Nasal Vaccine: ಇನ್ಮುಂದೆ ಮೂಗಿನ ಮೂಲಕ ಕೂಡ ಕೋರೋನಾ ಲಸಿಕೆಯನ್ನು ಕೊಡಬಹುದು

Intranasal vaccine: ಕರೋನಾ ವೈರಸ್ ಗಾಗಿ ಎರಡು ಡೋಸ್ ನೀಡಲಾಗುವ ನೆಸಲ್ ವ್ಯಾಕ್ಸಿನ್ ಪರೀಕ್ಷೆಯನ್ನು ಒಟ್ಟು 3100 ಜನರ ಮೇಲೆ ನಡೆಸಲಾಗಿದೆ. ಭಾರತದ ವಿವಿಧ 14 ಪ್ರದೇಶಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಇದಲ್ಲದೆ ವೈವಿಧ್ಯಮಯ ಬೂಸ್ಟರ್ ಡೋಸ್‌ನ ಪರೀಕ್ಷೆಯನ್ನು ಸುಮಾರು 875 ಜನರ ಮೇಲೆ ನಡೆಸಲಾಗಿದೆ ಮತ್ತು ಈ ಪರೀಕ್ಷೆಗಳನ್ನು ಭಾರತದಲ್ಲಿ 9 ವಿವಿಧ ಸ್ಥಳಗಳಲ್ಲಿ ನಡೆಸಲಾಗಿದೆ.  

Written by - Nitin Tabib | Last Updated : Aug 15, 2022, 05:22 PM IST
  • ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿರುವ ಇಂದಿನ ಸಂದರ್ಭದಲ್ಲಿ ಭಾರತ ಕರೋನಾ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ.
  • ಮೂಗಿನ ಮೂಲಕ ನೀಡಲಾಗುವ ಕೊರೊನಾ ಲಸಿಕೆ ಪರೀಕ್ಷೆಯಲ್ಲಿ ಕೋವ್ಯಾಕ್ಸಿನ್ ಉತ್ಪಾದಕ ಕಂಪನಿಯಾಗಿರುವ ಭಾರತ್ ಬಯೋಟೆಕ್ ಗಮನಾರ್ಹ ಯಶಸ್ಸನ್ನು ಸಾಧಿಸಿದೆ.
Nasal Vaccine: ಇನ್ಮುಂದೆ ಮೂಗಿನ ಮೂಲಕ ಕೂಡ ಕೋರೋನಾ ಲಸಿಕೆಯನ್ನು ಕೊಡಬಹುದು title=
Indian First Nasal Vaccine Trail Complete

Bharat Biotech Intra Nasal Vaccine: ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿರುವ ಇಂದಿನ ಸಂದರ್ಭದಲ್ಲಿ ಭಾರತ ಕರೋನಾ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದೆ. ಮೂಗಿನ ಮೂಲಕ ನೀಡಲಾಗುವ ಕೊರೊನಾ ಲಸಿಕೆ ಪರೀಕ್ಷೆಯಲ್ಲಿ ಕೋವ್ಯಾಕ್ಸಿನ್ ಉತ್ಪಾದಕ ಕಂಪನಿಯಾಗಿರುವ ಭಾರತ್ ಬಯೋಟೆಕ್ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಈ ಲಸಿಕೆಯ ವೈಜ್ಞಾನಿಕ ಹೆಸರು BBV154 ಆಗಿದ್ದು, ಮೂಗಿನ ಮೂಲಕ ನೀಡಲಾಗುವ ಈ ಲಸಿಕೆಯ ಎರಡು ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಪರೀಕ್ಷೆ ಎರಡು-ಡೋಸ್ ಪ್ರಾಥಮಿಕ ಕರೋನಾ ಲಸಿಕೆ ಮತ್ತು ಎರಡನೆಯದು ಬೂಸ್ಟರ್ ಡೋಸ್‌ನೊಂದಿಗೆ ಪರೀಕ್ಷೆ ನಡೆಸಲಾಗಿದೆ, ಇದನ್ನು ಕೋವ್‌ಶೀಲ್ಡ್ ಮತ್ತು ಕೋವ್ಯಾಕ್ಸಿನ್ ಅನ್ನು ಪಡೆದ ಜನರಿಗೆ ನೀಡಬಹುದಾಗಿದೆ. ಈ ಕುರಿತಾದ ಮಾನವ ಕ್ಲಿನಿಕಲ್ ಟ್ರಯಲ್ಸ್ ನ ಮೂರನೇ ಹಂತ ಪೂರ್ಣಗೊಂಡಿದ್ದು, ಅದರ ದತ್ತಾಂಶಗಳನ್ನೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಲಾಗಿದೆ. ಈಗ ಡ್ರಗ್ ಕಂಟ್ರೋಲರ್‌ನ ವಿಷಯ ತಜ್ಞರ ಸಮಿತಿಯು ಈ ಡೇಟಾವನ್ನು ಪರಿಶೀಲಿಸಲಿದೆ.

