Reliance Jio: ಅಗ್ಗದ ದರದಲ್ಲಿ ಪ್ರತಿದಿನ 1GB ಡೇಟಾ ಜೊತೆಗೆ ಜಿಯೋ ನೀಡುತ್ತಿದೆ ಹಲವು ಪ್ರಯೋಜನ

Reliance Jio: ರಿಲಯನ್ಸ್ ಜಿಯೋ ಬಳಕೆದಾರರನ್ನು ಮೆಚ್ಚಿಸಲು ಕಡಿಮೆ ಬೆಲೆಯ ಯೋಜನೆಯನ್ನು ತಂದಿದ್ದು, ಇದರಲ್ಲಿ ದಿನಕ್ಕೆ 1GB ಡೇಟಾ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಹೊಸ ಯೋಜನೆಯು ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಈ ಯೋಜನೆ ಬಗ್ಗೆ ತಿಳಿಯೋಣ... 

Written by - Yashaswini V | Last Updated : Dec 7, 2021, 11:52 AM IST
  • ರಿಲಯನ್ಸ್ ಜಿಯೋ ಕಡಿಮೆ ವೆಚ್ಚದ ಯೋಜನೆಯನ್ನು ತಂದಿದೆ
  • ರಿಲಯನ್ಸ್ ಜಿಯೋದ ರೂ. 209 ಪ್ಲಾನ್‌ನ ಮಾನ್ಯತೆಯು 28 ದಿನಗಳು
  • ಜಿಯೋ 209 ರೂ. ಯೋಜನೆಯಲ್ಲಿ, ಬಳಕೆದಾರರು 28 ದಿನಗಳವರೆಗೆ ಪ್ರತಿದಿನ 1GB ಡೇಟಾವನ್ನು ಪಡೆಯುತ್ತಾರೆ
Reliance Jio: ಅಗ್ಗದ ದರದಲ್ಲಿ ಪ್ರತಿದಿನ 1GB ಡೇಟಾ ಜೊತೆಗೆ ಜಿಯೋ  ನೀಡುತ್ತಿದೆ ಹಲವು ಪ್ರಯೋಜನ title=
Jio Prepaid plans

Reliance Jio: ರಿಲಯನ್ಸ್ ಜಿಯೋ ತನ್ನ ಯೋಜನೆಗಳನ್ನು ದುಬಾರಿ ಮಾಡಿದೆ. ಇದರ ಜೊತೆಗೆ ಕೆಲವು ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದೆ. ಇದಲ್ಲದೆ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಯೋಜನೆಯನ್ನು ಸಹ ಪರಿಚಯಿಸಿದೆ. ಬಳಕೆದಾರರನ್ನು ಮೆಚ್ಚಿಸಲು, ಜಿಯೋ ಕಡಿಮೆ-ವೆಚ್ಚದ ಯೋಜನೆಯನ್ನು ತಂದಿದೆ, ಇದರಲ್ಲಿ ದಿನಕ್ಕೆ 1GB ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಹೊಸ ಯೋಜನೆಯು ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ರಿಲಯನ್ಸ್ ಜಿಯೋದ ಈ ಯೋಜನೆಯ ಬೆಲೆ 209 ರೂ. (ರಿಲಯನ್ಸ್ ಜಿಯೋ ರೂ 209 ಪ್ರಿಪೇಯ್ಡ್ ಯೋಜನೆ). ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ...

ರಿಲಯನ್ಸ್ ಜಿಯೋ 209 ರೂ. ಪ್ರಿಪೇಯ್ಡ್ ಯೋಜನೆ:
ರಿಲಯನ್ಸ್ ಜಿಯೋದ (Reliance Jio) 209 ರೂ.ಗಳ ಪ್ಲಾನ್‌ನ ಮಾನ್ಯತೆಯು 28 ದಿನಗಳು. ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಪಡೆಯುತ್ತಾರೆ, ಅಂದರೆ, ಬಳಕೆದಾರರು ಒಟ್ಟು 28GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೇ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಯೋಜನೆಯಲ್ಲಿ ಪ್ರತಿದಿನ 100 SMS ಲಭ್ಯವಿದೆ. ಹೆಚ್ಚುವರಿ ಪ್ರಯೋಜನಗಳ ಕುರಿತು ಹೇಳುವುದಾದರೆ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ. ಈ ಯೋಜನೆಯನ್ನು ಹೊರತುಪಡಿಸಿ, ಕಂಪನಿಯು 149 ರೂ. ಮತ್ತು 179 ರೂ. ರ ಯೋಜನೆಗಳನ್ನು ಸಹ ಹೊಂದಿದೆ. ಈ ಯೋಜನೆಗಳ ಬಗ್ಗೆಯೂ ತಿಳಿಯೋಣ...

ಇದನ್ನೂ ಓದಿ-  Injuction Phobia: ನಿಮಗೂ ಇಂಜೆಕ್ಷನ್ ಅಂದ್ರೆ ಭಯಾನಾ? ಇದರ ಹಿಂದಿನ Science ಏನು ಗೊತ್ತಾ

ರಿಲಯನ್ಸ್ ಜಿಯೋ 179 ರೂ. ಪ್ರಿಪೇಯ್ಡ್ ಯೋಜನೆ:
ರಿಲಯನ್ಸ್ ಜಿಯೋದ 179  ರೂ. ಪ್ಲಾನ್‌ನ (Reliance Jio Prepaid Plans) ಮಾನ್ಯತೆಯು 24 ದಿನಗಳು. ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಪಡೆಯುತ್ತಾರೆ, ಅಂದರೆ, ಬಳಕೆದಾರರು ಒಟ್ಟು 24GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೇ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಯೋಜನೆಯಲ್ಲಿ ಪ್ರತಿದಿನ 100 SMS ಲಭ್ಯವಿದೆ. ಹೆಚ್ಚುವರಿ ಪ್ರಯೋಜನಗಳ ಕುರಿತು ಹೇಳುವುದಾದರೆ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ. 

ಇದನ್ನೂ ಓದಿ-  Solar Rooftop Yojana: ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, 20 ವರ್ಷ ಉಚಿತ ವಿದ್ಯುತ್ ಪಡೆಯಿರಿ

ರಿಲಯನ್ಸ್ ಜಿಯೋ 149 ರೂ. ಪ್ರಿಪೇಯ್ಡ್ ಯೋಜನೆ:
ರಿಲಯನ್ಸ್ ಜಿಯೋದ 149 ರೂ. ಪ್ಲಾನ್‌ನ ಮಾನ್ಯತೆಯು 20 ದಿನಗಳು. ಈ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 1GB ಡೇಟಾವನ್ನು ಪಡೆಯುತ್ತಾರೆ, ಅಂದರೆ, ಬಳಕೆದಾರರು ಒಟ್ಟು 20GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೇ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಯೋಜನೆಯಲ್ಲಿ ಪ್ರತಿದಿನ 100 SMS ಲಭ್ಯವಿದೆ. ಹೆಚ್ಚುವರಿ ಪ್ರಯೋಜನಗಳ ಕುರಿತು ಹೇಳುವುದಾದರೆ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News