Mysterious Signals: ಬಾಹ್ಯಾಕಾಶದಿಂದ ಬರುತ್ತಿವೆ ಈ ನಿಗೂಢ ಸಿಗ್ನಲ್ ಗಳು, ಏಲಿಯನ್ ಸದ್ದು ಇದಲ್ಲ ಆದರೆ, ಭಯಹುಟ್ಟಿಸುವಂತಿವೆ ಎಂದ ವಿಜ್ಞಾನಿಗಳು

Mysterious Signals: 2019 ರಲ್ಲಿ, ಬಾಹ್ಯಾಕಾಶದಿಂದ ಕೆಲ ಸಿಗ್ನಲ್ ಗಳನ್ನು ಸ್ವೀಕರಿಸಲಾಗಿತ್ತು. ಅದರ ನಂತರ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಈ ಸಿಗ್ನಲ್ ಗಳನ್ನು ಎಲಿಯನ್ ಗಳು ಕಳುಹಿಸುತ್ತಿವೆ ಎಂದು ಈ ಮೊದಲು ನಂಬಲಾಗಿತ್ತು.

Written by - Nitin Tabib | Last Updated : Oct 27, 2021, 02:29 PM IST
  • 2019 ರಲ್ಲಿ ಈ ನಿಗೂಢ ಸಿಗ್ನಲ್ ಗಳನ್ನು ಸೆರೆಹಿಡಿಯಲಾಗಿದೆ.
  • ಪ್ರಾಕ್ಸಿಮಾ ಸೆಂಟೌರಿ ದಿಕ್ಕಿನಿಂದ ಈ ಸಿಗ್ನಲ್ ಗಳು ಬರುತ್ತಿವೆ.
  • ಪಾರ್ಕ್ಸ್ ಮುರಿಯಾಂಗ್ ರೇಡಿಯೋ ಟೆಲಿಸ್ಕೊಪ್ ನಿಂದ ಈ ಸಿಗ್ನಲ್ ಗಳನ್ನು ಪತ್ತೆಹಚ್ಚಲಾಗಿದೆ.
Mysterious Signals: ಬಾಹ್ಯಾಕಾಶದಿಂದ ಬರುತ್ತಿವೆ ಈ ನಿಗೂಢ ಸಿಗ್ನಲ್ ಗಳು, ಏಲಿಯನ್ ಸದ್ದು ಇದಲ್ಲ ಆದರೆ, ಭಯಹುಟ್ಟಿಸುವಂತಿವೆ ಎಂದ ವಿಜ್ಞಾನಿಗಳು title=
Mysterious Signals (representational image)

Space News: ಅನೇಕ ವರ್ಷಗಳಿಂದ, ಪ್ರಪಂಚದಾದ್ಯಂತದ ವಿಜ್ಞಾನಿಗಳು ಭೂಮಿಯ ಹೊರತಾಗಿ ಈ ಬ್ರಮ್ಹಾಂಡದಲ್ಲಿ (Space) ಜೀವನದ ಅಸ್ತಿತ್ವದ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ, ಇದುವರೆಗೆ ಈ ಕುರಿತು ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಏಪ್ರಿಲ್ 2019 ರಲ್ಲಿ, ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶದಿಂದ ಬರುತ್ತಿರುವ ರೇಡಿಯೊ ಸಂಕೇತಗಳನ್ನು ಸೆರೆ ಹಿಡಿದಿದ್ದಾರೆ. ಆರಂಭದಲ್ಲಿ ಇವುಗಳನ್ನು ಏಲಿಯನ್ ಗಳು (Aliens News) ಕಳುಹಿಸುತ್ತಿವೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ ಸಿಗ್ನಲ್ ಗಳನ್ನು ಎಲಿಯನ್ ಗಳು (Aliens) ಕಳುಹಿಸುತ್ತಿಲ್ಲ ಎನ್ನಲಾಗಿದ್ದು, ಈ ಸಿಗ್ನಲ್ ಎಲ್ಲಿಂದ ಬರುತ್ತಿವೆ ಎಂಬುದು ಇದುವರೆಗೂ ಯಕ್ಷಪ್ರಶ್ನೆಯಾಗಿ ಮುಂದುವರೆದಿದೆ.

