ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !

Reliance Jio Affordable Plan : ರಿಲಾಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಮೂಲಕ ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ.   

Written by - Ranjitha R K | Last Updated : Jul 25, 2024, 12:24 PM IST
  • ರೀಚಾರ್ಜ್ ಪ್ಲಾನ್ ಗಳನ್ನು ದುಬಾರಿಗೊಳಿಸಿದ ಜಿಯೋ
  • ಕಂಪನಿಯ ಈ ನಿರ್ಧಾರ ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ
  • ರೀಚಾರ್ಜ್ ಪ್ಲಾನ್ ಹೆಚ್ಚಿಸಿರುವುದಕ್ಕೆ ಗ್ರಾಹಕರಿಂದ ಭಾರೀ ವಿರೋಧ
 ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ ! title=

Reliance Jio Affordable Plan : ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಪ್ಲಾನ್ ಗಳನ್ನು ದುಬಾರಿಗೊಳಿಸಿದೆ. ಆದರೆ, ಕಂಪನಿಯ ಈ ನಿರ್ಧಾರ ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ.ಹಾಗಾಗಿ  ರೀಚಾರ್ಜ್ ಪ್ಲಾನ್  ಹೆಚ್ಚಿಸಿರುವುದಕ್ಕೆ ಗ್ರಾಹಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.ಕೆಲವರು ಈಗಾಗಲೇ ಜಿಯೋ ನಿಂದ ಬೇರೆ ನೆಟ್ ವರ್ಕ್ ಗೆ ಪೋರ್ಟ್ ಕೂಡ ಮಾಡಿದ್ದಾರೆ. ಇದೀಗ ಗ್ರಾಹಕ ಈ ನಡೆಯನ್ನು ಗಮನದಲ್ಲಿಟ್ಟುಕೊಂಡು, ಜಿಯೋ ಕೈಗೆಟುಕುವ ಯೋಜನೆಗಳನ್ನು ಪ್ರಾರಂಭಿಸುವತ್ತ ಹೆಜ್ಜೆ ಹಾಕಿದೆ. ಕೆಲವು ಯೋಜನೆಗಳನ್ನು ಪರಿಷ್ಕರಿಸಲಾಗಿದೆ.ಅಗ್ಗದ ದರಗಳಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿರುವ ಜಿಯೋ,ಇನ್ನೂ ಸಾಕಷ್ಟು ಅಗ್ಗವಾಗಿರುವ ಯೋಜನೆಯನ್ನು ಹೊರ ತರುತ್ತಿದೆ.ಕಂಪನಿಯ ಈ ಯೋಜನೆ ಸಾಕಷ್ಟು ಜನಪ್ರಿಯವಾಗಿದೆ.

ಜಿಯೋ ಕೈಗೆಟುಕುವ ಯೋಜನೆ :
ಜಿಯೋ ನೀಡುತ್ತಿರುವ  299 ರೂ. ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಅನಿಯಮಿತ ಕರೆ ಮತ್ತು ಸಾಕಷ್ಟು ಡೇಟಾ ಸೌಲಭ್ಯ ಕೂಡಾ ಸಿಗುತ್ತದೆ.ಈ ಯೋಜನೆಯಲ್ಲಿ ಒಟ್ಟು 42GB ಡೇಟಾವನ್ನು ಪಡೆಯಬಹುದು. ಅಂದರೆ, ಪ್ರತಿದಿನ 1.5GB ಡೇಟಾ ಸಿಕ್ಕಿದ ಹಾಗೆ ಆಗುತ್ತದೆ.ಇದಲ್ಲದೇ ಪ್ರತಿದಿನ 100 SMS ಕೂಡಾ ಉಚಿತವಾಗಿ ಸಿಗುತ್ತಿದೆ.  

ಇದನ್ನೂ ಓದಿ : ಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆ

ಇದಲ್ಲದೇ Jio TV, JioCinema ಮತ್ತು Jio Cloud ಲಾಭ ಕೂಡಾ ನಿಮ್ಮದಾಗುತದೆ. ಡೇಟಾ ಮುಗಿದ ನಂತರ 64kbps ಸ್ಪೀಡ್ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ JioCinema ಪ್ರೀಮಿಯಂ ಲಭ್ಯವಿರುವುದಿಲ್ಲ. ಇದಕ್ಕಾಗಿ ನೀವು ಜಿಯೋದ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. 

ಜಿಯೋ 399 ಯೋಜನೆ :
Jio ಸಹ  ಅನ್ಲಿಮಿಟೆಡ್ 5G ಜೊತೆಗೆ 349 ರೂ.ಗಳ ಯೋಜನೆಯನ್ನು ಹೊಂದಿದೆ.ಇದರಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಡೇಟಾ ಲಭ್ಯವಿದೆ.ಇತರ ಟೆಲಿಕಾಂ ಕಂಪನಿಗಳನ್ನು ಹೊರತುಪಡಿಸಿ,ಈ ಯೋಜನೆಯಲ್ಲಿ ಹೆಚ್ಚಿನ ಪ್ರಯೋಜನಗಳು ಸಿಗಲಿವೆ. 

ಇದನ್ನೂ ಓದಿ : ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News