Portable air cooler under 3500 on amazon: ಬೇಸಿಗೆ ಕಾಲ ಆರಂಭವಾಗಿದ್ದು ಸುಡು ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಕೂಲರ್, ಎಸಿ ಇಲ್ಲದೆ ಬದುಕುವುದು ಹೇಗಪ್ಪಾ ಎನ್ನುವಂತಾಗಿದೆ. ಈ ಹಿನ್ನಲೆಯಲ್ಲಿ ಅನೇಕ ಜನರು ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇನ್ನೂ ಕೆಲವರು ಕೂಲರ್ ಮೊರೆಹೋಗುತ್ತಿದ್ದಾರೆ. ಆದರೆ, ಬೇಸಿಗೆ ಕಾಲದ ಆರಂಭದೊಂದಿಗೆ ಎಸಿ ಹಾಗೂ ಕೂಲರ್ಗಳೂ ದುಬಾರಿಯಾಗಿವೆ. ಕಡಿಮೆ ಬಜೆಟ್ ನಲ್ಲಿ ಉತ್ತಮ ಕೂಲರ್ ಸಿಗುವುದೇ ಇಲ್ಲವೇ ಎಂದು ನೀವು ಯೋಚಿಸುತ್ತಿದ್ದರೆ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು, ನಾವು ನಿಮಗಾಗಿ ಅತ್ಯುತ್ತಮ ಆಯ್ಕೆಯನ್ನು ತಂದಿದ್ದೇವೆ. ನೋಟದಲ್ಲಿ ತುಂಬಾ ಚಿಕ್ಕದಾಗಿರುವ ಆದರೆ ಎಸಿಯಂತೆ ಕಾರ್ಯನಿರ್ವಹಿಸುವ ಕೂಲರ್ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
ಪೋರ್ಟಬಲ್ 3 ಇನ್ 1 ಏರ್ ಕೂಲರ್:
ಪೋರ್ಟಬಲ್ 3 ಇನ್ 1 ಸ್ಮಾಲ್ ಕ್ವೈಟ್ ಎವಪೋರೆಟಿವ್ ಮಿನಿ ಪರ್ಸನಲ್ ಸ್ಪೇಸ್ ಏರ್ ಕೂಲರ್ ಇತರ ಕೂಲರ್ಗಳಿಗಿಂತ ಭಿನ್ನವಾಗಿದೆ. ಇದು ಕಾಟನ್ ಫಿಲ್ಟರ್ಗಳನ್ನು ಹೊಂದಿದೆ, ಇದು ನಿಮಗೆ ಶುದ್ಧ ಮತ್ತು ತಂಪಾದ ಗಾಳಿಯನ್ನು ನೀಡಲು ಸಹಾಯ ಮಾಡುತ್ತದೆ. ಒಂದು ಕಡೆ, ದೊಡ್ಡ ಕೂಲರ್ಗಳು ಜೋರಾಗಿ ಶಬ್ದ ಮಾಡುತ್ತವೆ, ಇನ್ನೊಂದು ಕಡೆ, ಈ ಕೂಲರ್ ಕಡಿಮೆ ಶಬ್ದದಲ್ಲಿ ಹೆಚ್ಚು ಗಾಳಿಯನ್ನು ನೀಡುತ್ತದೆ. ಮುಖ್ಯವಾದ ವಿಷಯವೆಂದರೆ ಈ ಕೂಲರ್ ಬಳಕೆಯಿಂದ ಹೆಚ್ಚು ವಿದ್ಯುತ್ ಬಿಲ್ ಕೂಡ ಬರುವುದಿಲ್ಲವಂತೆ. ಅಂದರೆ ಕಡಿಮೆ ಶಕ್ತಿಯಲ್ಲಿ ಎಸಿಯಂತಹ ಗಾಳಿ ಸಿಗುತ್ತದೆ. ಅದರಲ್ಲಿ ನೈಟ್ ಲೈಟ್ ಕೂಡ ನೀಡಲಾಗಿದೆ.
