Government Ban On VPN, Google Drive - ನೌಕರರು ಥರ್ಡ್ ಪಾರ್ಟಿ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳನ್ನು (VPN) ಬಳಸುವುದನ್ನು ಸರ್ಕಾರ ನಿಷೇಧಿಸಿದೆ. Express VPN, Surfshark ಹಾಗೂ Nord VPN ಗಳು ಭಾರತೀಯ ಮಾರುಕಟ್ಟೆಯನ್ನು ತೊರೆಯಲು ನಿರ್ಧರಿಸಿದ ಬಳಿಕ ಬಂದ ಸರ್ಕಾರದ ಈ ನಿರ್ಧಾರವು ಭಾರಿ ಮಹತ್ವಪಡೆದುಕೊಂಡಿದೆ. ಇತ್ತೀಚೆಗಷ್ಟೇ ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In), VPN ಸೇವಾ ಪೂರೈಕೆದಾರರು ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿಹೇಳಿತ್ತು.
ಆದರೆ ಇದೀಗ, ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (Cert-In) ಸರ್ಕಾರಿ ನೌಕರರಿಂದ ಥರ್ಡ್ ಪಾರ್ಟಿ VPN ಗಳ ಬಳಕೆಯ ಮೇಲೆ ನಿಷೇಧವಿಧಿಸಿದ್ದು, Google ಡ್ರೈವ್, ಡ್ರಾಪ್‌ಬಾಕ್ಸ್‌ನಂತಹ ಸರ್ಕಾರೇತರ ಕ್ಲೌಡ್ ಸೇವೆಗಳಿಗೆ ಯಾವುದೇ ರೀತಿಯ ಆಂತರಿಕ ಮತ್ತು ವಿಶ್ವಾಸಾರ್ಹ ಸರ್ಕಾರಿ ಫೈಲ್‌ಗಳನ್ನು ಅಪ್‌ಲೋಡ್ ಮಾಡದಂತೆ ಸೂಚಿಸಿದೆ..
ಸೈಬರ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಸಂಸ್ಥೆಯಾದ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಹೇಳಿದೆ.
ಎನ್‌ಐಸಿ ಹೇಳಿದ್ದೇನು?
ಸರ್ಕಾರಿ ಇಲಾಖೆಗಳು ಮತ್ತು ಗುತ್ತಿಗೆ ಅಥವಾ ಹೊರಗುತ್ತಿಗೆ ಸಂಪನ್ಮೂಲಗಳಲ್ಲಿ ಕೆಲಸ ಮಾಡುವ ನೌಕರರಲ್ಲಿ ಸೈಬರ್ ಸುರಕ್ಷತೆಯ ಅರಿವನ್ನು ಹೆಚ್ಚಿಸಲು ಇದನ್ನು ನಿರ್ಧರಿಸಲಾಗಿದೆ, ಇದರಿಂದಾಗಿ ಡಿಜಿಟಲ್ ಜಗತ್ತಿನಲ್ಲಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ ಎಂದು ಎನ್ಐಸಿ ಹೇಳಿದೆ, ಈ ನಿಟ್ಟಿನಲ್ಲಿ ಈ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್ನೊಂದೆಡೆ ಸರ್ಕಾರಿ ನೌಕರರು ಎಂದಿಗೂ 'ಜೆಲ್ ಬ್ರೇಕ್' ಮಾಡಬಾರದು ಮತ್ತು ಕ್ಯಾಮ್‌ಸ್ಕಾನರ್‌ನಂತಹ ಸ್ಕ್ಯಾನರ್ ಸೇವೆಗಳನ್ನು ಒದಗಿಸುವ ಬಾಹ್ಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ತಮ್ಮ ಮೊಬೈಲ್ ಫೋನ್‌ಗಳಿಗೆ ಬಳಸದಂತೆ ಎನ್ಐಸಿ ಕೇಳಿಕೊಂಡಿದೆ. ಈ ಆ್ಯಪ್‌ಗಳಿಂದ ವಿಶೇಷವಾಗಿ ಸರ್ಕಾರಿ ಇಲಾಖೆಗಳಿಗೆ ನೀಡಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಡಿ ಎಂದು ಇಲಾಖೆ ಸೂಚಿಸಿದೆ.
ಇದನ್ನೂ ಓದಿ-Jio ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್! ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳ ದರಗಳಲ್ಲಿ ಶೇ.20 ರಷ್ಟು ಹೆಚ್ಚಳ
2020 ರಲ್ಲಿ, ಚೈನೀಸ್ ಅಪ್ಲಿಕೇಶನ್ ಆಗಿರುವ CamScanner ಅನ್ನು ಇತರ ಆಪ್ ಗಳಂತೆಯೇ ಸರ್ಕಾರ ನಿಷೇಧಿಸಿರುವುದು ಇಲ್ಲಿ ಗಮನಾರ್ಹ. ಚೀನಾದ ಈ ಆ್ಯಪ್ ಗಳಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಸರ್ಕಾರ ಹೇಳಿತ್ತು. ಅಂದಿನಿಂದ ಸರ್ಕಾರಿ ಕಚೇರಿಗಳಲ್ಲಿ ಸೈಬರ್ ಭದ್ರತೆ ಹೆಚ್ಚಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಇದಕ್ಕೂ ಮೊದಲು ಏಪ್ರಿಲ್ 28ರಿಂದ ವಿಪಿಎನ್ ಕಂಪನಿಗಳಿಗೆ ಸೂಚನೆ ನೀಡಿದ್ದ ಕೇಂದ್ರೀಯ ನೋಡಲ್ ಏಜೆನ್ಸಿ ಸರ್ಟ್-ಇನ್, ಅವುಗಳು ಭಾರತದಿಂದಲೇ ಕಾರ್ಯನಿರ್ವಹಿಸಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಇದಲ್ಲದೆ, ಪ್ರತಿಯೋಬ್ಬ ಗ್ರಾಹಕರ ಹೆಸರು, ವಿಳಾಸ ಮತ್ತು VPN ಬಳಸುವ ಉದ್ದೇಶ ಸೇರಿದಂತೆ ಲಾಗಿನ್ ವಿವರಗಳನ್ನು ನಮೂದಿಸುವುದು ಕಡ್ಡಾಯಗೊಳಿಸಿತ್ತು. ವಿಪಿಎನ್ ಪೂರೈಕೆದಾರರ ಕುರಿತು ಕಠಿಣ ನಿಲುವು ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಸರ್ಕಾರದ ಈ ಮಾರ್ಗಸೂಚಿಗಳನ್ನು ಅನುಸರಿಸದ ಕಂಪನಿಗಳು ಭಾರತವನ್ನು ತೊರೆಯಬಹುದು ಎಂದು ಹೇಳಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.