ಈ ಸಂಕೆತಗಳಲ್ಲಿದೆ ವಿಶೇಷ ಗುಣ
ಡೈಲಿ ಸ್ಟಾರ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಈ ಸಿಗ್ನಲ್ ಗಳು ಕೆಲ ವಿಶೇಷ ಗುಣಗಳನ್ನು ಹೊಂದಿವೆ ಹಾಗೂ ನಾವು ಅವುಗಳ ಕುರಿತು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದೇವೆ ಆದರೆ, ಇದುವರೆಗೆ ಅವುಗಳಿಗೆ ವಿವರಣೆ ದೊರೆತಿಲ್ಲ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆಂಡ್ರೂ ಸಿಮಿಯನ್ ಹೇಳಿದ್ದಾರೆ ಎನ್ನಲಾಗಿದೆ. 

ಪಾರ್ಕ್ಸ್ ಮುರಿಯಾಂಗ್ ರೇಡಿಯೋ ಟೆಲಿಸ್ಕೊಪ್ ನಿಂದ ಈ ಸಿಗ್ನಲ್ ಗಳನ್ನು ಪತ್ತೆಹಚ್ಚಲಾಗಿದೆ
ಇದುವರೆಗೆ ಲಭಿಸಿರುವ ಮಾಹಿತಿಗಳ ಪ್ರಕಾರ, ಪಾರ್ಕ್ಸ್ ಮುರಿಯನ್ ರೇಡಿಯೋ ಟೆಲಿಸ್ಕೋಪ್ನಿಂದ ಈ ಸಿಗ್ನಲ್ ಪತ್ತೆಯಾಗಿವೆ ಎನ್ನಲಾಗಿದೆ. ಈ ಸಿಗ್ನಲ್ ಪ್ರಾಕ್ಸಿಮಾ ಸೆಂಟೌರಿಯ ದಿಕ್ಕಿನಿಂದ ಬರುತ್ತಿರುವುದು ದೂರದರ್ಶಕದಿಂದ ಕಂಡುಬಂದಿದೆ. ಪ್ರಾಕ್ಸಿಮಾ ಸೆಂಟೌರಿ ಒಂದು ಕ್ಷುದ್ರಗ್ರಹವಾಗಿದ್ದು, ಇದು ಭೂಮಿಯಿಂದ 4.22 ಪ್ರಕಾಶ ವರ್ಷಗಳಷ್ಟು ದೂರದಲ್ಲಿದೆ. ಭೂಮಿಯ ಗಾತ್ರದ ಪ್ರಾಕ್ಸಿಮಾ ಬಿ ಅದನ್ನು ಸುತ್ತುತ್ತದೆ ಎಂಬುದನ್ನು 2016 ರಲ್ಲಿ ಕಂಡುಹಿಡಿಯಲಾಗಿದೆ. ಇದು ಸೌರವ್ಯೂಹದ ಹೊರಗಿನ ಅತ್ಯಂತ ಹತ್ತಿರದ ಗ್ರಹವಾಗಿದೆ ಮತ್ತು ಈ ಗ್ರಹ ವ್ಯವಸ್ಥೆಯಲ್ಲಿ ಗ್ರಹವನ್ನು ಹೊರತುಪಡಿಸಿ ಬೇರೆ ವಿಷಯಗಳಿವೆ ಎನ್ನಲಾಗಿದೆ. 

ಪ್ರಾಕ್ಸಿಮಾ ಸೆಂಟೌರಿಯಿಂದ ದೊರೆತ ಸಿಗ್ನಲ್ ಗಳು
ಬಾಹ್ಯಾಕಾಶದಿಂದ ಪಡೆದ ರೇಡಿಯೋ ಸಂಕೇತಗಳು ಸೀಮಿತ ವ್ಯಾಪ್ತಿಯನ್ನು ಹೊಂದಿರುವ ಸಾಮಾನ್ಯ ವಿಮಾನದಿಂದ ಸ್ವೀಕರಿಸಿದ ಸಂಕೇತಗಳಂತೆ ಇವೆ. ಆದರೆ ಈ ಸಂಕೇತಗಳು ಸುಮಾರು 5 ಗಂಟೆಗಳ ಕಾಲ ದೊರೆತಿವೆ. ದೂರದರ್ಶಕವನ್ನು ಪ್ರಾಕ್ಸಿಮಾ ಸೆಂಟೌರಿಯ ದಿಕ್ಕಿನಲ್ಲಿ ಚಲಿಸಿದಾಗ ಮಾತ್ರ ಈ ಸಂಕೇತಗಳನ್ನು ಸೆರೆಹಿಡಿಯಲಾಗಿದೆ. 2019 ರಲ್ಲಿ ಸ್ವೀಕರಿಸಿದ ರೇಡಿಯೊ ಸಿಗ್ನಲ್ ಅನ್ನು BLC1 ಎಂದು ಹೆಸರಿಸಲಾಗಿದೆ. 

