Jio Bharat: ₹999 ಬೆಲೆಯ ಜಿಯೋ 4G ಫೋನ್ ಮಾರಾಟ, ಇಂದೇ ಬುಕ್ ಮಾಡಿ

Jio Bharat 4G Phone: ಈ ಫೋನ್ 23 ಭಾಷೆಗಳಿಗೆ ಬೆಂಬಲ ಹೊಂದಿದ್ದು, ದೇಶದಾದ್ಯಂತ ಇದರ ಲಾಭ ಪಡೆಯಬಹುದಾಗಿದೆ. ಕೈಗೆಟುಕುವ ದರದಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರು ಈ ಫೋನ್ ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ.

Written by - Puttaraj K Alur | Last Updated : Aug 31, 2023, 01:06 PM IST
  • ರಿಲಯನ್ಸ್ ಜಿಯೋದ ಇತ್ತೀಚಿನ 4G ಫೋನ್ ‘ಜಿಯೋ ಭಾರತ್ 4G’ ಮಾರಾಟ ಪ್ರಾರಂಭ
  • ಅಮೆಜಾನ್‍ ಸೇರಿದಂತೆ ರಿಲಯನ್ಸ್ ಡಿಜಿಟಲ್ ಸ್ಟೋರ್‍ಗಳಲ್ಲಿಯೂ ಖರೀದಿಸಬಹುದು
  • 999 ರೂ.ಗಳ ಬೆಲೆಯ ಈ 4G ಸ್ಮಾರ್ಟ್‍ಫೋನ್‍ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ
Jio Bharat: ₹999 ಬೆಲೆಯ ಜಿಯೋ 4G ಫೋನ್ ಮಾರಾಟ, ಇಂದೇ ಬುಕ್ ಮಾಡಿ   title=
‘ಜಿಯೋ ಭಾರತ್ 4G’ ಮಾರಾಟ ಪ್ರಾರಂಭ

ನವದೆಹಲಿ: ರಿಲಯನ್ಸ್ ಜಿಯೋದ ಇತ್ತೀಚಿನ 4G ಫೋನ್ ‘ಜಿಯೋ ಭಾರತ್ 4G’ ಮಾರಾಟ  ಪ್ರಾರಂಭವಾಗಿದೆ. ಈ ಫೊನ್‍ಅನ್ನು ನೀವು ಅಮೆಜಾನ್‍ ಸೇರಿದಂತೆ ರಿಲಯನ್ಸ್ ಡಿಜಿಟಲ್ ಸ್ಟೋರ್‍ಗಳಲ್ಲಿಯೂ ಖರೀದಿಸಬಹುದು. 999 ರೂ.ಗಳ ಬೆಲೆಯ ಈ 4G ಸ್ಮಾರ್ಟ್‍ಫೋನ್‍ ವಿಶೇಷವಾಗಿ 2G ನೆಟ್‍ವರ್ಕ್ ಅವಲಂಬಿಸಿರುವ ಫೀಚರ್ ಫೋನ್‍ ಬಳಕೆದಾರರಿಗೆ ಅನುಕೂಲವಾಗಲಿದೆ.   

ಈ ಫೋನ್ ಮೂಲಕ ಗ್ರಾಹಕರಿಗೆ ಅಗ್ಗದ ಇಂಟರ್ನೆಟ್ ಪ್ರವೇಶ ಒದಗಿಸಲು ಕಂಪನಿಯು ಉದ್ದೇಶಿಸಿದೆ. ಈ ಫೋನ್ 23 ಭಾಷೆಗಳಿಗೆ ಬೆಂಬಲ ಹೊಂದಿದ್ದು, ದೇಶದಾದ್ಯಂತ ಇದರ ಲಾಭ ಪಡೆಯಬಹುದಾಗಿದೆ. ಕೈಗೆಟುಕುವ ದರದಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರು ಈ ಫೋನ್ ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆಯ ಪ್ರಮುಖ ಅಪ್‌ಡೇಟ್ : ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಈ ಅಂಶಗಳು ನೆನಪಿರಲೇಬೇಕು!

ಜಿಯೋ ಭಾರತ್ 4G ವೈಶಿಷ್ಟ್ಯಗಳು

ಜಿಯೋ ಭಾರತ್ 4G ಫೋನ್ 1.77 ಇಂಚಿನ TFT ಡಿಸ್ಪ್ಲೇ, LED ಫ್ಲ್ಯಾಶ್‍ನೊಂದಿಗೆ 0.3 ಎಂಪಿ ಕ್ಯಾಮೆರಾ ಮತ್ತು 1000 mAh ಬ್ಯಾಟರಿಯನ್ನು ಹೊಂದಿದೆ. ಇದು 128GB ವರೆಗೆ ಬಾಹ್ಯ ಮೈಕ್ರೊ SD ಕಾರ್ಡ್ ಸ್ಟೋರೇಜ್‍ಅನ್ನು ಬೆಂಬಲಿಸುತ್ತದೆ. ಈ ಫೋನ್ ಐಶ್‍ಬ್ಲ್ಯಾಕ್ ರೂಪಾಂತರದಲ್ಲಿ ಲಭ್ಯವಿದೆ. ಕಾರ್ಬನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ಫೋನ್ ಭಾರತ ಮತ್ತು ಕಾರ್ಬನ್ ಬ್ರ್ಯಾಂಡಿಂಗ್ ಎರಡನ್ನೂ ಹೊಂದಿದೆ. ಕಡಿಮೆ ಬೆಲೆಗೆ ಈ ಫೋನ್ ಸುಲಭವಾದ 4G ಇಂಟರ್ನೆಟ್ ಸಂಪರ್ಕ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತದೆ.

ಈ ಫೋನ್ ಜೊತೆಗೆ ಜಿಯೋ ಅಗ್ಗದ ಇಂಟರ್ನೆಟ್ ಯೋಜನೆಗಳನ್ನು ಸಹ ಪರಿಚಯಿಸಿದೆ. 123 ರೂ.ನ ರಿಚಾರ್ಜ್ ಪ್ಲಾನ್‍ನಲ್ಲಿ ಅನ್‍ಲಿಮಿಟೆಡ್ ಧ್ವನಿ ಕರೆಗಳು, 14GB ಡೇಟಾ ಮತ್ತು ಜಿಯೋ ಅಪ್ಲಿಕೇಶನ್‍ಗಳ ಉಚಿತ ಚಂದಾದಾರಿಕೆ ಸಿಗುತ್ತದೆ. 1,234 ರೂ.ಗಳ ವಾರ್ಷಿಕ ಯೋಜನೆ ತೆಗೆದುಕೊಂಡರೆ ನಿಮಗೆ ಅನಿಯಮಿತ ಕರೆಗಳು ಮತ್ತು 168GB ಡೇಟಾ ಸೇರಿದಂತೆ ಹಲವಾರು ಸೌಲಭ್ಯಗಳು ದೊರೆಯಲಿವೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗಾಗಿ IRCTC ವಿಶೇಷ ಪ್ಯಾಕೇಜ್ ! ತಿರುಪತಿ ದರ್ಶನದೊಂದಿಗೆ ಅನೇಕ ದೇವಸ್ಥಾನಗಳಿಗೂ ಭೇಟಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News