JioFiber offer.! ಗ್ರಾಹಕರಿಗೆ ನೀಡುತ್ತಿದೆ 6,500 ರೂಪಾಯಿಗಳ ಲಾಭ

JioFiber offer : ಅಕ್ಟೋಬರ್ 18 ಮತ್ತು ಅಕ್ಟೋಬರ್ 28 ರವರೆಗೆ ಜಿಯೋ ಫೈಬರ್ ಗ್ರಾಹಕರು ಈ ಆಫರ್ ನ ಲಾಭ ಪಡೆದುಕೊಳ್ಳಬಹುದು. 

Written by - Ranjitha R K | Last Updated : Oct 19, 2022, 10:23 AM IST
  • JioFiber ಗ್ರಾಹಕರಿಗೆ ಹಬ್ಬದ ಕೊಡುಗೆಯನ್ನು ಘೋಷಿಸಿದೆ.
  • ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.
  • ಕೊಡುಗೆ ಅಕ್ಟೋಬರ್ 18 ಮತ್ತು ಅಕ್ಟೋಬರ್ 28 ರವರೆಗೆ ಇರಲಿದೆ
JioFiber offer.! ಗ್ರಾಹಕರಿಗೆ ನೀಡುತ್ತಿದೆ 6,500 ರೂಪಾಯಿಗಳ   ಲಾಭ  title=
Jio fiber Diwali offer

ಬೆಂಗಳೂರು : JioFiber ಗ್ರಾಹಕರಿಗೆ ಹಬ್ಬದ ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ. ಅಕ್ಟೋಬರ್ 18 ಮತ್ತು ಅಕ್ಟೋಬರ್ 28 ರವರೆಗೆ ಜಿಯೋ ಫೈಬರ್ ಗ್ರಾಹಕರು ಈ ಆಫರ್ ನ ಲಾಭ ಪಡೆದುಕೊಳ್ಳಬಹುದು. ಈ ಆಫರ್ ಅಡಿಯಲ್ಲಿ ಹೊಸ JioFiber ಸಂಪರ್ಕವನ್ನು ಖರೀದಿಸುವ ಮೂಲಕ ಬಳಕೆದಾರರು 6500 ರೂಪಾಯಿಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. 

JioFiber ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್ 2022 : 
ಜಿಯೋ ಈ ಆಫರ್ ಅನ್ನು JioFiber ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್ 2022 ಎಂದು ಕರೆಯುತ್ತಿದೆ. ಈ ಕೊಡುಗೆಯ ಅಡಿಯಲ್ಲಿ, ಬಳಕೆದಾರರು ಕಂಪನಿಯಿಂದ 15 ದಿನಗಳ ಮಾನ್ಯತೆಯೊಂದಿಗೆ 100%  ವ್ಯಾಲ್ಯೂ ಬ್ಯಾಕ್ ಅವಕಾಶ ಪಡೆಯಲಿದ್ದಾರೆ. ಆಫರ್‌ನಲ್ಲಿರುವ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ. s

ಇದನ್ನೂ ಓದಿ : T20 ವಿಶ್ವಕಪ್ ಶುರುವಾಗುತ್ತಿದ್ದಂತೆ ಗ್ರಾಹಕರಿಗೆ ಜಿಯೋ ಶಾಕ್!

599 ರೂಪಾಯಿ ಯೋಜನೆ (30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+  ಆನ್ ಡಿಮ್ಯಾಂಡ್ ಚಾನೆಲ್ ) :
4,241 ರೂ ( 3,594 ರೂ + 647 ಜಿಎಸ್‌ಟಿ) ಯೋಜನೆಯಲ್ಲಿ ಹೊಸ ಗ್ರಾಹಕರು  4,500 ರೂ ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ಈ ವೋಚರ್‌ಗಳು 4  ಬೇರೆ ಬೇರೆ  ಬ್ರಾಂಡ್ ಗಳಿಗೆ ಸಂಬಂಧಿಸಿದ್ದಾಗಿದೆ. ಅಜಿಯೋದ 1,000 ರೂಪಾಯಿ ವೋಚರ್, ರಿಲಯನ್ಸ್ ಡಿಜಿಟಲ್  1,000 ರೂ. ವೋಚರ್, ನೆಟ್‌ಮೆಡ್ಸ್ 1,000 ರೂ. ವೋಚರ್ ಮತ್ತು ಇಕ್ಸಿಗೋ 1,500 ರೂ . ವೋಚರ್. ಇಷ್ಟು ಮಾತ್ರವಲ್ಲದೆ, ಈ ಎಲ್ಲಾ ಗ್ರಾಹಕರು ಹೆಚ್ಚುವರಿಯಾಗಿ, ಯೋಜನೆಯ ಭಾಗವಾಗಿರುವ 6 ತಿಂಗಳ ವ್ಯಾಲಿಡಿಟಿಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

