'ಪ್ರೈವಸಿ ಪಾಲಿಸಿ ಇಷ್ಟವಿಲ್ಲದಿದ್ದರೆ WhatsApp‌ ಬಳಸಬೇಡಿ'- ದಿಲ್ಲಿ ಹೈಕೋರ್ಟ್‌ ಸಲಹೆ

‘ಇದೊಂದು ಖಾಸಗಿ ಮೊಬೈಲ್‌ ಆ್ಯಪ್‌ ಆಗಿದೆ. ಇದರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೆ ವಾಟ್ಸಾಪ್ ‌ಬಳಸಬೇಡಿ. ಬೇರೆ ಇನ್ನಾವುದಾದರೂ ಆ್ಯಪ್‌ ಬಳಸಿ, ಎಂದ ದಿಲ್ಲಿ ಹೈಕೋರ್ಟ್‌

Last Updated : Jan 18, 2021, 11:11 PM IST
  • ವಾಟ್ಸ್ ಆ್ಯಪ್ ಸಂಸ್ಥೆಯ ನೀತಿಯನ್ನು ಒಪ್ಪುವುದು ಅಥವಾ ಬಿಡುವುದು ವೈಯಕ್ತಿಕ ಸಂಗತಿಯಾಗಿದೆ ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.
  • ವಾಟ್ಸ್ ಆ್ಯಪ್ ‌ನೀತಿಯನ್ನು ಪ್ರಶ್ನಿಸಿದ ಅರ್ಜಿಯೊಂದನ್ನು ವಿಚಾರಣೆಗೆತ್ತಿಕೊಂಡ ದಿಲ್ಲಿ ಹೈಕೋರ್ಟ್‌
  • ‘ಇದೊಂದು ಖಾಸಗಿ ಮೊಬೈಲ್‌ ಆ್ಯಪ್‌ ಆಗಿದೆ. ಇದರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೆ ವಾಟ್ಸಾಪ್ ‌ಬಳಸಬೇಡಿ. ಬೇರೆ ಇನ್ನಾವುದಾದರೂ ಆ್ಯಪ್‌ ಬಳಸಿ, ಎಂದ ದಿಲ್ಲಿ ಹೈಕೋರ್ಟ್‌
'ಪ್ರೈವಸಿ ಪಾಲಿಸಿ ಇಷ್ಟವಿಲ್ಲದಿದ್ದರೆ WhatsApp‌ ಬಳಸಬೇಡಿ'- ದಿಲ್ಲಿ ಹೈಕೋರ್ಟ್‌ ಸಲಹೆ title=

ಹೊಸದಿಲ್ಲಿ: ವಾಟ್ಸ್ ಆ್ಯಪ್ ‌ನ‌ ಪ್ರೈವಸಿಗೆ ಸಂಬಂಧಿಸಿದ ನೂತನ ನೀತಿಯನ್ನು ಒಪ್ಪದವರು, ಅದರಿಂದ ದೂರವಾದರೆ ಆಯಿತು. ಈ ಸಂಸ್ಥೆಯ ನೀತಿಯನ್ನು ಒಪ್ಪುವುದು ಅಥವಾ ಬಿಡುವುದು ವೈಯಕ್ತಿಕ ಸಂಗತಿಯಾಗಿದೆ ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.

ವಾಟ್ಸ್ ಆ್ಯಪ್ ‌ನೀತಿಯನ್ನು ಪ್ರಶ್ನಿಸಿದ ಅರ್ಜಿಯೊಂದನ್ನು ವಿಚಾರಣೆಗೆತ್ತಿಕೊಂಡ ಕೋರ್ಟ್‌, ‘ಇದೊಂದು ಖಾಸಗಿ ಮೊಬೈಲ್‌ ಆ್ಯಪ್(Mobile App)‌ ಆಗಿದೆ. ಇದರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದಾದರೆ ವಾಟ್ಸಾಪ್ ‌ಬಳಸಬೇಡಿ. ಬೇರೆ ಇನ್ನಾವುದಾದರೂ ಆ್ಯಪ್‌ ಬಳಸಿ,’ ಎಂದು ಅರ್ಜಿದಾರರಿಗೆ ಸಲಹೆ ನೀಡಿತು. 

Solar Storm ಎಚ್ಚರ..! ಅಪ್ಪಳಿಸಲಿದೆ ಪ್ರಚಂಡ ವೇಗದ ಸೂರ್ಯ ಸುಂಟರಗಾಳಿ, ಭೂಮಿ ಕಥೆ ಏನು.?

'ಈಗಿನ ಬಹುತೇಕ ಮೊಬೈಲ್‌ ಆ್ಯಪ್‌ಗಳ ನಿಯಮಗಳು ಮತ್ತು ಷರತ್ತುಗಳನ್ನು ಓದಿ. ಯಾವುದನ್ನೆಲ್ಲ ಬಳಸಲು ನಾವು ಒಪ್ಪಿಗೆ ನೀಡಿದ್ದೇವೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಗೂಗಲ್‌ ನಕ್ಷೆಯ ಆ್ಯಪ್‌ ಬಳಕೆದಾರನ ಎಲ್ಲ ಡೇಟಾವನ್ನೂ ಸಂಗ್ರಹಿಸುತ್ತದೆ,' ಎಂದು ಕೋರ್ಟ್‌ ಹೇಳಿತು. ಫೇಸ್‌ಬುಕ್‌ ಮತ್ತು ವಾಟ್ಸ್ ಆ್ಯಪ್‌ ಪರವಾಗಿ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಮುಕುಲ್‌ ರೋಹಟಗಿ ವಾದಿಸಿದರು. ವಿಚಾರಣೆಯನ್ನು ಜ.25ಕ್ಕೆ ಮುಂದೂಡಿತು.

Digvijaya Singh: ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ..!

ಫೆಬ್ರುವರಿಯಿಂದ ಅನುಷ್ಠಾನಕ್ಕೆ ಬರಬೇಕಿದ್ದ ತನ್ನ ಹೊಸ ನೀತಿಯನ್ನು ವಿರೋಧಗಳ ಕಾರಣದಿಂದಾಗಿ ವಾಟ್ಸ್ ಆ್ಯಪ್‌‌ ಮೇ ತಿಂಗಳಿಗೆ ಮುಂದೂಡಿದೆ. ವಾಟ್ಸ್ ಆ್ಯಪ್ ‌‌ನ ಹೊಸ ನೀತಿಯು ಬಳಕೆದಾರರಿಗೆ ಮಾತ್ರವಲ್ಲ, ಕಂಪನಿಗಳಿಗೂ ತೊಡಕಾಗಿದೆ.

CBSE Board Exam 2021: ಪರಿಷ್ಕೃತ ಪಠ್ಯಕ್ರಮದ ಆಡಿಯೇ ಪ್ರಶ್ನೆಗಳನ್ನು ಕೇಳಲಾಗುವುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News