Jio Fiber New Feature: Jio Fiber ಬಳಕೆದಾರರಿಗಾಗಿ ಬಂದಿದೆ ಒಂದು ಹೊಸ ವೈಶಿಷ್ಟ್ಯ, ವೆಬ್ ಕ್ಯಾಮ್ ಇಲ್ಲದೆಯೇ TV ಪರದೆಯ ಮೂಲಕ ವಿಡಿಯೋ ಕಾಲ್

Jio Fiber New Feature: TV ಮೂಲಕ ವಿಡಿಯೋ ಕಾಲ್ ಮಾಡಲು ಇನ್ಮುಂದೆ ನಿಮಗೆ ವೆಬ್ ಕ್ಯಾಮ್ ಅವಶ್ಯಕತೆ ಬೀಳುವುದಿಲ್ಲ. ನೀವು ಕೇವಲ ನಿಮ್ಮ ಮೊಬೈಲ್ ಫೋನ್ ಕ್ಯಾಮರಾವನ್ನು ಸಹ ಬಳಸಿ ಟಿವಿ ಮೇಲೆ ವಿಡಿಯೋ ಕಾಲ್ ಮಾಡಬಹುದಾಗಿದೆ. ಆದರೆ, ಈ ಸೌಲಭ್ಯ ಕೇವಲ Jio Fiber ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಇದಕ್ಕಾಗಿ ಜಿಯೋ ಫೈಬರ್ ನಲ್ಲಿ ನೂತನ ವೈಶಿಷ್ಟ್ಯ ನೀಡಲಾಗಿದೆ.

Written by - Nitin Tabib | Last Updated : Aug 4, 2021, 12:55 PM IST
  • ತನ್ನ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ.
  • Jio Fiber ಬಳಕೆದಾರರು ಇದೀಗ ತಮ್ಮ ಟಿವಿ ಪರದೆಯ ಮೂಲಕ ಯಾವುದೇ ಕ್ಯಾಮೆರಾ ಮತ್ತು ವೆಬ್‌ಕ್ಯಾಮ್‌ ಇಲ್ಲದೆ ವಿಡಿಯೋ ಕರೆ ಮಾಡಬಹುದು.
  • ಇದಕ್ಕಾಗಿ, ಕಂಪನಿಯು ಮೊಬೈಲ್‌ನಲ್ಲಿ ಹೊಸ ಫೀಚರ್ Camera on Mobile ವೈಶಿಷ್ಟ್ಯ ಜಿಯೋ ಬಿಡುಗಡೆ ಮಾಡಿದೆ.
Jio Fiber New Feature: Jio Fiber ಬಳಕೆದಾರರಿಗಾಗಿ ಬಂದಿದೆ ಒಂದು ಹೊಸ ವೈಶಿಷ್ಟ್ಯ, ವೆಬ್ ಕ್ಯಾಮ್ ಇಲ್ಲದೆಯೇ TV ಪರದೆಯ ಮೂಲಕ ವಿಡಿಯೋ ಕಾಲ್ title=
Jio Fiber New Feature (File Photo)

Jio Fiber New Feature - Jio Fiber ಬಳಕೆದಾರರು ಇದೀಗ ತಮ್ಮ ಟಿವಿ ಪರದೆಯ ಮೂಲಕ ಯಾವುದೇ ಕ್ಯಾಮೆರಾ ಮತ್ತು ವೆಬ್‌ಕ್ಯಾಮ್‌ಗಳಿಲ್ಲದೆ ವೀಡಿಯೊ ಕರೆಗಳನ್ನು ಮಾಡಬಹುದು. ಇದಕ್ಕಾಗಿ, ಕಂಪನಿಯು ಮೊಬೈಲ್‌ನಲ್ಲಿ ಹೊಸ ಫೀಚರ್ Camera on Mobile ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಈ ವೈಶಿಷ್ಟ್ಯವನ್ನು JioJoin App (ಈ ಹಿಂದೆ ಇದರ ಹೆಸರು JioCall ಆಗಿತ್ತು) ಸಹಾಯದಿಂದ ತಲುಪಬಹುದಾಗಿದೆ. ಈ ಅಪ್ಲಿಕೇಶನ್ Android ಮತ್ತು iOS ಬಳಕೆದಾರರಿಗೆ ಲಭ್ಯವಿದೆ.

ಇದು JioFiberVoice ಮಾಧ್ಯಮದ ಮೂಲಕ ವಿಡಿಯೋ ಕರೆ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಇದನ್ನು Jio Fiber ಸೇವೆಯ ಜೊತೆಗೆ ಶಾಮೀಳುಗೊಳಿಸಲಾಗಿದೆ. ಇದರಿಂದ ಬ್ರಾಡ್‌ಬ್ಯಾಂಡ್ ಬಳಕೆದಾರರು ಕರೆ ಮಾಡುವ ಸೌಲಭ್ಯವನ್ನುಸಿಗಲಿದೆ. ಬಳಕೆದಾರರು ತಮ್ಮ ಲ್ಯಾಂಡ್‌ಲೈನ್ ಸಂಖ್ಯೆಯನ್ನು ಬಳಸಿಕೊಂಡು ಧ್ವನಿ ಕರೆಗಳನ್ನು ಮಾಡಲು JioJoin ಅಪ್ಲಿಕೇಶನ್ ಅನ್ನು ಬಳಸಬಹುದು. ಕ್ಯಾಮರಾ ಆನ್ ಮೊಬೈಲ್ ವೈಶಿಷ್ಟ್ಯವು ಕಳೆದ ಕೆಲವು ತಿಂಗಳುಗಳಿಂದ ಪರೀಕ್ಷೆಯಲ್ಲಿತ್ತು ಮತ್ತು ಇದೀಗ ಅದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗಿದೆ. ಬನ್ನಿ, ಈ ವೈಶಿಷ್ಟ್ಯವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೊಮ್ಮೆ ತಿಳಿಯೋಣ.

