ನವದೆಹಲಿ : ಇದೀಗ ಟೆಲಿಕಾಂ ಕಂಪನಿಗಳು ಗಹಕರನ್ನು ತನ್ನತ್ತ ಸೆಳೆಯಲು ದಿನಕ್ಕೊಂದು ಆಫರ್ ನೀಡುತ್ತಿದೆ. ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು (Jio recharge plan) ಪರಿಚಯಿಸುತ್ತಿದೆ. ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಟೆಲಿಕಾಂ ಉದ್ಯಮದಲ್ಲಿ ಮೂರು ಕಂಪನಿಗಳು ಮೊದಲ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಸದ್ಯಕ್ಕಂತೂ ಈ ಪೈಪೋಟಿಯಲ್ಲಿ ಜಿಯೋ (Jio) ಮುಂದಿರುವಂತೆ ಕಾಣುತ್ತಿದೆ.
ಎಂಟ್ರಿ ಎಲೆವೆಲ್ ಪ್ಲಾನ್ :
ತಮ್ಮ ಕಂಪನಿಗಳಿಗೆ ಹೊಸ ಗ್ರಾಹಕರನ್ನು ಸೇರಿಸುವ ಉದ್ದೇಶದಿಂದ ಕಂಪನಿಗಳು ಕಡಿಮೆ ಎಂಟ್ರಿ ಎಲೆವೆಲ್ ಪ್ಲಾನ್ (Entry level plan) ಅನ್ನು ನೀಡುತ್ತವೆ. Vi ಈಗ ತನ್ನ 49 ರೂ. ಎಂಟ್ರಿ ಪ್ಲಾನ್ ಅನ್ನು ನಿಲ್ಲಿಸಿದೆ. ಈ ಪ್ಲಾನ್ ನಲ್ಲಿ 14 ದಿನಗಳ ಅವಧಿಗೆ 38ರೂ. ಗಳ ಟಾಕ್ ಟೈಮ್ ಮತ್ತು 100MB ಡೇಟಾವನ್ನು ಸ್ಸಿಗುತ್ತಿತ್ತು. ಏರ್ಟೆಲ್ ಕೂಡಾ ಕಡಿಮ ಬೆಲೆಯ ಎಂಟ್ರಿ ಪ್ಲಾನ್ ಅನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ : WhatsApp ಕದಿಯುತ್ತಿದೆ Facebookನ ಈ ಅದ್ಭುತ ವೈಶಿಷ್ಟ್ಯ
ಸಿಎಲ್‌ಎಸ್‌ಎ ವರದಿಯ ಪ್ರಕಾರ, ಈಗ ಎರಡೂ ಕಂಪನಿಗಳು ತಮ್ಮ ಎಂಟ್ರಿ ಪ್ಲಾನ್ ಗಳನ್ನೂ ಕೊನೆಗೊಳಿಸಿರುವುದರ ಲಾಭ ಜಿಯೋಗೆ ಆಗಬಹುದು. ಯಾಕೆಂದರೆ ಜಿಯೋದ 75 ರೂಪಾಯಿ ಪ್ಲಾನ್ (Jio recharge plan) ಅಗ್ಗವಾಗಿದ್ದು, ಈ ಕಂಪನಿಗಳ 79 ರೂ, ಪ್ಲಾನ್ ಗೆ ಹೋಲಿಸಿದರೆ, ಪ್ರಯೋಜನಗಳು ಕೂಡಾ ಅಧಿಕವಾಗಿದೆ ಎನ್ನಲಾಗಿದೆ.
ಜಿಯೋದ 75 ರೂ ಪ್ಲಾನ್ :
ಗ್ರಾಹಕರು 75 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯನ್ನು (Prepaid plan) ಇಷ್ಟಪಡುತ್ತಾರೆ. ಈ ಪ್ಲಾನ್ ನಲ್ಲಿ 3 ಜಿಬಿ ಡೇಟಾ, ಅನ್ಲಿಮಿಟೆಡ್ ಕಾಲ್, ಜೊತೆಗೆ 50 ಸಂದೇಶಗಳ ಸೌಲಭ್ಯ ಸಿಗುತ್ತಿದೆ. ಅಲ್ಲದೆ ಬಳಕೆದಾರರು ಎಲ್ಲಾ ಜಿಯೋ ಆಪ್‌ಗಳ ಚಂದಾದಾರಿಕೆಯನ್ನು ಕೂಡಾ ಪಡೆಯುತ್ತಾರೆ. ಈ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಇದನ್ನೂ ಓದಿ : ಅತ್ಯಂತ ಕಡಿಮೆ ದರದ smartphone ಖರೀದಿಸಬೇಕೇ ? ಈ ದಿನದಿಂದ ಆರಂಭವಾಗಲಿದೆ jioPhone Next ಪ್ರಿ ಬುಕಿಂಗ್
ಇನ್ನು Viನ 79 ರೂ. ಪ್ಲಾನ್ ಬಗ್ಗೆ ಹೇಳುವುದಾದರೆ, ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ 200MB ಡೇಟಾ ಮತ್ತು 64 ರೂಪಾಯಿಗಳ ಟಾಕ್ ಟೈಮ್ ಸಿಗುತ್ತದೆ.
5 ವರ್ಷಗಳಲ್ಲಿ 400 ಮಿಲಿಯನ್ ಗ್ರಾಹಕರು :
ರಿಲಯನ್ಸ್ ಜಿಯೋ (Jio) ಕೇವಲ ಐದು ವರ್ಷಗಳಿಂದ ಟೆಲಿಕಾಂ ಮಾರುಕಟ್ಟೆಯಲ್ಲಿದೆ. ಇಷ್ಟು ಕಡಿಮೆ ಸಮಯದಲ್ಲಿ ಮೊದಲ ಸ್ಥಾನಕ್ಕೇರಿದೆ. ಇದು ದೇಶದ ಅತ್ಯಂತ ಜನಪ್ರಿಯ ಟೆಲಿಕಾಂ ಕಂಪನಿಯಾಗಿದೆ (Telecom company). ಜಿಯೋ ತನ್ನ ಗ್ರಾಹಕರಿಗೆ 28 ದಿನಗಳು ಮತ್ತು 84 ದಿನಗಳ ಪ್ರಿಪೇಯ್ಡ್ ಯೋಜನೆಗಳಲ್ಲಿ 20% ರಿಯಾಯಿತಿಯನ್ನು ನೀಡುತ್ತಿದೆ. ಜಿಯೋ ಇದೀಗ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