ದಿನಭವಿಷ್ಯ 08-01-2025: ಬುಧವಾರದಂದು ಅಶ್ವಿನಿ ನಕ್ಷತ್ರದಲ್ಲಿ ಸಿದ್ಧ ಯೋಗ: ಈ 6 ರಾಶಿಯವರಿಗೆ ಭಾಗ್ಯೋದಯ

Today Horoscope 08th January 2025: ಈ ದಿನ ಬುಧವಾರ, ಅಶ್ವಿನಿ ನಕ್ಷತ್ರ, ಸಿದ್ಧ ಯೋಗ, ತೈತಿಲ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jan 8, 2025, 07:58 AM IST
  • ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ ಬುಧವಾರ
  • ಅಶ್ವಿನಿ ನಕ್ಷತ್ರ, ಸಿದ್ಧ ಯೋಗ, ತೈತಿಲ ಕರಣ.
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 08-01-2025:  ಬುಧವಾರದಂದು ಅಶ್ವಿನಿ ನಕ್ಷತ್ರದಲ್ಲಿ ಸಿದ್ಧ ಯೋಗ: ಈ 6 ರಾಶಿಯವರಿಗೆ ಭಾಗ್ಯೋದಯ  title=

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ ಬುಧವಾರ, ಅಶ್ವಿನಿ ನಕ್ಷತ್ರ, ಸಿದ್ಧ ಯೋಗ, ತೈತಿಲ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಸಂಬಂಧಗಳು ಬಲಗೊಳ್ಳಲಿವೆ. ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಉದ್ಯೋಗ ರಂಗದಲ್ಲಿ ನೀವು ಕೈಗೊಂಡ ಪ್ರಮುಖ ಕೆಲಸಗಳಲ್ಲಿ ಜಯಶಾಲಿ ಆಗುವಿರಿ. ವ್ಯಾಪಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಯಾವುದೇ ಕಾರಣಕ್ಕೂ ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರದಿರಿ. ಇಲ್ಲವೇ, ಭವಿಷ್ಯದಲ್ಲಿ ಇದು ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು. ವಿದೇಶ ವ್ಯವಹಾರಗಳಲ್ಲಿ ಭಾರೀ ಲಾಭ ಸಾಧ್ಯತೆ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸೌಮ್ಯತೆ ಇದ್ದರೆ ಒಳಿತು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ವೃತ್ತಿಪರರಿಗೆ ನಿಮ್ಮ ಕೆಲಸ ನಿರ್ವಹಣೆ ಸುಧಾರಿಸಲಿದೆ. ವ್ಯಾಪಾರವನ್ನು ವಿಸ್ತರಿಸಲು ನೀವು ಉತ್ಸುಕರಾಗಿರುವಿರಿ. ವೃತ್ತಿ-ವ್ಯವಹಾರದಲ್ಲಿ ಗಮನ ಕೇಂದ್ರೀಕರಿಸಿ. ಸ್ಪರ್ಧಾತ್ಮಕ ಮನೋಭಾವದಿಂದ ಮುಂದುವರೆಯುವುದರಿಂದ ಯಶಸ್ಸು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕೆಲಸ ಮತ್ತು ವ್ಯವಹಾರವು ಸಂಘಟಿತವಾಗಿ ಉಳಿಯುತ್ತವೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಕೈಗಾರಿಕಾ ಕ್ಷೇತ್ರದಲ್ಲಿರುವವರ ಕೀರ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ ಹೆಚ್ಚು ಗಮನವಹಿಸುವುದರಿಂದ ಮೇಲುಗೈ ನಿಮ್ಮದೇ ಆಗಲಿದೆ. 

