Two WhatApp In One Phone: ಒಂದೇ ಫೋನ್ ನಲ್ಲಿ ಎರಡು WhatsApp ಖಾತೆ ನಿರ್ವಹಿಸಲು ನಿಮ್ಮ ಫೋನ್ ನಲ್ಲೆ ಅಡಗಿದೆ ಈ Setting

Two WhatApp In One Phone - ಇನ್ಸ್ಟಂಟ್ ಮೆಸೇಜಿಂಗ್ ಆಪ್  ವಾಟ್ಸಾಪ್ (WhatsApp) ಅನ್ನು ಇತ್ತೀಚಿಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬಳಸಲಾಗುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ, ಅನೇಕ ಜನರು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಚಲಾಯಿಸಲು ಬಯಸುತ್ತಿದ್ದಾರೆ.

Written by - Nitin Tabib | Last Updated : Feb 28, 2021, 12:45 PM IST

    ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ಅನ್ನು ಇತ್ತೀಚಿಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬಳಸಲಾಗುತ್ತಿದೆ.

    ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಚಲಾಯಿಸಲು ಬಯಸುತ್ತಿದ್ದಾರೆ.

    ಅಲ್ಲದೆ, ಅನೇಕ ಡ್ಯುಯಲ್ ಸಿಮ್ ಬಳಕೆದಾರರು ಕೂಡ ಇದನ್ನೇ ಬಯಸುತ್ತಿದ್ದಾರೆ

Two WhatApp In One Phone: ಒಂದೇ ಫೋನ್ ನಲ್ಲಿ ಎರಡು WhatsApp ಖಾತೆ ನಿರ್ವಹಿಸಲು ನಿಮ್ಮ ಫೋನ್ ನಲ್ಲೆ ಅಡಗಿದೆ ಈ Setting title=
Two WhatApp In One Phone (Representational Image)

ನವದೆಹಲಿ: Two WhatApp In One Phone - ಇನ್ಸ್ಟಂಟ್ ಮೆಸೇಜಿಂಗ್ ಆಪ್  ವಾಟ್ಸಾಪ್ (WhatsApp) ಅನ್ನು ಇತ್ತೀಚಿಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬಳಸಲಾಗುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ, ಅನೇಕ ಜನರು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಚಲಾಯಿಸಲು ಬಯಸುತ್ತಿದ್ದಾರೆ. ಅಲ್ಲದೆ, ಅನೇಕ ಡ್ಯುಯಲ್ ಸಿಮ್ ಬಳಕೆದಾರರು ಕೂಡ ಇದನ್ನೇ ಬಯಸುತ್ತಿದ್ದಾರೆ. ಒಂದೇ ಡಿವೈಸ್ ನಲ್ಲಿ ಎರಡು ಖಾತೆಗಳನ್ನು ಚಲಾಯಿಸಲು ಅಂತಹ ಯಾವುದೇ ವೈಶಿಷ್ಟ್ಯವು ವಾಟ್ಸ್ ಆಪ್ ನಲ್ಲಿಲ್ಲ. ಆದರೂ ಕೂಡ ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ ಇಂತಹ ಒಂದು ಆಯ್ಕೆಯನ್ನು ಒದಗಿಸಲಾಗುತ್ತಿದೆ. ಈ ಆಯ್ಕೆಯನ್ನು ಬಳಸಿ ನೀವು ಒಂದೇ ಫೋನ್ ನಲ್ಲಿ ಎರಡು ವಾಟ್ಸ್ ಆಪ್ ಗಳನ್ನು ಬಳಸಬಹುದು.

