Oppo Reno 6 4G: 44MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿದೆ Oppo Reno 6 4G ಸ್ಮಾರ್ಟ್‌ಫೋನ್, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ

Oppo Reno 6 4G: ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಪ್ಪೋ ರೆನೋ 6 4 ಜಿ ಯಲ್ಲಿ ನೀಡಲಾಗಿದೆ ಮತ್ತು ಇದು ಸ್ನಾಪ್‌ಡ್ರಾಗನ್ 720 ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.  

Written by - Yashaswini V | Last Updated : Jul 29, 2021, 02:13 PM IST
  • ಒಪ್ಪೊ ರೆನೋ 6 4 ಜಿ ಅನ್ನು ಒಂದೇ ರೂಪಾಂತರದಲ್ಲಿ ಲಭ್ಯವಾಗಲಿದೆ
  • ಇದು 8 ಜಿಬಿ RAM ನೊಂದಿಗೆ 128 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ
  • ಫೋನ್ 6.40 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ
Oppo Reno 6 4G: 44MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿದೆ Oppo Reno 6 4G ಸ್ಮಾರ್ಟ್‌ಫೋನ್, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ title=
Oppo Reno 6 4G Specifications

ನವದೆಹಲಿ: Oppo Reno 6 4G- ತನ್ನ ರೆನೋ ಸರಣಿಯನ್ನು ವಿಸ್ತರಿಸುತ್ತಾ ಒಪ್ಪೊ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಒಪ್ಪೋ ರೆನೋ 6 4 ಜಿ (Oppo Reno 6 4G) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಿಂದೆ ಕಂಪನಿಯು ಈ ಸ್ಮಾರ್ಟ್‌ಫೋನ್‌ನ 5 ಜಿ ಮಾದರಿಯನ್ನು ಪರಿಚಯಿಸಿದೆ. ಒಪ್ಪೋದ ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ  4 ಜಿ ಮತ್ತು 5 ಜಿ ಹೊರತಾಗಿ ಕ್ಯಾಮೆರಾ ಮತ್ತು ಬ್ಯಾಟರಿಯಲ್ಲೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಲಾಗಿದೆ. 

ಒಪ್ಪೋ ರೆನೋ 6 4 ಜಿ (Oppo Reno 6 4G) ಸ್ಮಾರ್ಟ್‌ಫೋನ್ (Smartphone) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720 ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ 5 ಜಿ ಮಾದರಿಯು ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಒಪ್ಪೋ ರೆನೋ 6 4 ಜಿ ಯ ಬೆಲೆ, ಲಭ್ಯತೆ ಮತ್ತು ವಿಶೇಷಣಗಳ ಬಗ್ಗೆ ತಿಳಿಯಲು ಮುಂದೆ ಓದಿ...

ಇದನ್ನೂ ಓದಿ -  NOKIA ಲಾಂಚ್ ಮಾಡಿದೆ ಅದ್ಬುತ ಸ್ಮಾರ್ಟ್ ಫೋನ್, ಮೂರು ದಿನಗಳವರೆಗೆ ನಿಲ್ಲಲ್ಲಿದೆ ಬ್ಯಾಟರಿ ಚಾರ್ಜ್

ಒಪ್ಪೋ ರೆನೋ 6 4 ಜಿ: ಬೆಲೆ ಮತ್ತು ಲಭ್ಯತೆ: 
ಒಪ್ಪೊ ರೆನೋ 6 4 ಜಿ (Oppo Reno 6 4G) ಅನ್ನು ಸದ್ಯಕ್ಕೆ ಇಂಡೋನೇಷ್ಯಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಒಂದೇ ರೂಪಾಂತರದಲ್ಲಿ ಲಭ್ಯವಾಗಲಿದೆ. ಇದು 8 ಜಿಬಿ RAM ನೊಂದಿಗೆ 128 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಫೋನ್ 6.40 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. 
ಒಪ್ಪೋ ರೆನೊ 6 4 ಜಿ  4320mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿ ತಿಳಿಸಿದೆ.  

ಇದನ್ನೂ ಓದಿ -  Jio ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ Netflix, Amazon Prime, Disney+ Hotstar ಚಂದಾದಾರಿಕೆ

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಪ್ಪೊ ರೆನೋ 6 4 ಜಿ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಎಫ್ / 1.7 ದ್ಯುತಿರಂಧ್ರ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಎಫ್ / 2.4 ದ್ಯುತಿರಂಧ್ರ, ಮತ್ತು ಎಫ್ / 2.4 ದ್ಯುತಿರಂಧ್ರ ಹೊಂದಿರುವ 2 ಮೆಗಾಪಿಕ್ಸೆಲ್ ಏಕವರ್ಣದ ಮಸೂರ ಇದೆ. ಮುಂಭಾಗದಲ್ಲಿ, ಒಪ್ಪೊ ರೆನೋ 6 4 ಜಿ (Oppo Reno 6 4G) 44 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒಪ್ಪೊ ರೆನೋ 6 4 ಜಿ ಬೆಲೆ ಐಡಿಆರ್ 5,199,000 ಅಂದರೆ 26,700 ರೂ. ಆಗಿದ್ದು ಇದು ಸ್ಟೆಲ್ಲಾರ್ ಬ್ಲ್ಯಾಕ್ ಮತ್ತು ಅರೋರಾ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಆದರೆ, ಈ ಸ್ಮಾರ್ಟ್‌ಫೋನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಇನ್ನೂ ಯಾವುದೇ ಪ್ರಕಟಣೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News