ಇದನ್ನೂ ಓದಿ- 12ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ಹಣದ ಸುರಿಮಳೆ, ಕೋಟ್ಯಾಧಿಪತಿಯಾಗುವ ಯೋಗ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮಗೆ ಭಾರೀ ಅದೃಷ್ಟದ ದಿನ. ಮಹತ್ವದ ವಿಷಯಗಳಲ್ಲಿ ವೇಗವನ್ನು ಪಡೆಯುವಿರಿ. ಕೈಗಾರಿಕೆ ಮತ್ತು ವ್ಯಾಪಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಕಾಣುವಿರಿ. ಹೊಸ ವ್ಯವಹಾರಗಳನ್ನು ಆರಂಭಿಸುವಾಗ ಹಿರಿಯರ ಮಾರ್ಗದರ್ಶನದಂತೆ ಮುಂದುವರೆದರೆ ಶುಭ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಕುಟುಂಬ ಸದಸ್ಯರ ನಂಬಿಕೆ ಮತ್ತು ಬೆಂಬಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈಯಕ್ತಿಕ ಸಂಬಂಧಗಳು ಲಾಭದಾಯಕವಾಗಿರಲಿದೆ. ವೃತ್ತಿ ವ್ಯವಹಾರದಲ್ಲಿ ನಿಮ್ಮ ಆಕರ್ಷಕ ಮಾತಿನಿಂದ ಎಂತಹವರನ್ನೂ ನಿಮ್ಮತ್ತ ಆಕರ್ಷಿಸುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯೂ ನಿರೀಕ್ಷೆಗಿಂತ ಹೆಚ್ಚಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಾರಿ ಲಾಭವನ್ನು ಕಾಣುವಿರಿ. ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರು ಈ ನಿಟ್ಟಿನಲ್ಲಿ ಕೂಲಂಕುಷವಾಗಿ ಯೋಚಿಸಿ ನಿರ್ಧರಿಸಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಕಠಿಣ ಪರಿಶ್ರಮವು ಅನುಕೂಲಕರ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕೆಲಸ ಮತ್ತು ವ್ಯವಹಾರಗಳಲ್ಲಿ ನೀವು ಹೆಚ್ಚು ಅಲರ್ಟ್ ಆಗುವುದರಿಂದ ಹೆಚ್ಚು ಲಾಭ. ಉದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದು ಒಳ್ಳೆಯದು. 

ಇದನ್ನೂ ಓದಿ- ಧರ್ಮಸ್ಥಳದಲ್ಲೂ ತಿರುಪತಿ ಮಾದರಿ: ಏನೆಲ್ಲಾ ಹೊಸ ವ್ಯವಸ್ಥೆ ಮಾಡಲಾಗಿದೆ ಗೊತ್ತಾ...?

ಧನು ರಾಶಿಯವರ ಭವಿಷ್ಯ (Sagittarius Horoscope):  

ಸೃಜನಶೀಲ ಚಟುವಟಿಕೆಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನೀವು ಹೊಸ ವಿಷಯಗಳಲ್ಲಿ ಆಸಕ್ತಿ ತೋರುವಿರಿ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಯತ್ನಗಳು ಸುಧಾರಿಸಲಿವೆ. ನಿಮ್ಮ ಆಪ್ತರೊಂದಿಗೆ ಇಂದು ಉತ್ತಮ ಸಮಯವನ್ನು ಕಳೆಯುವಿರಿ. ವ್ಯಾಪಾರಸ್ಥರಿಗೆ ಲಾಭದ ಅವಕಾಶಗಳು ಹೆಚ್ಚು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ವೈಯಕ್ತಿಕ ಪ್ರಯತ್ನಗಳಲ್ಲಿ ಯಶಸ್ಸು ಗಳಿಸುವಿರಿ. ನಿರ್ದಿಷ್ಟ ವ್ಯಕ್ತಿಗಳು ಇಂದು ನಿಮ್ಮ ಸಮಯವನ್ನು ಸೆಳೆಯಬಹುದು. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ. ಅತಿಯಾದ ಉತ್ಸಾಹ ಮತ್ತು ಹಠಾತ್ ಪ್ರವೃತ್ತಿಯನ್ನು ತಪ್ಪಿಸುವುದು ಒಳ್ಳೆಯದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವ್ಯಾಪಾರಸ್ಥರಿಗೆ ಇಂದು ಬಂಪರ್ ಲಾಭ. ಸಾಂಪ್ರದಾಯಿಕ ವ್ಯವಹಾರಗಳಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಕುಟುಂಬಸ್ಥರು ಇಂದು ಪರಸ್ಪರ ಉತ್ಸಾಹವನ್ನೂ ಕಾಪಾಡಿಕೊಳ್ಳುವರು. ಕುಟುಂಬದವರೊಂದಿಗೆ ಆತ್ಮೀಯತೆ ಹೆಚ್ಚಾಗಲಿದೆ.  ಆರ್ಥಿಕ ಮತ್ತು ವಾಣಿಜ್ಯ ಪ್ರಯತ್ನಗಳಲ್ಲಿ ಗಮನವಿರಲಿ. ಉದ್ಯೋಗ ರಂಗದಲ್ಲಿ ನಡವಳಿಕೆಯಲ್ಲಿ ಮಾಧುರ್ಯ ಕಾಪಾಡಿಕೊಂಡರೆ ಒಳಿತು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News