ಇದನ್ನೂ ಓದಿ- ಈ ಟ್ರಿಕ್ಸ್ ಅನುಸರಿಸಿದರೆ ನಿಮ್ಮ ಸ್ಮಾರ್ಟ್ಫೋನ್ಗಳು ಎಂದಿಗೂ ಸ್ಪೋಟಗೊಳ್ಳುವುದಿಲ್ಲ
ಇಡೀ ಕೋಣೆಯನ್ನು ತಂಪಾಗಿಸುತ್ತದೆ ಒಂದು ಚೊಂಬು ನೀರು:
ತಂಪಾದ ಗಾಳಿಯನ್ನು ಪಡೆಯಲು, ನೀವು ಒಂದು ಚೊಂಬು ನೀರು ಮತ್ತು ಕೆಲವು ಐಸ್ ಕ್ಯೂಬ್ಗಳನ್ನು ಕೂಲರ್ನಲ್ಲಿ ಹಾಕಿದರೆ ಅಷ್ಟೇ ಸಾಕು. ಒಂದೊಮ್ಮೆ ನೀವು ನೀರು ಮತ್ತು ಮಂಜುಗಡ್ಡೆಯನ್ನು ಹಾಕದಿದ್ದರೆ, ತಂಪಾದ ಫ್ಯಾನ್ನಂತೆ ಚಲಿಸುತ್ತದೆ. ಕೂಲರ್ ಅನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ವೇಗದಲ್ಲಿ ನಿರ್ವಹಿಸಬಹುದು.
ಪೋರ್ಟಬಲ್ 3 ಇನ್ 1 ಏರ್ ಕೂಲರ್ ಬೆಲೆ:
ಈ ಕೂಲರ್ನ ಬಿಡುಗಡೆಯ ಬೆಲೆ ರೂ. 5,299 ಆಗಿದೆ, ಆದರೆ ಇದನ್ನು ಅಮೆಜಾನ್ನಲ್ಲಿ38% ರಿಯಾಯಿತಿಯೊಂದಿಗೆ 3,299 ರೂ. ಗೆ ಖರೀದಿಸಬಹುದು. ಅಂದರೆ, ಕೂಲರ್ ಮೇಲೆ ರೂ.2 ಸಾವಿರ ಸಂಪೂರ್ಣ ರಿಯಾಯಿತಿ ನೀಡಲಾಗುತ್ತಿದೆ. ತಿಂಗಳಿಗೆ ಕನಿಷ್ಠ 155 ರೂಪಾಯಿ ಪಾವತಿಸಿ ನೀವು ಇದನ್ನು ಖರೀದಿಸಬಹುದು.
ಇದನ್ನೂ ಓದಿ- ಮೊಬೈಲ್ ಫೋನ್ಗಳಿಂದ ಡೇಟಾ ಕದಿಯುತ್ತಿರುವ ಆರೋಪ, ಪ್ರಸಿದ್ದ ಮುಸ್ಲಿಂ ಅಪ್ಲಿಕೇಶನ್ ನಿಷೇಧಿಸಿದ ಗೂಗಲ್
ಮೊಬೈಲ್ ಚಾರ್ಜರ್ ಇದ್ದರೂ ಕೂಲರ್ ರನ್ ಆಗುತ್ತದೆ:
ಇದನ್ನು ಸುಲಭವಾಗಿ ಯುಎಸ್ಬಿ ಮೂಲಕ ಸಂಪರ್ಕಿಸಬಹುದು. ನೀವು ಇದನ್ನು ಮೊಬೈಲ್ ಚಾರ್ಜರ್, ಕಾರ್ ಚಾರ್ಜರ್, ಪವರ್ ಬ್ಯಾಂಕ್ ಅಥವಾ ಲ್ಯಾಪ್ಟಾಪ್ನಿಂದ ಚಲಾಯಿಸಬಹುದು. ನೀವು ಅದನ್ನು ಅಡುಗೆಮನೆಯಲ್ಲಿ, ಕಚೇರಿಯಲ್ಲಿ ಅಥವಾ ಕಾರಿನಲ್ಲಿ ಸುಲಭವಾಗಿ ಬಳಸಬಹುದು. ಇದು ತುಂಬಾ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.