Mars-Venus Conjunction: ಬಾನಂಗಳದಲ್ಲಿ ಇಂದು ಗ್ರಹಗಳ ಅದ್ಭುತ ಮಿಲನ, ಈ ರೀತಿ ನೋಡಿ ಈ ವಿಶಿಷ್ಟ ದೃಶ್ಯ

Mars-Venus Conjunction - ಇಂದು ಸಂಜೆ ಸೂರ್ಯಾಸ್ತದ ಬಳಿಕ ಬಾನಂಗಳದಲ್ಲಿ ಒಂದು ಅದ್ಭುತ ದೃಶ್ಯ ಸೃಷ್ಟಿಯಾಗಲಿದೆ. ಈ ಅವಧಿಯಲ್ಲಿ ಮಂಗಳ ಹಾಗೂ ಶ್ರುಕ್ರ ಗ್ರಹಗಳು ಪರಸ್ಪರ ತೀರಾ ಹತ್ತಿರಕ್ಕೆ ಬರಲಿವೆ. ಇದಲ್ಲದೆ ಚಂದ್ರ ಕೂಡ ಈ ಗ್ರಹಗಳ ಸನೀಹಕ್ಕೆ ಬರಲಿದ್ದಾನೆ.

Written by - Nitin Tabib | Last Updated : Jul 12, 2021, 04:14 PM IST
  • ಇಂದು ಬಾನಂಗಳದಲ್ಲಿ ಗೋಚರಿಸಲಿದೆ ಗ್ರಹಗಳ ಅದ್ಭುತ ಮಿಲನ.
  • ಮಂಗಳ ಹಾಗೂ ಶುಕ್ರಗ್ರಹಗಳು ಪರಸ್ಪರ ಹತ್ತಿರಕ್ಕೆ ಬರಲಿವೆ.
  • ಚಂದ್ರ ಕೂಡ ಈ ಉಭಯ ಗ್ರಹಗಳ ಹತ್ತಿರದಿಂದ ಹಾದುಹೋಗಲಿದ್ದಾನೆ.
Mars-Venus Conjunction: ಬಾನಂಗಳದಲ್ಲಿ ಇಂದು ಗ್ರಹಗಳ ಅದ್ಭುತ ಮಿಲನ, ಈ ರೀತಿ ನೋಡಿ ಈ ವಿಶಿಷ್ಟ ದೃಶ್ಯ title=
Mars-Venus Conjunction (File Photo)

ನವದೆಹಲಿ: Mars-Venus Conjunction - ಭೂಮಿಯ (Earth) ಎರಡು ನೆರೆ ಗ್ರಹಗಳಾಗಿರುವ ಮಂಗಳ (Mars) ಹಾಗೂ ಶುಕ್ರ (Venus) ಇಂದು ಪರಸ್ಪರ ತೀರಾ ಹತ್ತಿರಕ್ಕೆ ಬರಲಿವೆ. ಮಂಗಳ ಗ್ರಹ ಕೆಂಪುಬಣ್ಣದ್ದಾಗಿ ಹೊಳೆಯಲಿದ್ದರೆ, ಶುಕ್ರಗ್ರಹ ಬಿಳಿಬಣ್ಣದಿಂದ ಗೋಚರಿಸಲಿದೆ. ನೋಡಲು ಈ ಗ್ರಹಗಳು ಪರಸ್ಪರರ ತೀರಾ ಹತ್ತಿರಕ್ಕೆ ಬಂದಂತೆ ಗೋಚರಿಸಿದರೂ ಕೂಡ ವಾಸ್ತವದಲ್ಲಿ ಈ ಗ್ರಹಗಳ ನಡುವಿನ ಅಂತರ ತುಂಬಾ ಜಾಸ್ತಿ ಇರಲಿದೆ. ಗ್ರಹಗಳ ಮಿಲನದ (Planetary Conjuction) ಈ ಅದ್ಭುತ ದೃಶ್ಯ ಸೂರ್ಯಾಸ್ತದ ಬಳಿಕ ಬಾನಂಗಳದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಗೋಚರಿಸಲಿದೆ.

ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ಯಾವುದೇ ಟೆಲಿಸ್ಕೊಪ್ ಸಹಾಯವಿಲ್ಲದೆಯೇ ನೀವು ಈ ಅದ್ಭುತ ದೃಶ್ಯವನ್ನು ನೋಡಬಹುದು.
ಗ್ರಹಗಳು ಈ ರೀತಿ ಪರಸ್ಪರ ಹತ್ತಿರಕ್ಕೆ ಕಾಣಿಸಿಕೊಳ್ಳುವ ದೃಶ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ, ಈ ದೃಶ್ಯ ಇಡೀ ದೇಶಾದ್ಯಂತ ಗೋಚರಿಸಲಿದೆ. ಇದಲ್ಲದೆ ಈ ದೃಶ್ಯವನ್ನು ನೋಡಲು ನಿಮಗೆ ಯಾವುದೇ ಟೆಲಿಸ್ಕೊಪ್ (Telescope) ಅವಶ್ಯಕತೆ ಬೀಳುವುದಿಲ್ಲ. ಈ ದೃಶ್ಯವನ್ನು ನೀವು ಬರಿಗಣ್ಣಿನಿಂದ ನೋಡಬಹುದು.  ಈ ಖಗೋಳ ಘಟನೆಯನ್ನು ವಿಕ್ಷೀಸಲು ಕೇವಲ ಬಾನಂಗಳ ಸ್ವಚ್ಛವಾಗಿರಬೇಕು. ಇಂದಿನ ಘಟನೆಯ ಮತ್ತೊಂದು ವಿಶೇಷತೆ ಎಂದರೆ, ಈ ಘಟನೆಯ ವೇಳೆ ಚಂದ್ರ (Moon) ಕೂಡ ಈ ಉಭಯ ಗ್ರಹಗಳ ತುಂಬಾ ಹತ್ತಿರದಿಂದ ಹಾದುಹೋಗಲಿದ್ದಾನೆ. 

ಇದನ್ನೂ ಓದಿ-Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್

ಒಟ್ಟು ಎರಡು ದಿನಗಳವರೆಗೆ ಈ ದೃಶ್ಯ ಆಗದದಲ್ಲಿ ಗೋಚರಿಸಲಿದೆ
ಈ ಖಗೋಳ ಘಟನೆ ಕುರಿತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (Indian Institute Of Astro Physics) ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, 'ಜುಲೈ 13 ರಂದು ಆಗಸದಲ್ಲಿ ಮಂಗಳ ಹಾಗೂ ಶುಕ್ರ ಗ್ರಹಗಳು ತೀರಾ ಹತ್ತಿರಕ್ಕೆ ಬರಲಿವೆ ಮತ್ತು ಅವು ಕೇವಲ 0.5 ಡಿಗ್ರೀ ಅಂತರದಲ್ಲಿರಲಿವೆ. ಈ ಅವಧಿಯಲ್ಲಿ ಜುಲೈ 12ರಂದು ಚಂದ್ರ ಕೂಡ ಈ ಎರಡೂ ಗ್ರಹಗಳ ಹತ್ತಿರದಿಂದ ಹಾದುಹೋಗಲಿದ್ದಾನೆ' ಎಂದು ಹೇಳಿದೆ.

ಇದನ್ನೂ ಓದಿ -ಮಂಗಳನ ಅಂಗಳದಲ್ಲಿ ಪುನಃ ಸಿಕ್ಕ ಜೀವನದ ಸಂಕೇತಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News