ಮಾರುತಿಯ ಈ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ ! 6 ಲಕ್ಷ ಬೆಲೆಯ ಈ ಕಾರಿನಲ್ಲಿದೆ ಸೂಪರ್ ವೈಶಿಷ್ಟ್ಯ

Top Selling Maruti Car-Swift:ಮಾರುತಿ ಸ್ವಿಫ್ಟ್‌ನ  ಅಪ್ಡೇಟೆಡ್ ವರ್ಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಹೊಸ 2024 ಮಾರುತಿ ಸ್ವಿಫ್ಟ್ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಹೊಂದಿರಬಹುದು. 

Written by - Ranjitha R K | Last Updated : Apr 10, 2023, 10:48 AM IST
  • ಮಾರುತಿ ಸುಜುಕಿ ಆಲ್ಟೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರಾಗಿತ್ತು.
  • ಕಂಪನಿ ಮಾರ್ಚ್ 2023 ರ ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
  • ಮಾರುತಿ ಸುಜುಕಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಕಂಪನಿ
ಮಾರುತಿಯ ಈ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ ! 6 ಲಕ್ಷ ಬೆಲೆಯ ಈ ಕಾರಿನಲ್ಲಿದೆ ಸೂಪರ್ ವೈಶಿಷ್ಟ್ಯ  title=

Top Selling Maruti Car-Swift: ಮಾರುತಿ ಸುಜುಕಿ ಆಲ್ಟೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರಾಗಿತ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ಕಾರು ತಯಾರಕರ ಕಂಪನಿ ಮಾರ್ಚ್ 2023 ರ ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ 2023 ರಲ್ಲಿ ಮಾರುತಿ ಸುಜುಕಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಕಂಪನಿಯಾಗಿ ಹೊರಹೊಮ್ಮಿದೆ. ಹೆಚ್ಚು ಮಾರಾಟವಾಗುವ ಕಾರು ಮಾರುತಿ ಸುಜುಕಿಯದ್ದಾಗಿದೆ. ಆದರೆ ಈ ಬಾರಿ ಹೆಚ್ಚು ಮಾರಾಟವಾದ ಕಾರು ಆಲ್ಟೊ ಅಲ್ಲ ಮಾರುತಿ ಸ್ವಿಫ್ಟ್. ಮಾರ್ಚ್ 2023 ರಲ್ಲಿ ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಅಗ್ರ ಸ್ಥಾನದಲ್ಲಿದ್ದು, ಆಲ್ಟೊ ಟಾಪ್-10 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಮಾರ್ಚ್ 2023 ರಲ್ಲಿ, ಮಾರುತಿ ಸುಜುಕಿ ಸ್ವಿಫ್ಟ್ 17,559 ಯುನಿಟ್‌ಗಳನ್ನು ಮಾರಾಟ ಮಾಡಿದೆ. 

ಮಾರುತಿ ಸ್ವಿಫ್ಟ್ ಬೆಲೆ ಮತ್ತು ಎಂಜಿನ್ : 
ಮಾರುತಿ ಸ್ವಿಫ್ಟ್ ನ ಬೆಲೆ 5.99 ಲಕ್ಷದಿಂದ 9.01 ಲಕ್ಷದ ನಡುವೆ ಇರುತ್ತದೆ.  ಈ ಕಾರನ್ನು ಪೆಟ್ರೋಲ್ ಎಂಜಿನ್ ಮತ್ತು ಎರಡು ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಖರೀದಿಸಬಹುದು. ಇದರ 1.2 ಲೀಟರ್ K12 ಸರಣಿಯ ಡ್ಯುಯಲ್ ಜೆಟ್ ಡ್ಯುಯಲ್ VVT ಎಂಜಿನ್‌ಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಆಯ್ಕೆಯನ್ನು ನೀಡಲಾಗಿದೆ. ಇದು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 23.20 kmpl ಮತ್ತು AMT ಯೊಂದಿಗೆ 23.76kmpl ಮೈಲೇಜ್ ನೀಡುತ್ತದೆ. ಇದರ ಎಂಜಿನ್ 89bhp ಮತ್ತು 113Nm ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಸಿಎನ್‌ಜಿ ಕಿಟ್ ಕೂಡಾ ನೀಡಲಾಗಿದೆ.

ಇದನ್ನೂ ಓದಿ : Yamaha AEROX 155 Launch: ಭಾರತೀಯ ಮಾರುಕಟ್ಟೆಗೆ 2023 AEROX 155 ಬಿಡುಗಡೆಗೊಳಿಸಿದ ಯಮಹಾ, ಬೆಲೆ ಎಷ್ಟು ಗೊತ್ತಾ?

ಮಾರುತಿ ಸ್ವಿಫ್ಟ್ ವೈಶಿಷ್ಟ್ಯಗಳು  :
- LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು
- LED DRL ಗಳು
- 15-ಇಂಚಿನ  ಅಲಾಯ್ ವ್ಹೀಲ್ಸ್ 
- 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್
-  ಹೈಟ್ ಅಡ್ಜ್ ಸ್ಟೇಬಲ್ ಡ್ರೈವರ್ ಸೀಟ್
-ಕ್ರೂಸ್ ಕಂಟ್ರೋಲ್
- ಆಟೋ AC
- ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು
--ಹಿಲ್-ಹೋಲ್ಡ್ ಕಂಟ್ರೋಲ್
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ 
-ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು

ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರಲಿದೆ ಸ್ವಿಫ್ಟ್! :
ಮಾರುತಿ ಸ್ವಿಫ್ಟ್‌ನ  ಅಪ್ಡೇಟೆಡ್ ವರ್ಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಹೊಸ 2024 ಮಾರುತಿ ಸ್ವಿಫ್ಟ್ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಹೊಂದಿರಬಹುದು. ಇದು ಹೊಸ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ನ  ಸಪೋರ್ಟ್ ನೊಂದಿಗೆ ಬರಲಿದೆ. ಇದು ಮೈಲೇಜ್ ಹೆಚ್ಚಿಸಲು ನೆರವಾಗಲಿದೆ. 

ಇದನ್ನೂ ಓದಿ : ಈ ಕಾರಣದಿಂದಲೇ ಇವು ದೇಶದ ಅತ್ಯಂತ ಸುರಕ್ಷಿತ ಕಾರುಗಳು ! ಅತ್ಯಂತ ಅಗ್ಗದ ಕಾರು ಕೂಡಾ ಈ ಲಿಸ್ಟ್ ನಲ್ಲಿದೆ

ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರುವ ಮಾರುತಿ ಸ್ವಿಫ್ಟ್ ಸುಮಾರು 35 ರಿಂದ 40 kmpl ಮೈಲೇಜ್ ನೀಡುತ್ತದೆ. ಹೊಸ ಮಾರುತಿ ಸ್ವಿಫ್ಟ್ ಮತ್ತು ಡಿಜೈರ್‌ಗಳ ವಿನ್ಯಾಸವನ್ನು  ಬದಲಾಯಿಸಲಾಗುವುದು ಮತ್ತು ವೈಶಿಷ್ಟ್ಯಗಳನ್ನು ಅಪ್‌ಗ್ರೇಡ್ ಮಾಡಲಾಗುವುದು. ಅಲ್ಲದೆ, ಅದೇ ಪವರ್‌ಟ್ರೇನ್ ಅನ್ನು ಡಿಜೈರ್‌ನಲ್ಲಿಯೂ ಕಾಣಬಹುದು. ಡಿಜೈರ್ ನಲ್ಲಿ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News