ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೋ ಸೂಪರ್ ಪ್ಲಾನ್ !ಕೇವಲ 175 ರೂ.ಗೆ ನೀಡುತ್ತಿದೆ ತಿಂಗಳ ವ್ಯಾಲಿಡಿಟಿ ಹೈ ಸ್ಪೀಡ್ ಡೇಟಾ ಜೊತೆಗೆ 12 OTT

ತನ್ನ ಗ್ರಾಹಕರು ಬೇರೆ ನೆಟ್ ವರ್ಕ್ ಗೆ ಪೋರ್ಟ್ ಆಗುವುದನ್ನು ತಡೆಯುವ ಸಲುವಾಗಿ ಜಿಯೋ ಇದೀಗ ಹೊಸ ಹೊಸ ಪ್ಲಾನ್ ಗಳನ್ನು ತರುತ್ತಿದೆ.  

Written by - Ranjitha R K | Last Updated : Aug 9, 2024, 10:08 AM IST
  • 175 ರೂಪಾಯಿಯ ಹೊಸ ಅಗ್ಗದ ರೀಚಾರ್ಜ್ ಯೋಜನೆ
  • ಪೋರ್ಟ್ ಗೆ ಕಡಿವಾಣ ಹಾಕಲು ಜಿಯೋ ಪ್ಲಾನ್
  • ಅನೇಕ ಅಪ್ಲಿಕೇಶನ್‌ಗಳ ಉಚಿತ ಸದಸ್ಯತ್ವ
ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಜಿಯೋ ಸೂಪರ್ ಪ್ಲಾನ್ !ಕೇವಲ 175 ರೂ.ಗೆ ನೀಡುತ್ತಿದೆ ತಿಂಗಳ ವ್ಯಾಲಿಡಿಟಿ ಹೈ ಸ್ಪೀಡ್ ಡೇಟಾ ಜೊತೆಗೆ 12 OTT   title=

ಬೆಂಗಳೂರು : ಜಿಯೋ ತನ್ನ ಕೋಟಿಗಟ್ಟಲೆ ಬಳಕೆದಾರರಿಗೆ 175 ರೂಪಾಯಿಯ  ಹೊಸ ಅಗ್ಗದ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.ಮೊಬೈಲ್ ದರದಲ್ಲಿ ಇತ್ತೀಚಿನ ಹೆಚ್ಚಳದ ನಂತರ, ಅನೇಕ ಬಳಕೆದಾರರು ಖಾಸಗಿ ಟೆಲಿಕಾಂ ಕಂಪನಿಗಳಿಂದ BSNLಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ.ಈ ಪ್ರವೃತ್ತಿಗೆ ಕಡಿವಾಣ ಹಾಕಲು ಜಿಯೋ ಈಗ ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.ಈ ಯೋಜನೆಯು ಅನೇಕ ಅಪ್ಲಿಕೇಶನ್‌ಗಳ ಉಚಿತ ಸದಸ್ಯತ್ವವನ್ನು ಒಳಗೊಂಡಿದೆ.

ಜಿಯೋ ರೂ 175 ಪ್ರಿಪೇಯ್ಡ್ ಯೋಜನೆ :
ಜಿಯೋ ರೀಚಾರ್ಜ್ ಆಯ್ಕೆಯು ಮನರಂಜನಾ ವಿಭಾಗದಲ್ಲಿ ಬರುತ್ತದೆ. ಬಳಕೆದಾರರು ಜಿಯೋ ವೆಬ್‌ಸೈಟ್ ಅಥವಾ My Jio ಅಪ್ಲಿಕೇಶನ್ ಮೂಲಕ ಈ ಯೋಜನೆಯನ್ನು ತೆಗೆದುಕೊಳ್ಳಬಹುದು.ರಿಲಯನ್ಸ್ ಜಿಯೋದ 175 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಮಾನ್ಯತೆ 28 ದಿನಗಳು.ಇನ್ನು ಇದರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ ಒಟ್ಟು 10GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ.

