ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳ ಈ ತಂತ್ರದಿಂದ ಜಾಗರೂಕರಾಗಿರಿ

ಸ್ಮಾರ್ಟ್ ಫೋನ್ ಬಳಸುವವರು ಸದಾ ಜಾಗರೂಕರಾಗಿರಬೇಕು. ನೀವು ತೋರುವ ಅಸಡ್ಡೆ ಹ್ಯಾಕರ್‌ಗಳಿಗೆ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವ ಅವಕಾಶವನ್ನು ನೀಡುತ್ತಿದೆ. ಹೊಸ ವರದಿಯಲ್ಲಿ ಈ ಬಗ್ಗೆ ಯಾವ ವಿಚಾರವನ್ನು ಬಹಿರಂಗಪಡಿಸಲಾಗಿದೆ ನೋಡೋಣ. 

Written by - Ranjitha R K | Last Updated : Jun 14, 2022, 09:23 AM IST
  • ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗ
  • ಸ್ಮಾರ್ಟ್ ಫೋನ್ ಬಳಕೆ ಎಷ್ಟು ಸುರಕ್ಷಿತ.
  • ಹ್ಯಾಕ್ ಆಗದಂತೆ ಏನು ಮಾಡಬೇಕು ?
ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳ ಈ ತಂತ್ರದಿಂದ  ಜಾಗರೂಕರಾಗಿರಿ title=
Smartphone tips (file photo)

ಬೆಂಗಳೂರು : ಇಂದು ಸ್ಮಾರ್ಟ್ ಫೋನ್  ನಮ್ಮ ಜೀವನದ ಅವಿಭಾಜ್ಯ ಅಂಗದಂತೆ ಆಗಿದೆ ಎಂದರೆ ತಪ್ಪಲ್ಲ. ಸ್ಮಾರ್ಟ್ ಫೋನ್  ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಆದರೆ ಸ್ಮಾರ್ಟ್ ಫೋನ್  ಬಳಕೆ ಎಷ್ಟು ಸುರಕ್ಷಿತ. ಅಥವಾ ಸ್ಮಾರ್ಟ್ ಫೋನ್  ಬಳಸುತ್ತಿದ್ದರೆ, ನಮ್ಮ ಸುರಕ್ಷತೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರುವುದು ಕೂಡಾ ಮುಖ್ಯ. 35% ದಷ್ಟು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ  ಭದ್ರತಾ ಪ್ಯಾಚ್‌ಗಳಿರುವುದಿಲ್ಲ. ಹೀಗಾದಾಗ ನಮ್ಮ ಫೋನ್  ಸುಲಭವಾಗಿ ಹ್ಯಾಕರ್‌ಗಳಿಗೆ ತುತ್ತಾಗಿ ಬಿಡುತ್ತವೆ. ಇನ್ನು ಕೆಲವು ಫೋನ್ ಗಳಲ್ಲಿ Google ನ ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಯನ್ನು  ಇನ್ಸ್ಟಾಲ್ ಮಾಡುವು ಕೂಡಾ ಸಾಧ್ಯವಾಗುವುದಿಲ್ಲ. ಪ್ರಸಿದ್ಧ ಆಂಟಿವೈರಸ್ ಬಿಟ್‌ಡೆಫೆಂಡರ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಕಂಪನಿಯ ಕಂಪ್ಯೂಟರ್ ಭದ್ರತಾ ತಜ್ಞರು Android ವಿತರಣೆ ಸಮಸ್ಯೆಯನ್ನು ಸೂಚಿಸುತ್ತಾರೆ.

ಇನ್ನೂ ಅನೇಕ ಸ್ಮಾರ್ಟ್‌ಫೋನ್‌ಗಳು ಹಳೆಯ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಭದ್ರತಾ ಪ್ಯಾಚ್‌ಗಳನ್ನು ಕಳೆದುಕೊಂಡಿರುವುದರಿಂದ, ಈ ಹಳೆಯ ಆವೃತ್ತಿಗಳು ಹ್ಯಾಕರ್‌ಗಳಿಗೆ ನೆಚ್ಚಿನ ಗೇಟ್‌ವೇ ಆಗಿದೆ. ಅನೇಕ ಗ್ರಾಹಕರು ಭದ್ರತಾ ಪ್ಯಾಚ್‌ಗಳ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತಾರೆ ಮತ್ತು ತಯಾರಕರು ಅವುಗಳನ್ನು ಬಳಕೆಯಲ್ಲಿಲ್ಲವೆಂದು ಘೋಷಿಸಿದ ವರ್ಷಗಳ ನಂತರ ದುರ್ಬಲ ಸಾಧನಗಳನ್ನು ಬಳಸುವುದನ್ನು ಮುಂದುವರಿಸುತ್ತಾರೆ. 

