ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!

ಮಾರುಕಟ್ಟೆಯಲ್ಲಿ ನಮ್ಮ ಮುಷ್ಟಿಯಲ್ಲಿ ಸುಲಭವಾಗಿ ಹಿಡಿಯಬಹುದಾದ ಚಿಕ್ಕ ಫೋನ್ ಕೂಡ ಲಭ್ಯವಿದೆ ಎಂಬುದು ನಿಮಗೆ ತಿಳಿದಿದೆಯೇ. ಈ ಫೋನ್‌ನ ಸಹಾಯದಿಂದ ನೀವು ಕರೆ ಮತ್ತು ಸಂದೇಶ ಕಳುಹಿಸುವುದನ್ನು ಆನಂದಿಸಬಹುದು.

Written by - Yashaswini V | Last Updated : Jun 4, 2022, 12:42 PM IST
  • KECHAODA A26 ಅಂತಹ ವೈಶಿಷ್ಟ್ಯದ ಫೋನ್‌ಗಳಲ್ಲಿ ಒಂದಾಗಿದೆ
  • ಅದರ ಗಾತ್ರವೇ ಅದರ ವಿಶೇಷತೆ ಆಗಿದೆ.
  • ಈ ಫೋನ್ ಗಾತ್ರದಲ್ಲಿ ನಿಮ್ಮ ಬೆರಳಿಗಿಂತ ಚಿಕ್ಕದಾಗಿದೆ ಮತ್ತು ನೋಟದಲ್ಲಿ ಬಹಳ ಆಕರ್ಷಕವಾಗಿದೆ.
ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ  ಬೆಲೆ, ವೈಶಿಷ್ಟ್ಯ! title=
Smallest Mobile Phone

ವಿಶ್ವದ ಅತ್ಯಂತ ಚಿಕ್ಕ ಮೊಬೈಲ್ ಫೋನ್ : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚಿನ ಕ್ರೇಜ್ ಇದೆ ಮತ್ತು ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ  ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಂತ ಚಿಕ್ಕ ಮೊಬೈಲ್ ಫೋನ್ ಗಳನ್ನು  ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಬಜೆಟ್ ಶ್ರೇಣಿಯಲ್ಲೂ ನೀವು ಉತ್ತಮ ಸ್ಮಾರ್ಟ್‌ಫೋನ್ ಅನ್ನು ಸುಲಭವಾಗಿ ಕಾಣಬಹುದು. ಆದರೆ ಇಂದಿಗೂ ಕೆಲವರು ಫೀಚರ್ ಫೋನ್‌ಗಳನ್ನು ಬಳಸುತ್ತಾರೆ ಅಥವಾ ಫೀಚರ್ ಫೋನ್ ಅನ್ನು ಸೆಕೆಂಡರಿ ಫೋನ್‌ನಂತೆ ಬಳಸುತ್ತಾರೆ. ಇಂದು ನಾವು ನಿಮಗೆ ಬೆರಳಿಗಿಂತ ಕಡಿಮೆ ಗಾತ್ರದ ಫೀಚರ್ ಫೋನ್ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.