899 ರೂ  ಯೋಜನೆ (100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ಆನ್ ಡಿಮ್ಯಾಂಡ್ ಚಾನೆಲ್ ) :
6,365 ರೂ  (ರೂ 5,394 + 971 ಜಿಎಸ್‌ಟಿ)  ಯೋಜನೆಯಲ್ಲಿ ಹೊಸ ಗ್ರಾಹಕರು 6,500 ರೂಪಾಯಿ ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ಇಲ್ಲಿ ಕೂಡಾ ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳದ್ದಾಗಿದೆ. ಅಜಿಯೋದ  2,000 ರೂ. ವೋಚರ್, ರಿಲಯನ್ಸ್ ಡಿಜಿಟಲ್ 1,000 ರೂ. ವೋಚರ್, Netmeds  500 ರೂ. ವೋಚರ್ ಮತ್ತು ಇಕ್ಸಿಗೋ ರೂ 3,000 ವೋಚರ್. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು  6 ತಿಂಗಳ ವ್ಯಾಲಿಡಿಟಿಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ : DIWALI 2022: 75GB ಉಚಿತ ಡೇಟಾ ಜೊತೆಗೆ 1 ವರ್ಷ ಹಾಟ್ ಸ್ಟಾರ್ ಸೇವೆಯೂ ಫ್ರೀ

ಮೂರು ತಿಂಗಳಿಗೆ 899 ಯೋಜನೆ (100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಆನ್ ಡಿಮ್ಯಾಂಡ್ ಚಾನೆಲ್ ) :
ಈ ಯೋಜನೆಯಲ್ಲಿ ಹೊಸ ಗ್ರಾಹಕರು 2,697 ರೂ.  (ರೂ. 3,182 + 485 ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಈ ಯೋಜನೆಯ ಗ್ರಾಹಕರಿಗೆ  3,500 ರೂಪಾಯಿ ಮೌಲ್ಯದ ವೋಚರ್‌ಗಳು ಸಿಗುತ್ತವೆ.   ಆ ವೋಚರ್ ಗಳೆಂದರೆ ಅಜಿಯೋದ 1,000 ರೂ.  ವೋಚರ್, ರಿಲಯನ್ಸ್ ಡಿಜಿಟಲ್ 500 ರೂ. ವೋಚರ್, Netmeds 500 ರೂ. ವೋಚರ್ ಮತ್ತು IXIGO  1,500 ರೂ.  ವೋಚರ್. ಈ ಯೋಜನೆಯಲ್ಲಿ ಹೆಚ್ಚುವರಿ ಮಾನ್ಯತೆ ಅನ್ವಯಿಸುವುದಿಲ್ಲ.

ಕಂಪನಿಯು ಕೇವಲ 599 ಮತ್ತು 899 ರೂ.ಗಳ ಎರಡು ಯೋಜನೆಗಳಿಗೆ ಕೊಡುಗೆಗಳನ್ನು ನೀಡಿದೆ. ಕನಿಷ್ಠ ಆರು ತಿಂಗಳವರೆಗೆ ಯೋಜನೆಯನ್ನು ಖರೀದಿಸುತ್ತಿರುವ ಗ್ರಾಹಕರಿಗೆ ಈ ಕೊಡುಗೆಯನ್ನು ನೀಡಲಾಗುತ್ತದೆ ಎನ್ನುವುದು ನೆನಪಿರಲಿ. 899 ರೂಗಳ ಯೋಜನೆಯನ್ನು ಮೂರು ತಿಂಗಳವರೆಗೆ ಖರೀದಿಸಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News