ಹ್ಯಾಕ್ ಮಾಡುವುದು ಬಹಳ ಸುಲಭ : 
ವರದಿಗಳ ಪ್ರಕಾರ, ಇನ್ನು ಅನೇಕ ಸ್ಮಾರ್ಟ್‌ಫೋನ್‌ಗಳು ಹಳೆಯ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭದ್ರತಾ ಪ್ಯಾಚ್‌ಗಳಿಲ್ಲದಿರುವ ಕಾರಣ, ಈ ಹಳೆಯ ಆವೃತ್ತಿಗಳು ಹ್ಯಾಕರ್‌ಗಳಿಗೆ ನೆಚ್ಚಿನ ಗೇಟ್‌ವೇ ಆಗಿದೆ. ಅನೇಕ ಗ್ರಾಹಕರು ಭದ್ರತಾ ಪ್ಯಾಚ್‌ಗಳ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತಾರೆ. ಮಾತ್ರವಲ್ಲ, ಕೆಲವು ಆವೃತ್ತಿಯ ಫೋನ್ ಗಳು ಬಳಕೆಯಲ್ಲಿ ಇಲ್ಲ ಎಂದು ಫೋನ್ ತಯಾರಕರು ಘೋಷಿಸಿದ ವರ್ಷಗಳ ನಂತರ ಕೂಡಾ ಅದೇ ಆವೃತ್ತಿಯ ಫೋನ್ ಗಳನ್ನು ಬಳಸುತ್ತಾರೆ. 

ಇದನ್ನೂ ಓದಿ : ಕೇವಲ 150 ರೂ. ಖರ್ಚು ಮಾಡಿ ನಿಮ್ಮ ಹಳೆಯ ಫ್ರಿಡ್ಜ್ ಅನ್ನು ಹೊಸದಾಗಿಸಿ

 ಹಳೆಯ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು :
"ಒಂದು ದಶಕದ ಹಿಂದೆ ಬಿಡುಗಡೆಯಾದ ಆಂಡ್ರಾಯ್ಡ್ ಆವೃತ್ತಿಗಳು ಇನ್ನೂ ಚಾಲನೆಯಲ್ಲಿರುವುದನ್ನು ನಾವು ಕಾಣಬಹುದು.  ಮೂಲಗಳ ಪ್ರಕಾರ Android 12 ಅಥವಾ Android 11 ಗೆ ಅಪ್‌ಗ್ರೇಡ್ ಮಾಡದಿರುವ ಹೆಚ್ಚಿನ ಸಂಖ್ಯೆಯ ಸಾಧನಗಳು ಇನ್ನೂ ಇವೆ. ಇಲ್ಲಿಯವರೆಗೆ 36.47% ಸ್ಮಾರ್ಟ್‌ಫೋನ್‌ಗಳನ್ನು ಆಂಡ್ರಾಯ್ಡ್ 12 ಗೆ ನವೀಕರಿಸಲಾಗಿದೆ. , Android 11 29.15% ಸಾಧನಗಳಲ್ಲಿ ಚಾಲನೆಯಲ್ಲಿದೆ. Android 10 ಇನ್ನೂ 15.03% ಸಾಧನಗಳನ್ನು ಹೊಂದಿದೆ ಎನ್ನುವುದು ಗಮನಿಸಬೇಕಾದ ಅಂಶ. 

ಆದ್ದರಿಂದ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ 35% ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ನು ಮುಂದೆ ಭದ್ರತಾ ಪ್ಯಾಚ್‌ಗಳಿರುವುದಿಲ್ಲ.   ಇದು ಹ್ಯಾಕರ್‌ಗಳಿಗೆ ನಿಮ್ಮ ಫೋನ್ ಹ್ಯಾಕ್ ಮಾಡಲು ಸುಲಭವಾಗಿ ದಾರಿ ಮಾಡಿಕೊಟ್ಟಂತೆ. Android 10 ಅನ್ನು ಗಣನೆಗೆ ತೆಗೆದುಕೊಳ್ಳದೆಯೇ, 20% ಸಾಧನಗಳು ಈಗಾಗಲೇ ದುರ್ಬಲವಾಗಿವೆ ಎಂದೇ ಹೇಳಬಹುದು. ಹಾಗಾಗಿ ಹೊಸ ಫೋನ್ ಖರೀದಿಸುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಲು Bitdefender ಸಲಹೆ ನೀಡಿದೆ.

ಇದನ್ನೂ ಓದಿ : Excellent Recharge Plan: ಅಬ್ಬಾ...! ಜಿಯೋ ಕಂಪನಿಯ ಈ ಪ್ಲಾನ್ ಅಡಿ ಉಚಿತ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆಯ ಜೊತೆಗೆ 1095 GB ಡೇಟಾ ಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News