Mysterious Places In India: ಭಾರತದಲ್ಲಿರುವ ಈ Magnetic Hill ಬಗ್ಗೆ ನಿಮಗೆಷ್ಟು ತಿಳಿದಿದೆ?

Mysterious Places In India: ಪ್ರಪಂಚದಲ್ಲಿ ಇಂತಹ ಹಲವಾರು ಸಂಗತಿಗಳಿದ್ದು, ಈ ಸಂಗತಿಗಳ ಮೇಲೆ ಕಿವಿ ಮತ್ತು ಕಣ್ಣುಗಳು ನಂಬುವುದೇ ಇಲ್ಲ. ಈ ಸಂಗತಿಗಳು ತನ್ನ ಒಡಲಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿವೆ. ಹಾಗಾದರೆ ಬನ್ನಿ ಇಂತಹುದೇ ಒಂದು ರಹಸ್ಯದಿಂದ ಕೂಡಿದ ಸ್ಥಳವೊಂದರ ಬಗ್ಗೆ ಮಾಹಿತಿ ಪಡೆಯೋಣ.

Written by - Nitin Tabib | Last Updated : Mar 14, 2021, 11:09 PM IST
  • ವಿಮಾನಗಳಲ್ಲಿಯೂ ಕೂಡ ಈ ಕಾಂತೀಯ ಸೆಳೆತದ ಅನುಭವವಾಗುತ್ತದಂತೆ.
  • ಈ ಮ್ಯಾಗ್ನೆಟಿಕ್ ಹಿಲ್ ಅನ್ನು ಗ್ರ್ಯಾವಿಟಿ ಹಿಲ್ ಎಂದೂ ಕೂಡ ಕರೆಯುತ್ತಾರೆ.
  • ಈ ಪರ್ವತ ಪ್ರದೇಶದಲ್ಲಿ ಆಯಸ್ಕಾಂತೀಯ ಶಕ್ತಿ ಇದೆ ಎನ್ನಲಾಗುತ್ತದೆ
Mysterious Places In India: ಭಾರತದಲ್ಲಿರುವ ಈ Magnetic Hill ಬಗ್ಗೆ ನಿಮಗೆಷ್ಟು ತಿಳಿದಿದೆ? title=
Magnetic Hill(File Photo)

Mysterious Places In India: ಪ್ರಪಂಚದಲ್ಲಿ ಇಂತಹ ಹಲವಾರು ಸಂಗತಿಗಳಿದ್ದು, ಈ ಸಂಗತಿಗಳ ಮೇಲೆ ಕಿವಿ ಮತ್ತು ಕಣ್ಣುಗಳು ನಂಬುವುದೇ ಇಲ್ಲ. ಈ ಸಂಗತಿಗಳು ತನ್ನ ಒಡಲಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿವೆ. ಹಾಗಾದರೆ ಬನ್ನಿ ಇಂತಹುದೇ ಒಂದು ರಹಸ್ಯದಿಂದ ಕೂಡಿದ ಸ್ಥಳವೊಂದರ ಬಗ್ಗೆ ಮಾಹಿತಿ ಪಡೆಯೋಣ.

ಮ್ಯಾಗ್ನೆಟಿಕ್ ಹಿಲ್ Magnetic Hill
ಭಾರತದಲ್ಲಿ ಪರ್ವತ ಪ್ರದೇಶವೊಂದಿದ್ದು, ಅಲ್ಲಿ ವಾಹನಗಳು ಪೆಟ್ರೋಲ್-ಡೀಸೆಲ್ ಇಲ್ಲದೆ ಚಲಿಸುತ್ತವೆ. ಈ ಬೆಟ್ಟವು ಲಡಾಖ್‌ನ ಲೇಹ್  (Leh of Ladakh) ಪ್ರದೇಶದಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ವಾಹನಗಳು ತನ್ನಷ್ಟಕ್ಕೆ ತಾನೇ ಚಲಿಸುತ್ತವೆ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಯಾರಾದರೂ ತಮ್ಮ ಕಾರನ್ನು ಇರಿಸಿದರೆ ಅವರಿಗೆ ಆ ಕಾರು ಎಂದಿಗೂ ಸಿಗುವುದಿಲ್ಲವಂತೆ. ಇದೆಲ್ಲ ಹೇಗೆ ನಡೆಯುತ್ತದೆ ಎಂಬ ರಹಸ್ಯ ಇನ್ನೂ ತಿಳಿದುಬಂದಿಲ್ಲ.

