ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ

ಇನ್ನು ಮುಂದೆ  ವಾಟ್ಸಾಪ್ ಚಾಟ್ ಇನ್ನಷ್ಟು ಸುರಕ್ಷಿತವಾಗಿರಲಿದೆ. ಶೀಘ್ರದಲ್ಲಿ ವಾಟ್ಸ್ ಆಪ್ End-to end encrypted ಬ್ಯಾಕ್ ಅಪ್ ವೈಶಿಷ್ಟ್ಯವನ್ನು ಸೇರಿಸಲಿದೆ.   

Written by - Ranjitha R K | Last Updated : Jun 11, 2021, 11:02 AM IST
  • ವಾಟ್ಸ್ಆಪ್ ಚಾಟ್ ಇನ್ನಷ್ಟು ಸುರಕ್ಷಿತ
  • ಶೀಘ್ರದಲ್ಲಿ ಬರಲಿದೆ ವಾಟ್ಸ್ ಆಪ್ End-to end encrypted ಬ್ಯಾಕ್ ಅಪ್ ವೈಶಿಷ್ಟ್ಯ
  • ಹೇಗೆ ಕೆಲಸ ಮಾಡಲಿದೆ ಎಂಡ್ ಟು-ಎಂಡ್ ಎನ್‌ಕ್ರಿಪ್ಟ್
ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ title=
ವಾಟ್ಸ್ಆಪ್ ಚಾಟ್ ಇನ್ನಷ್ಟು ಸುರಕ್ಷಿತ (file photo)

ನವದೆಹಲಿ : ವಾಟ್ಸಾಪ್ (WhatsApp) ಬಳಕೆದಾರರು ತಮ್ಮ ಚಾಟ್, ವಿಡಿಯೋ ಮತ್ತು ಫೋಟೋಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ಚಾಟ್, ಪೋಟೋ, ವಿಡಿಯೋ ಲೀಕ್ ಆಗುವ ಭಯ ಸದಾ ಬಳಕೆದಾರರನ್ನು ಕಾಡುತ್ತಿರುತ್ತದೆ. ಈ ಸಂದರ್ಭದಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (End-to end encrypted ) ಉಪಯೋಗಕ್ಕೆ ಬರುತ್ತದೆ. ಇನ್ನು ಮುಂದೆ  ವಾಟ್ಸಾಪ್ ಚಾಟ್ (whatsapp chat) ಇನ್ನಷ್ಟು ಸುರಕ್ಷಿತವಾಗಿರಲಿದೆ. ಶೀಘ್ರದಲ್ಲಿ ವಾಟ್ಸ್ ಆಪ್ End-to end encrypted ಬ್ಯಾಕ್ ಅಪ್ ವೈಶಿಷ್ಟ್ಯವನ್ನು ಸೇರಿಸಲಿದೆ. ಒಂದು ಸಲ  ಫೀಚರ್ ಬಂದರೆ , ನಿಮ್ಮ ಚಾಟ್, ಫೋಟೋ, ವಿಡಿಯೋ ಸೇಫ್ ಆಗಿರಲಿದೆ. 

ಹೇಗೆ ಕೆಲಸ ಮಾಡಲಿದೆ ಎಂಡ್ ಟು-ಎಂಡ್ ಎನ್‌ಕ್ರಿಪ್ಟ್ : 
ವರದಿಯ ಪ್ರಕಾರ, ಕಂಪನಿಯು ವಾಟ್ಸಾಪ್ ಚಾಟ್‌ಗಳನ್ನು (Whatsapp chat) ಸುರಕ್ಷಿತವಾಗಿರಿಸಲು 64 ಡಿಜಿಟ್ ಎನ್‌ಕ್ರಿಪ್ಶನ್ ತಂತ್ರಜ್ಞಾನವನ್ನು ಬಳಸುತ್ತಿದೆ. ಕಂಪನಿಯು ವಾಟ್ಸಾಪ್ ಚಾಟ್ ಬ್ಯಾಕಪ್‌ಗಳನ್ನು (Whatsapp chat backup) ಎನ್‌ಕ್ರಿಪ್ಟ್ ಮಾಡಲು ಹೆಕ್ಸಾಡೆಸಿಮಲ್ ಅನ್ನು ಬಳಸಲು ನಿರ್ಧರಿಸಿದೆ. ಇದಾದ ನಂತರ ಫೇಸ್‌ಬುಕ್ (Facebook), ವಾಟ್ಸಾಪ್, ಗೂಗಲ್ (Google) ಅಥವಾ ಆಪಲ್‌ನೊಂದಿಗೆ (Apple) ಹಂಚಿಕೊಳ್ಳಲಾಗದ ಪಾಸ್‌ವರ್ಡ್‌ನೊಂದಿಗೆ ಗೂಗಲ್ ಡ್ರೈವ್‌ನಲ್ಲಿ (Google drive) ಬಳಕೆದಾರರ ಚಾಟ್ ಬ್ಯಾಕಪ್‌ಗಳು ಸುರಕ್ಷಿತವಾಗಿರುತ್ತವೆ. ಪೋನ್ ನಲ್ಲಿ ವಾಟ್ಸ್ಆಪ್ ಅನ್ನು ರಿಸೆಟ್ ಮಾಡುವುದಾದರೆ, ಡೀಕ್ರಿಪ್ಟ್ ಮಾಡಲು ನೋಂದಾಯಿತ ಪಾಸ್ಕೋಡ್ ಅನ್ನು ಟೈಪ್ ಮಾಡುವಂತೆ ಸೂಚಿಸಲಾಗುತ್ತದೆ. ಇದರ ಕಂಟೆಮಟನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ : Whatsapp call : ವಾಟ್ಸ್ ಆಪ್ ನಲ್ಲಿಯೂ ಒಂದೇ ಸಲ 50 ಜನರಿಗೆ ಕರೆ ಮಾಡಬಹುದು

ಪಾಸ್ ವರ್ಡ್ ಮರೆತು ಹೋದರೆ ಏನು ಮಾಡಬೇಕು: 
ಒಂದು ವೇಲೆ ನೀವು ಪಾಸ್‌ವರ್ಡ್ (Password) ಅನ್ನು ಮರೆತರೆ, ಎನ್‌ಕ್ರಿಪ್ಟ್ ಮಾಡಲಾದ ಎಂಡ್-ಟು-ಎಂಡ್ ಬ್ಯಾಕಪ್ ಅನ್ನು ರಿಸೆಟ್ ಮಾಡಲು ವಾಟ್ಸಾಪ್ ನಿಮಗೆ ಸಹಾಯ ಮಾಡುತ್ತದೆ. ವಾಟ್ಸಾಪ್ (whatsapp) ಒಂದು ರಿಕವರಿ ಕೀಯನ್ನು ಸೆಟ್ ಮಾಡುತ್ತದೆ. ಒಣದು ವೇಲೆ ನೀವು ಪಾಸ್ ವರ್ಡ್ ಮರೆತರೆ, ರಿಕವರಿ ಕೀ ಸಹಾಯದಿಂದ ಬ್ಯಾಕ್ ಅಪ್ ರಿಸ್ಟೋರ್ ಮಾಡಬಹುದಾಗಿದೆ.   

ಇದನ್ನೂ ಓದಿ : ಎಚ್ಚರವಿರಲಿ..! ನಿಮ್ಮ ವಾಟ್ಸಾಪ್ ಚಾಟ್ಸ್ ಮತ್ತು ಖಾಸಗೀ ಫೋಟೋಸ್ ಹೀಗೆ ಲೀಕ್ ಆಗಬಹುದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News