Jabardast Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿದೆ ಜಿಯೋ ಕಂಪನಿಯ ಈ ರೀಚಾರ್ಚ್ ಯೋಜನೆ!

Best Recharge Plan: ರಿಲಯನ್ಸ್ ಜಿಯೋ ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಪ್ರಯೋಜನಗಳ ಜೊತೆಗೆ ಗ್ರಾಹಕರ ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಲವು ಒಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ. ಬನ್ನಿ ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ,  

Written by - Nitin Tabib | Last Updated : Mar 7, 2023, 07:39 PM IST
  • ಜಿಯೋದ ಈ ಯೋಜನೆಯ ಬೆಲೆ ರೂ 399 ಮತ್ತು
  • ಇದರಲ್ಲಿ ನಿಮಗೆ ಪ್ರತಿ ತಿಂಗಳು 75GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ
  • ಮತ್ತು ದಿನಕ್ಕೆ 100 SMS ನೀಡಲಾಗುತ್ತಿದೆ.
Jabardast Recharge Plan: ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಧೂಳೆಬ್ಬಿಸಿದೆ ಜಿಯೋ ಕಂಪನಿಯ ಈ ರೀಚಾರ್ಚ್ ಯೋಜನೆ! title=
ರಿಲಯನ್ಸ್ ಜಿಯೋ ಪೈಸಾ ವಸೂಲ್ ಯೋಜನೆ!

Cheapest Recharge Plan: ಜಿಯೋ ತನ್ನ ರೀಚಾರ್ಜ್ ಯೋಜನೆಗಳಲ್ಲಿ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ, ಆದರೆ ವಿಶೇಷ ರೀಚಾರ್ಜ್ ಯೋಜನೆಗಳ ವಿಷಯಕ್ಕೆ ಬಂದಾಗ, ಈ ಸಂದರ್ಭದಲ್ಲಿ ಕಂಪನಿಯು ಪ್ರಸ್ತುತ ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ, ಈ ಯೋಜನೆ ನಿಮಗೂ ಕೂಡ ಇಷ್ಟವಾಗಲಿದೆ. ಏಕೆಂದರೆ ಈ ಯೋಜನೆಯಲ್ಲಿ ಒಂದಲ್ಲ, ಹಲವು ಪ್ರಯೋಜನಗಳನ್ನು ನೀಡಲಾಗಿದೆ. ಒಮ್ಮೆ ನೀವು ಈ ರೀಚಾರ್ಜ್ ಯೋಜನೆಯನ್ನು ಬಳಸಿದರೆ, ಅದರ ವೆಚ್ಚವು ತುಂಬಾ ಕಡಿಮೆಯಾಗಿದೆ ಎಂಬುದು ನಿಮಗೆ ಅರ್ಥವಾಗಲಿದೆ, ಏಕೆಂದರೆ ಇದರಲ್ಲಿ ಲಭ್ಯವಿರುವ ಪ್ರಯೋಜನಗಳ ದೊಡ್ಡ ಪಟ್ಟಿಯೇ ಇದೆ. ಬನ್ನಿ ತಿಳಿದುಕೊಳ್ಳೋಣ.

ಇದು ಅತ್ಯಂತ ಅಗ್ಗದ ಯೋಜನೆಗಳಾಗಿವೆ
ಜಿಯೋದ ಈ ಯೋಜನೆಯ ಬೆಲೆ ರೂ 399 ಮತ್ತು ಇದರಲ್ಲಿ ನಿಮಗೆ ಪ್ರತಿ ತಿಂಗಳು 75GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತಿದೆ. ಈ ಯೋಜನೆಯು Netflix, Amazon Prime Video ಮತ್ತು Disney + Hotstar ಗೆ ಒಂದು ವರ್ಷದ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ.

ರೂ 599 ಯೋಜನೆಯ ಪ್ರಯೋಜನಗಳು
ಈ ಯೋಜನೆಯು ನಿಮಗೆ 100GB ಇಂಟರ್ನೆಟ್, 100 ದೈನಂದಿನ SMS ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀದಲಾಗುತ್ತಿದೆ. ಈ ಯೋಜನೆಯಲ್ಲಿಯೂ, ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ-Indian Railways Update:ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ!

ಪೋಸ್ಟ್‌ಪೇಯ್ಡ್ ಪ್ಲಾನ್ ಬೆಲೆ 799 ರೂ
799 ರೂ ಬೆಲೆಯ ಯೋಜನೆಯಲ್ಲಿ 150GB ಡೇಟಾ ಮತ್ತು 200GB ರೋಲ್‌ಓವರ್ ಡೇಟಾವನ್ನು ನೀಡಲಾಗುತ್ತಿದೆ. ಇದು ಕುಟುಂಬ ಯೋಜನೆಯಾಗಿದ್ದು, ಇದರಲ್ಲಿ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳು, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ SMS ಅನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ.

ಇದನ್ನೂ ಓದಿ-UPSC ಪರೀಕ್ಷೆ ಬರೆದ AI ಚಾಟ್ ಬಾಟ್ ChatGPT, ಪಾಸಾಯ್ತಾ ಅಥವಾ ಫೇಲಾಯ್ತಾ?

ಈ ಯೋಜನೆ ಅತ್ಯಂತ ದುಬಾರಿಯಾಗಿದೆ
ರೂ 1,000 ಕ್ಕಿಂತ ಕಡಿಮೆ ಬೆಲೆಯ OTT ಯೋಜನೆಗಳ ಪಟ್ಟಿಯಲ್ಲಿ ಇದು ಅತ್ಯಂತ ದುಬಾರಿ ಯೋಜನೆಯಾಗಿದೆ. 999 ರೂ.ಗಳಿಗೆ ಲಭ್ಯವಿರುವ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 200GB ಹೈ ಸ್ಪೀಡ್ ಡೇಟಾ, 500GB ರೋಲ್‌ಓವರ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು SMS ಸೌಲಭ್ಯ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಸದಸ್ಯತ್ವದೊಂದಿಗೆ ಬರುತ್ತವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News