ಈ ಫೋನ್ ಮುಷ್ಟಿಯಲ್ಲಿ ಹೊಂದಿಕೊಳ್ಳುತ್ತದೆ:
KECHAODA A26 ಅಂತಹ ವೈಶಿಷ್ಟ್ಯದ ಫೋನ್‌ಗಳಲ್ಲಿ ಒಂದಾಗಿದೆ, ಇದು ನೋಟದಲ್ಲಿ ತುಂಬಾ ಮುದ್ದಾಗಿದೆ ಮತ್ತು ಅದರ ಗಾತ್ರವೇ ಅದರ ವಿಶೇಷತೆ ಆಗಿದೆ.  ಈ ಫೋನ್ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ. ಈ ಫೋನ್ ಅನ್ನು ನೀವು ಅಂಗೈನಲ್ಲಿ ಹಿಡಿದು ಕೈ ಮುಚ್ಚಿದರೆ ನಿಮ್ಮ ಕೈಯಲ್ಲಿ ಫೋನ್ ಇದೆ ಎಂಬುದೇ ಯಾರಿಗೂ ಗೊತ್ತಾಗುವುದಿಲ್ಲ. ಈ ಫೋನ್ ಗಾತ್ರದಲ್ಲಿ ನಿಮ್ಮ ಬೆರಳಿಗಿಂತ ಚಿಕ್ಕದಾಗಿದೆ ಮತ್ತು ನೋಟದಲ್ಲಿ ಬಹಳ ಆಕರ್ಷಕವಾಗಿದೆ. ನೀವು ಈ ಫೋನ್ ಅನ್ನು ಸೆಕೆಂಡರಿ ಫೋನ್ ಆಗಿ ಬಳಸಬಹುದು.

ಇದನ್ನೂ ಓದಿ- WhatsApp: ವಾಟ್ಸಾಪ್‌ನಲ್ಲಿ ಈ ನಂಬರ್‌ನಿಂದ ಮೆಸೇಜ್ ಬಂದರೆ ಅಪ್ಪಿತಪ್ಪಿಯೂ ರಿಪ್ಲೈ ಮಾಡಬೇಡಿ!

ಬೆಲೆ ತುಂಬಾ ಕಡಿಮೆ:
ನೀವು KECHAODA A26 ಬೆಲೆಯನ್ನು ನೋಡಿದರೆ, ಇದನ್ನು ಕೇವಲ 1,220 ರೂಗಳಲ್ಲಿ ಖರೀದಿಸಬಹುದು. ಈ ಫೋನ್ ಬಹುತೇಕ ಎಲ್ಲಾ ಇ-ಕಾಮರ್ಸ್ ಸೈಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದನ್ನು ಕಪ್ಪು, ಗೋಲ್ಡ್, ಬೂದು, ಸಿಲ್ವರ್ ಮತ್ತು ಗುಲಾಬಿ ಬಣ್ಣಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ- Cheapest Recharge: ಕೇವಲ 22 ರೂ.ಗಳಲ್ಲಿ 90 ದಿನಗಳ ವ್ಯಾಲಿಡಿಟಿ, ಈ ಟೆಲಿಕಾಂ ಕಂಪನಿಯ ಯೋಜನೆ ಮುಂದೆ ಏರ್ಟೆಲ್-ವಿಐ ಫೇಲ್

ಈ ಫೀಚರ್ ಫೋನ್‌ನ ವೈಶಿಷ್ಟ್ಯ:
KECHAODA A26 ಫೋನ್‌ನೊಂದಿಗೆ, ನೀವು ಕರೆ ಮತ್ತು ಸಂದೇಶ ಕಳುಹಿಸುವಿಕೆಯನ್ನು ಆನಂದಿಸಬಹುದು. ಇದು 32ಎಂಬಿ ರಾಮ್ ಮತ್ತು 32ಎಂಬಿ ರೋಮ್ ಅನ್ನು ಹೊಂದಿದೆ. ಇಷ್ಟೇ ಅಲ್ಲ, ನೀವು ಡಾಟಾವನ್ನು ಸಂಗ್ರಹಿಸಲು ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್ ಬಳಸಿ 1ಜಿಬಿ  ವರೆಗೆ ವಿಸ್ತರಿಸಬಹುದು. ಇದು 0.66 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದರಲ್ಲಿ ಪವರ್ ಬ್ಯಾಕಪ್ಗಾಗಿ 800mAh ಬ್ಯಾಟರಿಯನ್ನು ನೀಡಲಾಗಿದೆ. ಫೋನ್‌ನಲ್ಲಿ ಡ್ಯುಯಲ್ ಸಿಮ್ ಬೆಂಬಲವನ್ನು ಸಹ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News