ಪ್ರಯೋಗದಲ್ಲಿ ಅತ್ಯುತ್ತಮ ಫಲಿತಾಂಶಗಳು
ಕರೋನಾ ವೈರಸ್ ಗೆ ಎರಡು ಡೋಸ್ ಮೂಗಿನ ಲಸಿಕೆ ಪ್ರಯೋಗಗಳನ್ನು ಒಟ್ಟು 3100 ಜನರ ಮೇಲೆ ನಡೆಸಲಾಗಿದೆ. ಭಾರತದಲ್ಲಿ 14 ಸ್ಥಳಗಳಲ್ಲಿ ಈ ಪ್ರಯೋಗಗಳನ್ನು ನಡೆಸಲಾಗಿದೆ. ಇನ್ನೊಂದೆಡೆ ವೈವಿಧ್ಯಮಯ ಬೂಸ್ಟರ್ ಡೋಸ್‌ನ ಪ್ರಯೋಗಗಳನ್ನು ಒಟ್ಟು 875 ಜನರ ಮೇಲೆ ನಡೆಸಲಾಗಿದೆ ಮತ್ತು ಈ ಪ್ರಯೋಗಗಳನ್ನು ಭಾರತದ 9 ಸ್ಥಳಗಳಲ್ಲಿ ನಡೆಸಲಾಗಿದೆ. ಎರಡೂ ಅಧ್ಯಯನಗಳಲ್ಲಿ, ಭಾಗವಹಿಸಿದವರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿಲ್ಲ. ಹೆಟೆರೊಲಾಜಸ್ ಬೂಸ್ಟರ್ ಡೋಸ್ ಅಂದರೆ ಕೋವ್ಯಾಕ್ಸಿನ್ ಮತ್ತು ಕೋವ್‌ಶೀಲ್ಡ್ ಪಡೆದ ಜನರು ಸಹ ಇದನ್ನು ಪಡೆಯಲು ಸಾಧ್ಯವಾಗಲಿದೆ.
  
ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ಈ ಮೂಗಿನ ಮೂಲಕ ನೀಡಲಾಗುವ ಈ ಲಸಿಕೆಯು ಉಸಿರಾಟದ ವ್ಯವಸ್ಥೆಯಲ್ಲಿ ಕರೋನಾ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ, ಅಂದರೆ, ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಇದು ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕನ್ನು ಕಡಿಮೆ ಹರಡುವಂತೆ ನೋಡಿಕೊಳ್ಳುತ್ತದೆ. ಆದರೆ, ಈ ಬಗ್ಗೆ ಹೆಚ್ಚಿನ ಅಧ್ಯಯನವೂ ಕೂಡ ನಡೆಸಲಾಗುತ್ತಿದೆ. ವಾಷಿಂಗ್ಟನ್‌ನ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಈ ಲಸಿಕೆಯನ್ನು ತಯಾರಿಸಿದೆ.

ಇದನ್ನೂ ಓದಿ-Health Tips: ಡಯಾಬಿಟಿಸ್ ರೋಗಿಗಳಿಗೆ ವರದಾನಕ್ಕೆ ಸಮಾನ ಈ ಹಣ್ಣು, ವಿಟಮಿನ್ ಗಳ ಪವರ್ ಹೌಸ್ ಎನ್ನಲಾಗುತ್ತದೆ

ಈ ರಾಜ್ಯಗಳಲ್ಲಿ ಲಸಿಕೆ ಸಿದ್ಧವಾಗಲಿದೆ
ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಕೋವಿಡ್ ಪ್ರೊಟೆಕ್ಷನ್ ಪ್ರೋಗ್ರಾಂ ಅಡಿಯಲ್ಲಿ ಈ ಲಸಿಕೆಗೆ ಭಾಗಶಃ ಹಣವನ್ನು ನೀಡಿದೆ. ಸ್ವಾತಂತ್ರ್ಯ ದಿನದಂದು ಈ ಮಾಹಿತಿಯನ್ನು ಹಂಚಿಕೊಂಡ ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಇಲ್ಲಾ, ದೇಶದ ಮೊಟ್ಟಮೊದಲ ಮೂಗಿನ ಮೂಲಕ ನೀಡಲಾಗುವ ಲಸಿಕೆ ಅಭಿವೃದ್ಧಿಪಡಿಸುವುದು ಆರ್ಥಿಕವಾಗಿ ಒಂದು ಅಗ್ಗದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ, ಈ ಲಸಿಕೆಯನ್ನು 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಬಹುದು. ಗುಜರಾತ್, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದ ಘಟಕಗಳಲ್ಲಿ ಇದನ್ನು ಉತ್ಪಾದಿಸುವ ಕೆಲಸ ನಡೆಯಲಿದೆ.

ಇದನ್ನೂ ಓದಿ-ದೇಹದ ಪ್ರೋಟೀನ್ ಕೊರತೆ ನೀಗಿಸುತ್ತದೆ ಈ ಐದು ಬಗೆಯ ಸಸ್ಯಾಹಾರ

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ಬಲವಾಗಿ ಹೋರಾಡುತ್ತಿರುವ ದೇಶದ ಜನತೆ ಮತ್ತು ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೆಂಪು ಕೋಟೆಯ ಆವರಣದಿಂದ ಮಾಡಿದ ಭಾಷಣದಲ್ಲಿ, ಭಾರತವು 200 ಕೋಟಿ ಡೋಸ್ ಕರೋನಾ ಲಸಿಕೆಯನ್ನು ಜನರಿಗೆ ಸಮಯಕ್ಕೆ ಅನುಗುಣವಾಗಿ ನೀಡುವ ದಾಖಲೆಯನ್ನು ಪೂರ್ಣಗೊಳಿಸಿದೆ, ಇದು ಬೇರೆ ಯಾವುದೇ ದೇಶಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೊರೊನಾ ವಿರುದ್ಧದ ಹೋರಾಟವು ಸಾಮೂಹಿಕ ಜನಜಾಗ್ರತಿಯ ಮತ್ತೊಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News