ವಿಜ್ಞಾನಿಗಳ ಹೇಳುವ ಪ್ರಕಾರ, ಈ ಪರ್ವತ ಪ್ರದೇಶವು ಆಯಸ್ಕಾಂತೀಯ  ಶಕ್ತಿಯನ್ನು ಹೊಂದಿದೆ, ಇದು ವಾಹನಗಳನ್ನು ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಎಳೆಯುತ್ತದೆ.

ಇದನ್ನೂ ಓದಿ-ಎಚ್ಚರ! March 21ರಂದು ಭೂಮಿಯ ಸನೀಹದಿಂದ ಹಾದುಹೋಗಲಿದೆ ಇದುವರೆಗಿನ ಅತ್ಯಂತ ದೊಡ್ಡ ಉಲ್ಕಾಶಿಲೆ: NASA

ವಿಮಾನಗಳಲ್ಲಿಯೂ  ಕೂಡ ಈ ಆಯಸ್ಕಾಂತಿಯ ಶಕ್ತಿಯ ಪ್ರಭಾವ
ಈ ಪರ್ವತ ಪ್ರದೇಶದಲ್ಲಿರುವ ಆಯಸ್ಕಾಂತೀಯ ಶಕ್ತಿಯ ಪ್ರಭಾವ ಎಷ್ತೊಂದು ಪ್ರಬಲವಾಗಿದೆ ಎಂದರೆ ಈ ಪ್ರದೇಶದ ಮೇಲೆ ಹಾರಾಡುವ ವಿಮಾನಗಳೂ ಕೂಡ ಇದಕ್ಕೆ ಹೊರತಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಹಲವು ಪೈಲಟ್ ಗಳು ಕೂಡ ಈ ಪ್ರದೇಶದ ಮೇಲಿಂದ ವಿಮಾನ ಹಾರಾಟದ ಸಮಯದಲ್ಲಿಯೂ ಕೂಡ ಈ ಆಯಸ್ಕಾಂತಿಯ ಶಕ್ತಿಯ ಅನುಭವವಾಗಿದೆ ಎನ್ನುತ್ತಾರೆ. ಈ ಆಯಸ್ಕಾಂತೀಯ ಸೆಳೆತದಿಂದ ಪಾರಾಗಲು ವಿಮಾನ ವೇಗವಾಗಿ ಚಲಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ-Alert : ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗಬಹುದು.! ಕೂಡಲೇ ಈ 8 ಆಪ್ಸ್ ಡಿಲಿಟ್ ಮಾಡಿ

ಗ್ರ್ಯಾವಿಟಿ ಹಿಲ್ Gravity Hill
ಈ ಮ್ಯಾಗ್ನೆಟಿಕ್ ಹಿಲ್ ಅನ್ನು ಗ್ರ್ಯಾವಿಟಿ ಹಿಲ್ ಎಂದೂ ಕೂಡ ಕರಯಲಾಗುತ್ತದೆ. ಈ ಪರ್ವತ ಪ್ರದೇಶದಲ್ಲಿ ಗುರುತ್ವಾಕರ್ಶನದ ನಿಯಮಗಳೂ ಕೂಡ ಫೇಲ್ ಆಗುತ್ತವಂತೆ. ಗುರುತ್ವಾಕರ್ಷಣ ನಿಯಮದ ಪ್ರಕಾರ ಯಾವುದೇ ಒಂದು ವಸ್ತುವನ್ನು ಇಳಿಜಾರು ಪ್ರದೇಶದಲ್ಲಿ ಇರಿಸಿದರೆ. ಅದು ಕೇಳಬಾಗಕ್ಕೆ ಉರುಳುತ್ತದೆ. ಆದರೆ, ಈ ಪರ್ವತ ಪ್ರದೇಶದಲ್ಲಿ ಇದರ ತದ್ವಿರುದ್ಧ ನಡೆಯುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-UCAV Arrow: ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸಾನಿಕ್ ಯುದ್ಧ ಡ್ರೋನ್ ಬಿಡುಗಡೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News