ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಹೆಚ್ಚಾಯ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್‌ಸ್ಟಾರ್‌ ಟೆನ್ಷನ್

New Guidelines for OTT Platforms: OTT ಪ್ಲಾಟ್‌ಫಾರ್ಮ್‌ಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೋದಿ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಈಗ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್‌ಸ್ಟಾರ್‌ನಂತಹ ಕಂಪನಿಗಳ ಒತ್ತಡ ಹೆಚ್ಚಾಗಿದೆ. 

Written by - Yashaswini V | Last Updated : Jun 12, 2023, 03:15 PM IST
  • ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಈ ಹೊಸ ಆದೇಶವನ್ನು ಹೊರಡಿಸಿದೆ.
  • ಆದೇಶದ ಅನುಸಾರ, ಎಲ್ಲಾ ವೇದಿಕೆಗಳು ಮೂರು ತಿಂಗಳೊಳಗೆ ಧೂಮಪಾನಕ್ಕೆ ಸಂಬಂಧಿಸಿದ ಫೋಟೋಗಳು ಅಥವಾ ವೀಡಿಯೊಗಳ ಪ್ರದರ್ಶನದ ಸಮಯದಲ್ಲಿ ಎಚ್ಚರಿಕೆಯನ್ನು ನೀಡಬೇಕಾಗುತ್ತದೆ.
  • ಈ ಸೂಚನೆಯನ್ನು ಅನುಸರಿಸದಿದ್ದರೆ, ಓ‌ಟಿ‌ಟಿ ವಿಷಯ ಒದಗಿಸುವ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಹೆಚ್ಚಾಯ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್‌ಸ್ಟಾರ್‌ ಟೆನ್ಷನ್  title=

Netflix, Amazon Prime, Disney+Hotstar: ಕೇಂದ್ರದ ಮೋದಿ ಸರ್ಕಾರವು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸರ್ಕಾರದ ಹೊಸ ನಿಯಮಗಳ ಪ್ರಕಾರ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ಕಂಪನಿಗಳ ಟೆನ್ಷನ್ ಕೂಡ ಹೆಚ್ಚಾಗಿದೆ. 

ಕೇಂದ್ರ ಸರ್ಕಾರದ ಹೊಸ ನಿಯಮಗಳ ಅನ್ವಯ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ಕಂಪನಿಗಳು ತಂಬಾಕು ಬಳಸುವ ಬಗ್ಗೆ ಎಚ್ಚರಿಕೆಗಳನ್ನು ನೀಡಬೇಕಾಗುತ್ತದೆ. ಆದರೆ OTT ಕಂಟೆಂಟ್ ಪ್ರೊವೈಡರ್ ಕಂಪನಿಗಳು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿವೆ. 

ವಾಸ್ತವವಾಗಿ, ಕೇಂದ್ರ ಸರ್ಕಾರದ ಹೊಸ ನಿಯಮಗಳನ್ನು ಪಾಲಿಸಲು  ಹಾಲಿವುಡ್ ಮತ್ತು ಬಾಲಿವುಡ್ ವೆಬ್ ಶೋಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಎಡಿಟ್ ಮಾಡಬೇಕಾಗುತ್ತದೆ ಎಂದು ಸ್ಟ್ರೀಮಿಂಗ್ ಕಂಪನಿಗಳು ಹೇಳಿವೆ. 

ಇದನ್ನೂ ಓದಿ- tax ಹೆಸರಿನಲ್ಲಿನಿಮ್ಮ ಜೇಬಿಗೆ ಕತ್ತರಿ! ರೆಸ್ಟೋರೆಂಟ್ ಬಿಲ್ ಪಾವತಿ ಮುನ್ನ ಈ ಅಂಶವನ್ನು ಸರಿಯಾಗಿ ಚೆಕ್ ಮಾಡಿ

ಈ ಕುರಿತಂತೆ ಪ್ರತಿಕ್ರಿಯಿಸಿರುವ ಒಟಿಟಿ  ಕಂಟೆಂಟ್ ಪ್ರೊವೈಡರ್ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಭಾಷೆಗಳಲ್ಲಿ ವಿಷಯ ಲಭ್ಯವಿದೆ. ಈ ಕಾರಣದಿಂದಾಗಿ, ಪ್ರತಿ ಭಾಷೆಯಲ್ಲಿ ಎಚ್ಚರಿಕೆಗಳನ್ನು ನೀಡುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದು, ಒಟಿಟಿ ಕಂಪನಿಗಳು ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. 

ಸರ್ಕಾರದ ಸೂಚನೆ ಪಾಲಿಸದಿದ್ದರೆ ಕ್ರಮ: 
ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಈ ಹೊಸ ಆದೇಶವನ್ನು ಹೊರಡಿಸಿದೆ. ಆದೇಶದ ಅನುಸಾರ, ಎಲ್ಲಾ ವೇದಿಕೆಗಳು ಮೂರು ತಿಂಗಳೊಳಗೆ ಧೂಮಪಾನಕ್ಕೆ ಸಂಬಂಧಿಸಿದ ಫೋಟೋಗಳು ಅಥವಾ ವೀಡಿಯೊಗಳ ಪ್ರದರ್ಶನದ ಸಮಯದಲ್ಲಿ ಎಚ್ಚರಿಕೆಯನ್ನು ನೀಡಬೇಕಾಗುತ್ತದೆ. ಈ ಸೂಚನೆಯನ್ನು ಅನುಸರಿಸದಿದ್ದರೆ, ಓ‌ಟಿ‌ಟಿ ವಿಷಯ ಒದಗಿಸುವ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. 

ಇದನ್ನೂ ಓದಿ- ನಿಮ್ಮಲ್ಲಿ 2.5 ಲಕ್ಷ ರೂಪಾಯಿ ಇದ್ದರೆ ಸಾಕು Tata Nexon ಒಡೆಯರಾಗಬಹುದು! EMI ಮೂಲಕ ಪಾವತಿ ಹೇಗೆ ?

ರಾಯಿಟರ್ಸ್ ನ್ಯೂಸ್ ಏಜೆನ್ಸಿ ಪ್ರಕಾರ,  ಒಟಿ‌ಟಿ ವಿಷಯ ಪೂರೈಕೆದಾರ ಕಂಪನಿಗಳು ಇದನ್ನು ರಚನೆಕಾರರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸುತ್ತಿವೆ. 

ಏನಿದು ಹೊಸ ನಿಯಮ? 
* ಒಟಿ‌ಟಿ ಕಂಪನಿಗಳು ಪ್ರತಿ ಪ್ರದರ್ಶನದ ಪ್ರಾರಂಭ ಮತ್ತು ಕೊನೆಯಲ್ಲಿ ತಂಬಾಕು ಬಳಕೆಯ ಬಗ್ಗೆ ಎಚ್ಚರಿಕೆಗಳನ್ನು ನೀಡಬೇಕಾಗುತ್ತದೆ.
* ಕಂಪನಿಗಳು ಆಡಿಯೋ ಮತ್ತು ದೃಶ್ಯಗಳನ್ನು ಒಳಗೊಂಡಿರುವ ಕನಿಷ್ಠ 50 ಸೆಕೆಂಡ್‌ಗಳ ತಂಬಾಕು ವಿರೋಧಿ ಜಾಹೀರಾತನ್ನು ಪ್ರದರ್ಶಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News