ಇದನ್ನೂ ಓದಿ-World's Unusual Languages: 'Green' ಶಬ್ದಕ್ಕೆ ಈ ಭಾಷೆಯಲ್ಲಿ ಉಲ್ಲೇಖವೇ ಇಲ್ಲ, ಕಾರಣ ಕೇಳಿ ನೀವೂ ನಿಬ್ಬೇರಗಾಗುವಿರಿ

ಮಾನವ ವಾಸಿಸಲು ಯೋಗ್ಯವಾಗಿಲ್ಲ ಪ್ರಾಕ್ಸಿಮಾ 
ಪ್ರಾಕ್ಸಿಮಾ ಮಾನವ ಜೀವನಕ್ಕೆ ವಾಸಯೋಗ್ಯ ಗ್ರಹ ಎಂದು ಭಾವಿಸುವುದಿಲ್ಲ ಎಂದು ಈ ಸಂಕೇತಗಳನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿ ಡ್ಯಾನಿ ಪ್ರೈಸ್  ಹೇಳಿದ್ದಾರೆ. ಇದು ಭೂಮಿಗೆ ತುಂಬಾ ಹತ್ತಿರದಲ್ಲಿದೆ ಮತ್ತು ಇದನ್ನು ನೋಡುವುದು ಕೂಡ ಸುಲಭವಾಗಿದೆ. BLC1 ಪ್ರಾಕ್ಸಿಮಾ ಕಡೆಗೆ ತೋರಿಸುವ ಮೂಲದಲ್ಲಿ ಮಾತ್ರ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಇದು ಏಕೆ ಸಂಭವಿಸಿದೆ ಎಂಬುದು ಇದುವರೆಗೆ ನಮಗೆ ನಿಖರವಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ-Mystery Island: ಎಲ್ಲಿದೆ ಈ ಭಯಾನಕ ನಡುಗಡ್ಡೆ, Google Mapನಲ್ಲಿ ನೋಡಿದ ಜನರು ಭಯಬೀತರಾಗಿ ಹೇಳಿದ್ದೇನು ಗೊತ್ತಾ?

ಆದರೆ ಯಾವುದೇ ಸಾಕ್ಷಧಾರ ಇಲ್ಲದೆ ಘೋಷಣೆ ಸಾಧ್ಯವಿಲ್ಲ
ಈ ಸಂಕೇತಗಳನ್ನು ಸೆರೆಹಿಡಿಯುವುದು ಹೊಸ ಆವಿಷ್ಕಾರಕ್ಕೆ ನಾಂದಿಯಾಗಬಹುದು ಎಂದು ಡಾ. ಪ್ರೈಸ್ ಹೇಳಿದ್ದಾರೆ. ಆದರೆ ಯಾವುದೇ ನಿಖರ ಪುರಾವೆಗಳಿಲ್ಲದೆ  ಆವುಗಳ ಕುರಿತು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಭೂಮಿಯನ್ನು ಹೊರತುಪಡಿಸಿ ಬೇರೆಲ್ಲಿಯೂ ಜೀವವಿದೆ ಎಂದು ಸಾಬೀತುಪಡಿಸಲು, ನಮ್ಮ ಬಳಿ ಉನ್ನತ ಮಟ್ಟದ ಮಾಹಿತಿ ಮತ್ತು ಪುರಾವೆಗಳಿರುವುದು ಅವಶ್ಯಕವಾಗಿದೆ.  ಈ ಸಂಕೇತಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News