ಇತ್ತೀಚಿನ ದಿನಗಳಲ್ಲಿ ಬಹುತೇಕ  ಸ್ಮಾರ್ಟ್‌ಫೋನ್‌ಗಳು ಸಮಾನಾಂತರ ಅಪ್ಲಿಕೇಶನ್ (Parellel App)ವೈಶಿಷ್ಟ್ಯವನ್ನು ಹೊಂದಿವೆ. ಈ  ವೈಶಿಷ್ಟ್ಯ ವಿವಿಧ ಕಂಪನಿಗಳ ಹ್ಯಾಂಡ್ ಸೆಟ್ ನಲ್ಲಿ ವಿವಿಧ ಹೆಸರಿನಲ್ಲಿ ನೀಡಲಾಗುತ್ತಿದೆ. ಯಾವುದೇ ಅಪ್ಲಿಕೇಶನ್ ಅನ್ನು ಕ್ಲೋನ್ ಮಾಡುವುದು ಈ ವೈಶಿಷ್ಟ್ಯದ ಕೆಲಸ. ಇದು ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್‌ನ ನಕಲನ್ನು ರಚಿಸುತ್ತದೆ, ಇದರಲ್ಲಿ ನೀವು ಇನ್ನೊಂದು ಖಾತೆಯನ್ನು ಚಲಾಯಿಸಬಹುದು. ಈ ವೈಶಿಷ್ಟ್ಯವನ್ನು ಯಾವ ಯಾವ ಫೋನ್ ನಲ್ಲಿ ನೀಡಲಾಗಿದೆ ತಿಳಿಯೋಣ ಬನ್ನಿ.

ಸ್ಮಾರ್ಟ್ ಫೋನ್ ಹಾಗೂ ಅದರ Parellel App ವೈಶಿಷ್ಟ್ಯ
- Samsung ಫೋನ್: Dual Messenger
- Xiaomi ಫೋನ್ : Dual Apps
- Realme ಫೋನ್: Clone Apps
- OnePlus ಫೋನ್: Parallel Apps
- Oppo ಫೋನ್: Clone Apps
- Vivo ಫೋನ್: App Clone
- Asus ಫೋನ್: Twin Apps

ಮೇಲೆ ಪಟ್ಟಿ ಮಾಡಲಾಗಿರುವ ಯಾವುದೇ ಕಂಪನಿಯ ಫೋನ್ ನಿಮ್ಮ ಬಳಿ ಇದ್ದರೆ, ನೀವು ಒಂದೇ ಫೋನ್ ನಲ್ಲಿ ಸುಲಭವಾಗಿ ಎರಡು ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸಬಹುದು. ಇದನ್ನು ಹೇಗೆ ಸಕ್ರೀಯಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ.

ಒಂದೇ ಫೋನ್ ನಲ್ಲಿ ಈ ರೀತಿ ಎರಡು ವಾಟ್ಸ್ ಆಪ್ ಚಲಾಯಿಸಿ

ಹಂತ 1: ಇದಕ್ಕಾಗಿ ಮೊದಲು ನಿಮ್ಮ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ.
ಹಂತ 2: ನಮ್ಮ ಬಳಿ OnePllus ಇರುವ ಕಾರಣ ನಾವು ಸರ್ಚ್ ಬಾರ್ ನಲ್ಲಿ Parellel Apps ಟೈಪ್ ಮಾಡಿದ್ದೇವೆ.
ಹಂತ 3: ಒಂದೊಮ್ಮೆ ನಿಮಗೆ ಈ ಸೆಟ್ಟಿಂಗ್ಸ್ ಕಾಣಿಸಿಕೊಂಡರೆ ಅದರ ಮೇಲೆ ಕ್ಲಿಕ್ಕಿಸಿ. ಬಳಿಕ ನಿಮಗೆ ನಿಮ್ಮ ಡಿವೈಸ್ ನಲ್ಲಿ ಕ್ಲೋನ್ ಮಾಡಬಹುದಾದ ಆಪ್ ಗಳ ಪಟ್ಟಿಯನ್ನು ಬಿತ್ತರಿಸುತ್ತದೆ.
ಹಂತ 4: ಈ ಪಟ್ಟಿಯಲ್ಲಿರುವ WhatsApp ಐಕಾನ್ ಮೇಲೆ ಕ್ಲಿಕ್ಕಿಸಿ. ಇದರಿಂದ ನಿಮ್ಮ ವಾಟ್ಸ್ ಆಪ್ ಖಾತೆಯ ಡುಪ್ಲಿಕೇಟ್ ಕಾಪಿ ಸಿದ್ಧಗೊಳ್ಳಲಿದೆ. ಬಳಿಕ ನೀವು ನಿಮ್ಮ ಡುಪ್ಲಿಕೇಟ್ ವಾಟ್ಸ್ ಆಪ್ ಖಾತೆ ತೆರೆದು ಬೇರೆ ನಂಬರ್ ಮೂಲಕ ಲಾಗಿನ್ ಆಗಬಹುದು.

Trending News