Mobile Users: ಮೊಬೈಲ್ ಬಳಕೆದಾರರೇ ಎಚ್ಚರ: ಅಪ್ಪಿತಪ್ಪಿಯೂ 'ಈ ಅಪ್ಲಿಕೇಶನ್' ಡೌನ್ಲೋಡ್‌ ಮಾಡಬೇಡಿ!

ಗೂಗಲ್ ಪ್ಲೇ ಸ್ಟೋರ್ ಹೊರಗೆ ಇನ್ಸ್ಟಾಲ್ ಆಗಬೇಕಾದ 'ಸಿಸ್ಟಂ ಅಪ್ ಡೇಟ್' ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ʼನೊಂದಿಗೆ ಅಪಾಯ

Last Updated : Mar 28, 2021, 06:36 PM IST
  • ಗೂಗಲ್ ಪ್ಲೇ ಸ್ಟೋರ್ ಹೊರಗೆ ಇನ್ಸ್ಟಾಲ್ ಆಗಬೇಕಾದ 'ಸಿಸ್ಟಂ ಅಪ್ ಡೇಟ್' ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ʼನೊಂದಿಗೆ ಅಪಾಯ
  • ಹ್ಯಾಕರ್ʼಗಳು ರಿಮೋಟ್ ಆಗಿ ಆದೇಶಗಳನ್ನ (Remote Access Trojan-RAT) ಕಾರ್ಯಗತಗೊಳಿಸ್ಬೋದು.
  • 'ಬಲಿಪಶುವಿನ ವಿವಿಧ ಪ್ರಕಾರಗಳ ವೈಯಕ್ತಿಕ ಡೇಟಾಗಳನ್ನ ಹೊರತುಪಡಿಸಿ,
Mobile Users: ಮೊಬೈಲ್ ಬಳಕೆದಾರರೇ ಎಚ್ಚರ: ಅಪ್ಪಿತಪ್ಪಿಯೂ 'ಈ ಅಪ್ಲಿಕೇಶನ್' ಡೌನ್ಲೋಡ್‌ ಮಾಡಬೇಡಿ! title=

ಸ್ಮಾರ್ಟ್ ಫೋನ್ ಬಳಕೆದಾರರೇ ಎಚ್ಚರ.. ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್ ಫೋನ್ʼಗಳು ಹೊಸ ಮಾಲ್ ವೇರ್ʼಗಳ ಮೂಲಕ ಅಪಾಯವನ್ನ ಎದುರಿಸುತ್ತಿವೆ ಅನ್ನೋದನ್ನ ಮೊಬೈಲ್ ಭದ್ರತಾ ಸಂಸ್ಥೆ Zimperium ZLabs ನ ಸಂಶೋಧಕರು ಕಂಡುಕೊಂಡಿದ್ದಾರೆ.

ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್ ಫೋನ್ʼ(Smart Phone)ಗಳು ಹೊಸ 'ಸುಧಾರಿತ' ಮಾಲ್ ವೇರ್ʼಗಳ ಪಠ್ಯ ಸಂದೇಶಗಳು, ಇಮೇಜ್ʼಗಳು, ಸಂಪರ್ಕಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ವೈಯಕ್ತಿಕ ಡೇಟಾವನ್ನ ಕದಿಯುವ ಸಾಮರ್ಥ್ಯವನ್ನ ಹೊಂದಿವೆ. ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮೇಲೆ ಸಂಪೂರ್ಣ ನಿಯಂತ್ರಣವನ್ನ ಸಹ ಸಾಧಿಸತ್ತೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.

Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ಒಂದು ಬ್ಲಾಗ್ ಪೋಸ್ಟ್ʼನಲ್ಲಿ, ಹ್ಯಾಕರ್ʼಗಳು ರಿಮೋಟ್ ಆಗಿ ಆದೇಶಗಳನ್ನ (Remote Access Trojan-RAT) ಕಾರ್ಯಗತಗೊಳಿಸ್ಬೋದು. ಸಂಪೂರ್ಣ ನಿಯಂತ್ರಣ ತೆಗೆದುಕೊಂಡ ನಂತ್ರ ವ್ಯಾಪಕ ಶ್ರೇಣಿಯ ದುರುದ್ದೇಶಪೂರಿತ ಕ್ರಿಯೆಗಳನ್ನ ನಿರ್ವಹಿಸಬಹುದು ಎಂದು ಜಿಂಪೆರಿಯಮ್ ವಿವರಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ (Google Play Store) ಹೊರಗೆ ಇನ್ಸ್ಟಾಲ್ ಆಗಬೇಕಾದ 'ಸಿಸ್ಟಂ ಅಪ್ ಡೇಟ್' ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ʼನೊಂದಿಗೆ ಅಪಾಯ ಎದುರಾಗುತ್ತೆ ಅನ್ನೋದನ್ನ ಸ್ಪಷ್ಟಪಡಿಸಿದೆ. 

ನಾಳೆಯೇ ಲಾಂಚ್ ಆಗಲಿದೆ Mi Band 6 ; ತಿಳಿಯಿರಿ ಏನಿರಲಿದೆ ವೈಶಿಷ್ಟ್ಯ

ಈ ಬಗ್ಗೆ ಮಾತನಾಡಿರುವ ಝಿಂಪೆರಿಯಂ ಸಿಇಒ, 'ಮಾಲ್ ವೇರ್ ಉದ್ದೇಶಿತ ದಾಳಿಯ ಭಾಗವಾಗಿರುವ ಸಾಧ್ಯತೆ ಇದೆ' ಎಂದು ತಿಳಿಸಿದ್ದಾರೆ. 'ನಾವು ನೋಡಿರುವಂತೆ ಇದು ಅತ್ಯಂತ ಅತ್ಯಾಧುನಿಕವಾದುದು. ಇನ್ನು ಈ ಆಯಪ್(app) ರಚಿಸಲು ಸಾಕಷ್ಟು ಸಮಯ ಮತ್ತು ಶ್ರಮವನ್ನ ವ್ಯಯಿಸಲಾಗಿದೆ. ಈ ರೀತಿಯ ಇತರ ಆಯಪ್ʼಗಳಿವೆ ಎಂದು ನಾವು ನಂಬಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನ ಹುಡುಕಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಹೇಳಿದ್ರು.

Existance Of Theia Inside Earth - ಭೂಮಿಯ ಗರ್ಭದಲ್ಲೊಂದು Alien ಪ್ರಪಂಚ! Giant Impact Hypothesis ರಹಸ್ಯ ಭೇದಿಸಿದ್ರಾ ವಿಜ್ಞಾನಿಗಳು?

ಇನ್ಸ್ಟಾಲ್ ಮಾಡಿದ ನಂತ್ರ (ಥರ್ಡ್ ಪಾರ್ಟಿ ಸ್ಟೋರ್ ನಿಂದ) ಮಾಲ್ ವೇರ್ʼಗಳು ಆಪರೇಟರ್ʼನ ಫೈರ್ ಬೇಸ್ ಸರ್ವರ್ʼನೊಂದಿಗೆ ಸಂವಹನ ನಡೆಸುತ್ತದೆ. ಸ್ಮಾರ್ಟ್ ಫೋನ್ʼನ್ನ ರಿಮೋಟ್(Remote) ಆಗಿ ನಿಯಂತ್ರಿಸಲು ಬಳಸಲಾಗುತ್ತೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ. ಕದ್ದ ಈ ದತ್ತಾಂಶವನ್ನ ಸ್ಪೈವೇರ್ʼನ ಖಾಸಗಿ ಸಂಗ್ರಹದ ಒಳಗೆ ಹಲವಾರು ಫೋಲ್ಡರ್ʼಗಳಲ್ಲಿ ಸಂಘಟಿಸಲ್ಪಟ್ಟಿದೆ. 'ಸಿಸ್ಟಂ ಅಪ್ ಡೇಟ್' ಒಂದು ದುರುದ್ದೇಶಪೂರಿತ ಅಧಿಸೂಚನೆಯನ್ನ ಸಹ ರಚಿಸಬಹುದು. ಅದು ಕಾನೂನುಬದ್ಧ ಸಾಫ್ಟ್ ವೇರ್ ಅಪ್ಡೇಟ್ ಎಚ್ಚರಿಕೆಯಾಗಿ ತೋರುತ್ತೆ ಎನ್ನಲಾಗ್ತಿದೆ.

