆಪ್ಟಿಮೈಸ್ಡ್ ಇಂಟರ್ಫೇಸ್ ಆಗಿದೆ.
- ಇದು 4G ಸಂಪರ್ಕ ಮತ್ತು ಡ್ಯುಯಲ್-ಬ್ಯಾಂಡ್ Wi-Fi ಅನ್ನು ಸಪೋರ್ಟ್ ಮಾಡುತ್ತದೆ. ಇದು ಎಲ್ಲಿ ಬೇಕಾದರೂ ಯಾವುದೇ ಸಮಯದಲ್ಲಿಯಾದರೂ ಆನ್ಲೈನ್ನಲ್ಲಿ ಉಳಿಯಲು ಸಕ್ರಿಯಗೊಳಿಸುತ್ತದೆ.
- ಇದರ ವಿನ್ಯಾಸವು ಅಲ್ಟ್ರಾ-ಸ್ಲಿಮ್ ಮತ್ತು ಹಗುರವಾಗಿದ್ದು, ಸುಮಾರು 990 ಗ್ರಾಂನಷ್ಟು ತೂಗುತ್ತದೆ. ಇದನ್ನು ಒಂದು ತೆಗೆದುಕೊಂಡು ಹೋಗುವುದು ಕೂಡಾ ಬಹಳ ಸುಲಭ.
- ಇದು ಕಾಂಪ್ಯಾಕ್ಟ್ 11.6-ಇಂಚಿನ ಆಂಟಿ-ಗ್ಲೇರ್ HD ಡಿಸ್ಪ್ಲೇಯನ್ನು ಹೊಂದಿದೆ. ಇದು ಹೊರಗಿನ ಬೆಳಕಿನಲ್ಲಿ ವೀಕ್ಷಿಸುವುದು ಸುಲಭವಾಗುತ್ತದೆ.
JioBook ಲ್ಯಾಪ್ಟಾಪ್ ಲಭ್ಯತೆ :
ಹೊಸ JioBook ಲ್ಯಾಪ್ಟಾಪ್ ಆಗಸ್ಟ್ 5 ರಂದು ಮಾರಾಟಕ್ಕೆ ಲಭ್ಯವಿರುತ್ತದೆ. ರಿಲಯನ್ಸ್ ಡಿಜಿಟಲ್ನ ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದಲ್ಲದೆ, ಸಾಧನವನ್ನು ಅಮೆಜಾನ್ ಮೂಲಕ ಕೂಡಾ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ : Best Internet Plan: 400ಎಂಬಿಪಿಎಸ್ ಇಂಟರ್ನೆಟ್ ಸ್ಪೀಡ್, 12 ಓಟಿಟಿಗಳ ಉಚಿತ ಚಂದಾದಾರಿಕೆ, ಬೆಲೆ ಕೇವಲ 592 ರೂ.!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.