ಇದನ್ನೂ ಓದಿ : Screen Time For Children: ಯಾವ ವಯಸ್ಸಿನ ಮಕ್ಕಳು ಎಷ್ಟೊತ್ತು ಸ್ಕ್ರೀನ್ ವೀಕ್ಷಿಸಬಹುದು? ಇಲ್ಲಿದೆ ಮಹತ್ವದ ಮಾಹಿತಿ

ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ರೀಚಾರ್ಜ್ ಯೋಜನೆಯೊಂದಿಗೆ ಈ ಆಯ್ಕೆಯನ್ನು ಬಳಸಬಹುದು.ಈ ಯೋಜನೆಯು Sony Liv, Zee5, Jio ಸಿನಿಮಾ ಪ್ರೀಮಿಯಂ, Lionsgate Play, Discovery+, Sun NXT, Kancha Lannaka, Chaupal, DocuBay, Epic On ಮತ್ತು Hoichoy ನಂತಹ ಅನೇಕ OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.ಇದರ ವ್ಯಾಲಿಡಿಟಿ  28 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಜಿಯೋ ಮನರಂಜನಾ ಯೋಜನೆಗಳು :
ಇದರ ಹೊರತಾಗಿ, ಜಿಯೋ 329,1029 ಮತ್ತು 1049 ರೂಪಾಯಿ ಬೆಲೆಯ ಮೂರು ಹೊಸ ಮನರಂಜನಾ ಯೋಜನೆಗಳನ್ನು ಬಿಡುಗಡೆ ಮಾಡಿದೆ.ಈ ಪ್ರಿಪೇಯ್ಡ್ ಯೋಜನೆಗಳು ಅನಿಯಮಿತ ಕರೆ, OTT ಅಪ್ಲಿಕೇಶನ್ ಚಂದಾದಾರಿಕೆ ಮತ್ತು ದೈನಂದಿನ ಡೇಟಾದಂತಹ ಅನೇಕ ಪ್ರಯೋಜನಗಳನ್ನು ಹೊಂದಿವೆ. ಈ ಜಿಯೋ ರೀಚಾರ್ಜ್ ಯೋಜನೆಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮನರಂಜನಾ ವಿಭಾಗದಲ್ಲಿ ಕಾಣಿಸುತ್ತವೆ. 

ಇದನ್ನೂ ಓದಿ : ಕಣ್ಣು ಮತ್ತು ಮೊಬೈಲ್‌ ಸ್ಕ್ರೀನ್‌ ನಡುವೆ ಎಷ್ಟು ದೂರ ಅಂತರವಿರಬೇಕು? ಕಣ್ಣಿಗೆ ಸಮೀಪದಲ್ಲಿಟ್ಟು ಮೊಬೈಲ್‌ ನೋಡಿದ್ರೆ ಏನಾಗುತ್ತೆ?

ಜಿಯೋ ಫ್ರೀಡಂ ಪ್ಲಾನ್ : 
ಜಿಯೋ ಫ್ರೀಡಂ ಪ್ಲಾನ್‌ನ ಬೆಲೆ 355  ರೂ. ಆಗಿದ್ದು ಅದರ ಮಾನ್ಯತೆ 30 ದಿನಗಳವರೆಗೆ ಇರಲಿದೆ. ಇದು ಇತರ ಜಿಯೋ ಯೋಜನೆಗಳಿಗಿಂತ ಭಿನ್ನವಾಗಿದೆ.ಇದರಲ್ಲಿ 25GB ಡೇಟಾ ಸಿಗುತ್ತದೆ. ಇದನ್ನು ಬಳಕೆದಾರರು ಹೇಗೆ ಬೇಕಾದರೂ ಬಳಸಬಹುದು. ಇದಕೆ ದೈನಂದಿನ ಮಿತಿ ಇರುವುದಿಲ್ಲ. 

ಅಂದ ಹಾಗೆ 175 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಕೇವಲ ಡೇಟಾ ಪ್ರಯೋಜನ ಮಾತ್ರ ಲಭ್ಯವಿದೆ. ಇದರಲ್ಲಿ ಕಾಲ್ ಮಾಡುವುದು ಸಾಧ್ಯವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News