OPPO ತರುತ್ತಿದೆ ಅದ್ಭುತ ವೈಶಿಷ್ಟ್ಯಗಳಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ .!

OPPO A77ನ ಮೂಲ ರೂಪಾಂತರದ ಆರಂಭಿಕ ಬೆಲೆ 16,000 ರೂ.ಗಿಂತ ಕಡಿಮೆಯಿರಲಿದೆ. ಹೈ ಮಾಡೆಲ್ ಬೆಲೆಯೂ ಸ್ವಲ್ಪ ಹೆಚ್ಚಾಗಿರುತ್ತದೆ.  ಸನ್‌ಸೆಟ್ ಆರೆಂಜ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಈ  ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. 

Written by - Ranjitha R K | Last Updated : Aug 1, 2022, 12:14 PM IST
  • ಭಾರತದಲ್ಲಿ ಬಿಡುಗಡೆಯಾಗಲಿದೆ OPPO ಹೊಸ ಸ್ಮಾರ್ಟ್ ಫೋನ್
  • ಇದು OPPO A76ನ ಅಪ್ಡೇಟೆಡ್ ವರ್ಶನ್ ಆಗಿರಲಿದೆ.
  • ಫೋನ್ ಮೇಲಿನ ಆಫರ್ , ಬೆಲೆ ಮತ್ತು ಪ್ರಮುಖ ವಿಶೇಷಣ ಕೂಡಾ ಬಹಿರಂಗ
OPPO ತರುತ್ತಿದೆ ಅದ್ಭುತ ವೈಶಿಷ್ಟ್ಯಗಳಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ .! title=
OPPO A77 smartphone

ಬೆಂಗಳೂರು : OPPO ಶೀಘ್ರದಲ್ಲೇ ಭಾರತದಲ್ಲಿ  ಹೊಸ  ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು  ತಯಾರಿ ನಡೆಸುತ್ತಿದೆ. ಹೌದು, OPPO A77 ಹೆಸರಿನ ಹೊಸ ಮಾದರಿಯ ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇದು ಈ ವರ್ಷದ ಆರಂಭದಲ್ಲಿ ಘೋಷಿಸಲಾದ OPPO A76ನ ಅಪ್ಡೇಟೆಡ್ ವರ್ಶನ್ ಆಗಿರಲಿದೆ. ಆಗಸ್ಟ್ ಮೊದಲ ವಾರದೊಳಗೆ OPPO A77 ಅನ್ನು  ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಈ ಫೋನ್ ಮೇಲಿನ ಆಫರ್, ಬೆಲೆ ಮತ್ತು ಪ್ರಮುಖ ವಿಶೇಷಣಗಳನ್ನು ಸಹ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. 

ಭಾರತದಲ್ಲಿ OPPO A77 ಬೆಲೆ :
OPPO A77ನ ಮೂಲ ರೂಪಾಂತರದ ಆರಂಭಿಕ ಬೆಲೆ 16,000 ರೂ.ಗಿಂತ ಕಡಿಮೆಯಿರಲಿದೆ. ಹೈ ಮಾಡೆಲ್ ಬೆಲೆಯೂ ಸ್ವಲ್ಪ ಹೆಚ್ಚಾಗಿರುತ್ತದೆ. ಸನ್‌ಸೆಟ್ ಆರೆಂಜ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. 

ಇದನ್ನೂ ಓದಿ : WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!

ಭಾರತದಲ್ಲಿ OPPO A77 ಲಾಂಚ್ ದಿನಾಂಕ :
OPPO A77 4G ಫೋನ್ ಆಗಿರಲಿದೆ. ಕಳೆದ ತಿಂಗಳು ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದ A77 5G ಅಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಆಗಸ್ಟ್ 5ರ ಒಳಗೆ ಅಧಿಕೃತವಾಗಿ  ಬಿಡುಗಡೆಯಾಗಲಿದೆ. 

OPPO A77 ವಿಶೇಷಣಗಳು :
ವರದಿಯ ಪ್ರಕಾರ, OPPO A77 60Hz ರಿಫ್ರೆಶ್ ರೇಟ್‌ನೊಂದಿಗೆ 6.56-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು MediaTek Helio G35 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ 8GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ. ಸಾಧನವು 33W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಬ್ಯಾಟರಿ  ಯೂನಿಟ್ ಹೊಂದಿರಲಿದೆ. 

ಇದನ್ನೂ ಓದಿ : ಎಸಿ ಇಲ್ಲದೆಯೂ ರೂಮ್‌ನ್ನು ಕೂಲ್‌ ಮಾಡುತ್ತೆ ಈ ಮೆಷಿನ್‌!

OPPO A77 ಕ್ಯಾಮೆರಾ :
OPPO A77 50MP ಮತ್ತು 2MP ಯ  ಡ್ಯುಯಲ್ ರಿಯರ್ ಕ್ಯಾಮರಾಗಳು  ಮತ್ತು 8MP  ಫ್ರಂಟ್  ಫೇಸಿಂಗ್ ಸೆಲ್ಫಿ ಸ್ನ್ಯಾಪರ್ ಅನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ,  Android 12-ಆಧಾರಿತ ColorOS 12.1 ನೊಂದಿಗೆ ಔಟ್ ಆಫ್ ದಿ ಬಾಕ್ಸ್ ರವಾನೆಯಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News