ಮೊಬೈಲ್ ಗೇಮ್ ಪ್ರಿಯರಿಗೆ ಸಿಹಿಸುದ್ದಿ ಶೀಘ್ರವೇ ಲಾಂಚ್ ಆಗಲಿದೆ PUBG

ಇನ್ನು 'ಬಲಿಪಶುವಿನ ವಿವಿಧ ಪ್ರಕಾರಗಳ ವೈಯಕ್ತಿಕ ಡೇಟಾಗಳನ್ನ ಹೊರತುಪಡಿಸಿ, ಸ್ಪೈವೇರ್ʼಗಳು ಬಲಿಪಶುವಿನ ಬುಕ್ ಮಾರ್ಕ್ʼಗಳು ಮತ್ತು ಸರ್ಚ್ ಹಿಸ್ಟರಿ(Search History)ಯಂತಹ ಹೆಚ್ಚು ಖಾಸಗಿ ಡೇಟಾವನ್ನ ಬಯಸುತ್ವೆ. ಉದಾಹರಣೆಗೆ ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್ ಫಾಕ್ಸ್ ಮತ್ತು ಸ್ಯಾಮ್ ಸಂಗ್ ಇಂಟರ್ನೆಟ್ ಬ್ರೌಸರ್ ನಂತಹ ಜನಪ್ರಿಯ ಬ್ರೌಸರ್ʼಗಳಿಂದ ಸರ್ಚ್ ಹಿಸ್ಟರಿಯನ್ನು ಬಯಸುತ್ತೆ' ಎಂದು ಬ್ಲಾಗ್ ಪೋಸ್ಟ್ʼನಲ್ಲಿ ಹೇಳಿದೆ.

Google WifiNanScan App: Googleನಿಂದ ಅತ್ಯದ್ಭುತ App ಬಿಡುಗಡೆ, ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಬಹುದು

ಇಂತಹ ದುರುದ್ದೇಶಪೂರಿತ ಆಪ್ʼಗಳಿಂದ ನೀವು ಬಚಾವ್‌ ಆಗಬೇಕು  ಅಂದ್ರೆ ಗೂಗಲ್ ಪ್ಲೇ ಸ್ಟೋರ್ʼನ ಹೊರಗೆ ಯಾವುದೇ ಫೈಲ್ʼಗಳನ್ನ ಡೌನ್ಲೋಡ್(Download) ಮಾಡ್ಕೊಬೇಡಿ. ಯಾಕಂದ್ರೆ, ದುರುದ್ದೇಶಪೂರಿತ 'ಸಿಸ್ಟಂ ಅಪ್ ಡೇಟ್' ನಂತಹ ಆಪ್‌ʼಗಳು ಗೂಗಲ್ ಪ್ಲೇನಲ್ಲಿ ಎಂದೂ ಕಾಣಿಸಿಕೊಳ್ಳೊದಿಲ್ಲ ಎಂದು ಮಿತ್ತಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ರೆ, ಈ ಬಗ್ಗೆ ಗೂಗಲ್ ಇನ್ನೂ ಬಹಿರಂಗವಾಗಿ ಚರ್ಚಿಸಿಲ್ಲ. 

Flipkart Big Saving Days Sale: ಟಿವಿ-ಫ್ರಿಜ್ ಮೇಲೆ ಸಿಗಲಿದೆ ಶೇ 75 ರಷ್ಟು ರಿಯಾಯಿತಿ

Trending News