ಫೋನಿನಲ್ಲಿ ನಂಬರ್ ಸೇವ್ ಮಾಡದೆ WhatsApp ಮೆಸೇಜ್ ಮಾಡುವ ಸುಲಭ ಉಪಾಯ ಇಲ್ಲಿದೆ

ವಾಟ್ಸಾಪ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. 

Written by - Ranjitha R K | Last Updated : Jun 23, 2021, 04:59 PM IST
  • ವಾಟ್ಸಾಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇದೆ
  • ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಬಹುದು
  • ಇದಕ್ಕಾಗಿ ಈ ಟ್ರಿಕ್ ಅನುಸರಿಸಬೇಕಾಗುತ್ತದೆ
ಫೋನಿನಲ್ಲಿ ನಂಬರ್ ಸೇವ್ ಮಾಡದೆ WhatsApp ಮೆಸೇಜ್ ಮಾಡುವ ಸುಲಭ ಉಪಾಯ ಇಲ್ಲಿದೆ title=
ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಬಹುದು (file photo)

ನವದೆಹಲಿ : ವಾಟ್ಸಾಪ್ (Whatsapp) ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ನೀವು ವಾಟ್ಸಾಪ್ ನಲ್ಲಿ ಯಾರಿಗಾದರೂ ಸಂದೇಶವನ್ನು ಕಳುಹಿಸಲು ಬಯಸಿದರೆ, ನಂಬರ್ ಅನ್ನು ಸೇವ್ ಮಾಡುವುದು ಅವಶ್ಯಕ. ಈ ಟ್ರಿಕ್ ಮೂಲಕ ನಂಬರ್ ಸೇವ್ ಮಾಡದೆ, ವಾಟ್ಸಾಪ್ ನಲ್ಲಿ ಸುಲಭವಾಗಿ ಮೆಸೇಜ್ ಮಾಡುವುದು ಸಾಧ್ಯವಾಗುತ್ತದೆ.

ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಲು ಹೀಗೆ ಮಾಡಿ : 

1. ಇದಕ್ಕಾಗಿ, ಮೊದಲು ನೀವು ವೆಬ್ ಬ್ರೌಸರ್ ಅನ್ನು ಮೊಬೈಲ್ (Mobile) ಅಥವಾ desktop ನಲ್ಲಿ ತೆರೆಯಬೇಕು.
2. ನಂತರ https://api.whatsapp.com/send?phone=XXXXXXXXXXX ಅನ್ನು ಹಾಕಬೇಕು. ಈ ಲಿಂಕ್‌ನಲ್ಲಿ ಎಕ್ಸ್ ಇರುವ ಜಾಗದಲ್ಲಿ ಕಂಟ್ರಿ ಕೋಡ್ ಹಾಕಿ ಫೋನ್ ನಂಬರ್ ನಮೂದಿಸಬೇಕಾಗುತ್ತದೆ.
3. ಇಲ್ಲಿ ಯಾವ ನಂಬರ್ ಸೇವ್ ಮಾಡಲು ಇಷ್ಟಪಡುವುದಿಲ್ಲವೋ ಆ ನಂಬರ್ ಅನ್ನುಹಾಕಬೇಕಾಗುತ್ತದೆ.  
4. ನೀವು ಸಂಖ್ಯೆಯನ್ನು ನಮೂದಿಸಿದಾಗ, ಕೆಳಗೆ ಒಂದು ಮೆಸೇಜ್ ಕಾಣಿಸುತ್ತದೆ. Message +911234567890 on WhatsApp  ಎಂದು ಇಲ್ಲಿ ಬರೆದಿರುತ್ತದೆ. ಅದನ್ನು ಶೇರ್ ಮಾಡಲು ಟ್ಯಾಪ್ ಮಾಡಿ. ಈಗ ಒಂದು ಪಾಪ್-ಅಪ್ ಸಹ ಕಾಣಿಸುತ್ತದೆ. ಇದರಲ್ಲಿ ನೀವು Open WhatsApp Desktop ಅನ್ನು ಟ್ಯಾಪ್ ಮಾಡಬೇಕು.
5. Looks like you don't have WhatsApp installed! DOWNLOAD or use WhatsApp Web  ಎನ್ನುವ ಮೆಸೇಜ್ ಕಾಣಿಸುತ್ತದೆ. ಈ ಸಂದರ್ಭದಲ್ಲಿ ನೀವು ವಾಟ್ಸಾಪ್ ಡೌನ್‌ಲೋಡ್ (Whatsapp download) ಮಾಡಿಕೊಳ್ಳಬೇಕಾಗುತ್ತದೆ. ಅಥವಾ ವಾಟ್ಸಾಪ್ ವೆಬ್‌ನಿಂದ ಆಕ್ಸೆಸ್ ಮಾಡಿಕೊಳ್ಳಬೇಕಾಗುತ್ತದೆ. 
ಇಷ್ಟಾದ ನಂತರ ನಂಬರ್ ಸೇವ್ ಮಾಡದೆ, ಸಂದೇಶ ಕಳುಹಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Flipkart Mobile Bonanza Sale: ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ iPhone 11 ಮತ್ತು iPhone 12

5 ಡಿವೈಸ್ ಗಳಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಲಿದೆ ವಾಟ್ಸಾಪ್ : 
ವಾಟ್ಸಾಪ್ (Whatsapp) ತನ್ನ ಗ್ರಾಹಕರಿಗೆ ಶೀಘ್ರದಲ್ಲೇ ಉಡುಗೊರೆಗಳನ್ನು ನೀಡಲಿದೆ. ಕಂಪನಿಯು ಪ್ರಸ್ತುತ ಮಲ್ಟಿ-ಡಿವೈಸ್ ವೈಶಿಷ್ಟ್ಯದಲ್ಲಿ (WhatsApp Multi-Device)  ಕಾರ್ಯನಿರ್ವಹಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ವೈಶಿಷ್ಟ್ಯವನ್ನು ಪ್ರಾರಂಭಿಸಿದ ತಕ್ಷಣ, ನೀವು ಏಕಕಾಲದಲ್ಲಿ 5 ಸಾಧನಗಳಲ್ಲಿ ಒಂದೇ ಸಂಖ್ಯೆಯಿಂದ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : PM Kisan Scheme Mobile App: ಪಿಎಂ ಕಿಸಾನ್ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News