11 ರೂಪಾಯಿಗೆ iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು!

ಫ್ಲಿಪ್‌ಕಾರ್ಟ್ ತನ್ನ 'ಫಾಸ್ಟೆಸ್ಟ್ ಫಿಂಗರ್ಸ್ ಫಸ್ಟ್' ಆಫರ್‌ನ ಅಡಿಯಲ್ಲಿ ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್ ಅನ್ನು ಬಿಡುಗಡೆ ಮಾಡಿದೆ.  

Written by - Ranjitha R K | Last Updated : Sep 25, 2024, 04:01 PM IST
  • ಫ್ಲಿಪ್‌ಕಾರ್ಟ್ ನ ಪ್ರಮೋಶನಲ್ ಡೀಲ್
  • ಐಫೋನ್ 13 ಕೇವಲ 11 ರೂಗಳಿಗೆ ಮಾರಾಟ
  • ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್
11 ರೂಪಾಯಿಗೆ  iPhone 13 ! Flipkart ಆಫರ್ ಬಗ್ಗೆ ಕಂಪನಿ ಹೇಳಿದ್ದು ಇಷ್ಟು! title=

 ಫ್ಲಿಪ್‌ಕಾರ್ಟ್ ನ ಪ್ರಮೋಶನಲ್ ಡೀಲ್ ಅನೇಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.   ಇದರಲ್ಲಿ ಐಫೋನ್ 13 ಅನ್ನು ಕೇವಲ 11 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಮುಂಬರುವ ಬಿಗ್ ಬಿಲಿಯನ್ ಡೇಸ್ ಮಾರಾಟದ ಭಾಗವಾಗಿ, ಫ್ಲಿಪ್‌ಕಾರ್ಟ್ ತನ್ನ 'ಫಾಸ್ಟೆಸ್ಟ್ ಫಿಂಗರ್ಸ್ ಫಸ್ಟ್' ಆಫರ್‌ನ ಅಡಿಯಲ್ಲಿ ರಾತ್ರಿ 11 ಗಂಟೆಗೆ 11 ರೂ.ಗೆ ಐಫೋನ್ 13 ಆಫರ್ ಅನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಈ ದುಬಾರಿ ಫೋನ್ ಖರೀದಿ ಮಾಡುವುದು ಗ್ರಾಹಕರ ನಿರೀಕ್ಷೆಯಾಗಿತ್ತು. ಆದರೆ ಕಂಪನಿ ವ್ಯವಹಾರದಿಂದ ಇದೀಗ ಗ್ರಾಹಕರು ಬೇಸತ್ತಿದ್ದಾರೆ. ಯಾಕೆಂದರೆ ಈ ಸೇಲ್ ನಲ್ಲಿ ಫೋನ್ ಬುಕ್ ಮಾದುತ್ತೊಇದ್ದ ಹಗೆ ಔಟ್ ಆಫ್ ಸ್ಟಾಕ್ ಎಂದು ತೋರಿಸುತ್ತಿದೆ ಎನ್ನುವುದು ಗ್ರಾಹಕರ ದೂರು. 

ಇನ್ನು ಕೆಲವರ ಆರೋಪ ಎಂದರೆ ಪ್ರಾಡಕ್ಟ್ ಬುಕ್ ಕೂಡಾ ಆಗಿದೆ. ಆದರೆ ಬುಕ್ ಆದ ಕೆಲವೇ ಕ್ಷಣಗಳಲ್ಲಿ ಫ್ಲಿಪ್ ಕಾರ್ಟ್ ಆರ್ಡರ್ ಕ್ಯಾನ್ಸಲ್ ಆಗಿದೆ ಎಂದು ದೂರಿದ್ದಾರೆ. ಅಲ್ಲದೆ ಆರ್ಡರ್ ಮಾಡುವ ವೇಳೆ ಹಲವು ಬಾರಿ ತಾಂತ್ರಿಕ ದೋಷಗಳನ್ನು ಎದುರಿಸಬೇಕಾಯಿತು ಎನ್ನುವ ದೂರು ಕೂಡಾ ಕೇಳಿ ಬಂದಿದೆ. ಈ ಬಗ್ಗೆ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕೆಲವರು ಇದನ್ನು ಮಾರ್ಕೆಟಿಂಗ್ ಗಿಮಿಕ್ ಎಂದು ಕರೆದರೆ ಇನ್ನು ಕೆಲವರು ಅತಿ ದೊಡ್ಡ ಹಗರಣ ಎಂದಿದ್ದಾರೆ. 

ಇದನ್ನೂ ಓದಿ : ನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನ

ಫ್ಲಿಪ್‌ಕಾರ್ಟ್‌ಸ್ಕ್ಯಾಮ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನೇಕ ಜನರು ಹಲವಾರು ಪೋಸ್ಟ್‌ಗಳನ್ನು ಮಾಡಿದ್ದಾರೆ. ಕೆಲವು ಪೋಸ್ಟ್‌ಗಳನ್ನು ನೋಡೋಣ...

 

ಈ ಬಗ್ಗೆ ಫ್ಲಿಪ್ ಕಾರ್ಟ್ ಹೇಳಿದ್ದೇನು ? : 
ಗ್ರಾಹಕರ ಚಿಂತೆ ನಮಗೆ ಅರ್ಥವಾಗುತ್ತಿದೆ. ಇಲ್ಲಿಯವರೆಗೆ ಮೂವರು ಗ್ರಾಹಕರು ಈ ಡೀಲ್ ನ ಲಾಭ ಪಡೆದಿದ್ದಾರೆ.  ಹಾಗಂತ ಚಿಂತಿಒಸುವ ಅಗತ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಅಡಿಯಲ್ಲಿ ರಾತ್ರಿ 9 ಗಂಟೆ ಮತ್ತು 11 ಗಂಟೆಗೆ ಉತ್ತಮ ಡೀಲ್‌ಗಳನ್ನು ಪಡೆಯಬಹುದು ಎಂದು ಹೇಳಿದೆ. 

 

Trending News