Jio Fiber ಬಳಕೆದಾರರು ಈ ರೀತಿ ವಿಡಿಯೋ ಕರೆ ಮಾಡಬಹುದು (Jio Fiber Latest Update)
ಈ ಹೊಸ ವೈಶಿಷ್ಟ್ಯ ಬಳಕೆ ತುಂಬಾ ಸುಲಭವಾಗಿದೆ. ಕೆಳಗೆ ಸೂಚಿಸಿದ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಬಳಸಬಹುದು. ನಿಮ್ಮ ಮೊಬೈಲ್ ಫೋನಿನ ಕ್ಯಾಮರಾದ ಮೂಲಕ ಟಿವಿಯಲ್ಲಿ ವೀಡಿಯೊ ಕರೆ ಮಾಡಲು, ನೀವು ಮೊದಲು 10 ಅಂಕಿಯ ಜಿಯೋ ಫೈಬರ್ ಸಂಖ್ಯೆಯನ್ನು JioJoi Appನಲ್ಲಿ ಕಾನ್ಫಿಗರ್ ಮಾಡಬೇಕಾಗುತ್ತದೆ. ಇದು ನಿಮ್ಮ ಫೋನ್ ಅನ್ನು ನಿಮ್ಮ Jio Fiber ಸಂಪರ್ಕದ ಸಾಧನವಾಗಿ ಮಾಡಲು ಅಪ್ಲಿಕೇಶನ್‌ಗೆ ಅನುಮತಿಸುತ್ತದೆ. ಸಂರಚನೆಯ ನಂತರ, JioJoin ಆಪ್‌ನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ನೀವು Camera on Mobile ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಈಗ ನೀವು ನಿಮ್ಮ ಫೋನಿನ ಕ್ಯಾಮರಾವನ್ನು ಟಿವಿಗಾಗಿ ವೆಬ್‌ಕ್ಯಾಮ್ ರೂಪದಲ್ಲಿ  ಬಳಸಿಕೊಂಡು ವೀಡಿಯೊ ಕರೆಗಳನ್ನು ಮಾಡಬಹುದು.

ಇದನ್ನೂ ಓದಿ-Jio ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ Netflix, Amazon Prime, Disney+ Hotstar ಚಂದಾದಾರಿಕೆ

ವೀಡಿಯೊ ಕರೆಗಳ ಸಮಯದಲ್ಲಿ ಉತ್ತಮ ಗುಣಮಟ್ಟಕ್ಕಾಗಿ, ಜಿಯೋ ಫೈಬರ್ ತನ್ನ ಬಳಕೆದಾರರಿಗೆ ಮೋಡೆಮ್‌ ಅನ್ನು  5GHz ವೈ-ಫೈ ಬ್ಯಾಂಡ್‌ಗೆ ಬದಲಿಸಲು ಸಲಹೆ ನೀಡುತ್ತದೆ.  ಆದರೂ ಕೂಡ ಬಳಕೆದಾರರು 2.4GHz ಬ್ಯಾಂಡ್‌ನಲ್ಲಿ ವೀಡಿಯೊ ಕರೆಗಳನ್ನು ಸಹ ಮಾಡಬಹುದು.

ಇದನ್ನೂ ಓದಿ-ಏರ್ಟೆಲ್ ನ 79 ರೂ. ಪ್ಲಾನ್ ಗೆ ಟಕ್ಕರ್ ನೀಡುತ್ತಿದೆ Jio All In One Plan

JioJoin App ಅನ್ನು ಬಳಕೆದಾರರು  iPhone ನ ಆಪ್ ಸ್ಟೋರ್‌ನಿಂದ  ಮತ್ತು Android ಸಾಧನಗಳನ್ನು ಹೊಂದಿದ ಬಳಕೆದಾರರು Google Play Store ನಿಂದ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ, ಸಾಧನವು ಕನಿಷ್ಠ ಇತ್ತೀಚಿನ ಆಂಡ್ರಾಯ್ಡ್ 6.0 ಮತ್ತು ಐಒಎಸ್ 10.0 ನಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಕೆಲ ದಿನಗಳ ಹಿಂದೆ OnePlus ಮತ್ತು Xiaomi ನಂತಹ ಕಂಪನಿಗಳು ಟಿವಿಯಲ್ಲಿ ವೀಡಿಯೊ ಕರೆಗಾಗಿ ವೆಬ್‌ಕ್ಯಾಮ್‌ಗಳನ್ನು ತಂದಿದ್ದವು, ಆದರೆ ಇದೀಗ JioFiber ಬಳಕೆದಾರರಿಗೆ ಅದರ ಅಗತ್ಯ ಬೀಳುವುದಿಲ್ಲ. ಅವರು ತಮ್ಮ ಮೊಬೈಲ್ ಫೋನಿನ ಕ್ಯಾಮರಾದಿಂದ ವೀಡಿಯೊ ಕರೆಗಳನ್ನು ಮಾಡಬಹುದು.

ಇದನ್ನೂ ಓದಿ-JioPhone ಬಳಕೆದಾರರಿಗೆ ಸಿಹಿ ಸುದ್ದಿ : Buy 1 ಗೆಟ್ 1 ರೀಚಾರ್ಜ್ ಆಫರ್ Free 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News