IPL ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ

Jio Unlimited Internet Plan: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಐ‌ಪಿ‌ಎಲ್ 2023 ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ  ಹಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಹೊರತ್ತಾಗಿ, ಸ್ಥಿರ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಯೋಜನೆಯನ್ನೂ ಸಹ ಪರಿಚಯಿಸಿದೆ.   

Written by - Yashaswini V | Last Updated : Mar 28, 2023, 08:37 AM IST
  • ಸ್ಥಿರ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಇತರ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ಒಡ್ಡಿರುವ ರಿಲಯನ್ಸ್ ಜಿಯೋ
  • ಅತ್ಯಂತ ಕಡಿಮೆ ಬೆಲೆಯಲ್ಲಿ 198 ರೂಪಾಯಿಗಳ ಪ್ರವೇಶ ಮಟ್ಟದ ಯೋಜನೆಯನ್ನು ಪರಿಚಯಿಸಿದ ರಿಲಯನ್ಸ್ ಜಿಯೋ
  • ಈ ಯೋಜನೆಗೆ ಬ್ರಾಡ್‌ಬ್ಯಾಂಡ್ ಬ್ಯಾಕ್-ಅಪ್ ಯೋಜನೆ ಎಂದು ಹೆಸರಿಡಲಾಗಿದ್ದು, ಇದರಲ್ಲಿ ಇಂಟರ್ನೆಟ್ ವೇಗವು ಸೆಕೆಂಡಿಗೆ 10 ಮೆಗಾಬಿಟ್ ಆಗಿರುತ್ತದೆ ಎನ್ನಲಾಗಿದೆ.
IPL ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ  title=
Jio Unlimited Internet Plan

IPL 2023- Reliance Jio's Unlimited Internet Plan: ಟೆಲಿಕಾಂ ವಿಭಾಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಇದೀಗ ಐ‌ಪಿ‌ಎಲ್ ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದೆ. ವಾಸ್ತವವಾಗಿ, ಐ‌ಪಿ‌ಎಲ್-2023 ಆರಂಭಕ್ಕೂ ಮೊದಲು ಹಲವು ಆಕರ್ಷಕ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿರುವ ರಿಲಯನ್ಸ್ ಜಿಯೋ, ಇದರ ಹೊರತಾಗಿ, ಫೈಬರ್‌ನಲ್ಲಿ ಹೊಸ ಯೋಜನೆಗಳನ್ನು ಸಹ ಘೋಷಿಸಿದೆ. 

ಸ್ಥಿರ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಇತರ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ಒಡ್ಡಿರುವ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಯಲ್ಲಿ 198 ರೂಪಾಯಿಗಳ ಪ್ರವೇಶ ಮಟ್ಟದ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಗೆ ಬ್ರಾಡ್‌ಬ್ಯಾಂಡ್ ಬ್ಯಾಕ್-ಅಪ್ ಯೋಜನೆ ಎಂದು ಹೆಸರಿಡಲಾಗಿದ್ದು, ಇದರಲ್ಲಿ ಇಂಟರ್ನೆಟ್ ವೇಗವು ಸೆಕೆಂಡಿಗೆ 10 ಮೆಗಾಬಿಟ್ ಆಗಿರುತ್ತದೆ ಎನ್ನಲಾಗಿದೆ.  

ಇದನ್ನೂ ಓದಿ- Best Recharge Plan: 84 ದಿನಗಳ ಸಿಂಧುತ್ವ, ನಿತ್ಯ ಉಚಿತ 2 ಜಿಬಿ ಡೇಟಾ-ಕರೆ ಸೌಲಭ್ಯ, ತಿಂಗಳ ವೆಚ್ಚ ಕೇವಲ 240 ರೂ.ಮಾತ್ರ!

JioFiber ಬ್ಯಾಕಪ್‌ಗೆ ಪರ್ಯಾಯವಾಗಿರುವ ಬ್ಯಾಕಪ್ ಬ್ರಾಡ್‌ಬ್ಯಾಂಡ್ ಸಂಪರ್ಕವು ಲೈವ್ ಸ್ಪೋರ್ಟ್ಸ್ ಸೇರಿದಂತೆ ಇತರ ವಿಷಯಗಳ ಜೊತೆಗೆ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಮುಂಬರುವ ಟಾಟಾ ಐಪಿಎಲ್ ಪಂದ್ಯಾವಳಿಯ ನಿರಂತರ ಸ್ಟ್ರೀಮಿಂಗ್ ಅನ್ನು ಬಳಕೆದಾರರಿಗೆ ಅನುಮತಿಸುತ್ತದೆ. ಜಿಯೋ 24*7 ವಿಶ್ವಾಸಾರ್ಹ, ಯಾವಾಗಲೂ ಆನ್ ಬ್ಯಾಕಪ್ ಸಂಪರ್ಕವನ್ನು ಒದಗಿಸುವ ಮೂಲಕ ವಿಶ್ವಾಸಾರ್ಹವಲ್ಲದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಿರುವ ಮನೆಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. JioFiber ಬ್ಯಾಕಪ್‌ನೊಂದಿಗೆ, ನಾವು ಮನೆಗಳಿಗೆ ಪರ್ಯಾಯ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ನೀಡಲು ಬಯಸುತ್ತೇವೆ ಎಂದು ಜಿಯೋ ವಕ್ತಾರರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ವೊಡಾಫೋನ್-ಐಡಿಯಾದ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಎಲ್ಲವೂ ಅನ್ಲಿಮಿಟೆಡ್

ಜಿಯೋ ಫೈಬರ್ ಬ್ಯಾಕಪ್ ಪ್ಲಾನ್‌ನ ಬೆಲೆ 1,490 ರೂ.  ಆಗಿದೆ. ಇದರಲ್ಲಿ ಇನ್‌ಸ್ಟಾಲೇಶನ್‌ಗಾಗಿ ಗ್ರಾಹಕರಿಂದ 500 ರೂ.ಗಳನ್ನು ವಿಧಿಸಲಾಗುತ್ತಿದೆ. ಅಂದರೆ, ವಾಸ್ತವವಾಗಿ ಈ ಜಿಯೋ ಫೈಬರ್ ಬ್ಯಾಕಪ್ ಪ್ಲಾನ್‌ನ ಬೆಲೆ 990 ರೂ.ಗಳು. ಇದು ಐದು ತಿಂಗಳ ಯೋಜನೆ ಆಗಿದ್ದು, ಇದರ ಮಾಸಿಕ ಬೆಲೆ ಕೇವಲ 198ರೂ.ಗಳು. ಅಂದರೆ, ನೀವು ತಿಂಗಳಿಗೆ 198 ರೂ.ಗಳಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಲಾಭವನ್ನು ಪಡೆಯಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News