Har Ghar Tiranga: ನೀವೂ ನಿಮ್ಮ ಮನೆ ಮೇಲೆ ತ್ರಿವರ್ಣ ಬಾವುಟ ಹಾರಿಸಿದ್ದೀರಾ? ಈ ರೀತಿ ನಿಮ್ಮ ಸರ್ಟಿಫಿಕೆಟ್ ಡೌನ್ಲೋಡ್ ಮಾಡಿ

Har Ghar Tiranga: ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ನಿಮ್ಮ ಪ್ರಮಾಣಪತ್ರವನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಅದಕ್ಕಾಗಿ ಈ ಕೆಳಗೆ ನೀಡಲಾಗಿರುವ ಹಂತಗಳನ್ನು ಅನುಸರಿಸಿ,

Written by - Nitin Tabib | Last Updated : Aug 15, 2022, 01:31 PM IST
  • ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ.
  • ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಗತಿಸಿದ ಕಾರಣ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯೂ ಕೂಡ ತುಂಬಾ ವಿಶೇಷವಾಗಿದೆ.
  • ಇಂತಹ ಪರಿಸ್ಥಿತಿಯಲ್ಲಿ ಇಂದಿನ ದಿನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತುಂಬಾ ವಿಶೇಷ ದಿನವಾಗಿರಲಿದೆ.
Har Ghar Tiranga: ನೀವೂ ನಿಮ್ಮ ಮನೆ ಮೇಲೆ ತ್ರಿವರ್ಣ ಬಾವುಟ ಹಾರಿಸಿದ್ದೀರಾ? ಈ ರೀತಿ ನಿಮ್ಮ ಸರ್ಟಿಫಿಕೆಟ್ ಡೌನ್ಲೋಡ್ ಮಾಡಿ title=
Har Ghar Tiranga Campaign Certificate

Har Ghar Tiranga: ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಗತಿಸಿದ ಕಾರಣ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯೂ ಕೂಡ ತುಂಬಾ ವಿಶೇಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ದಿನ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತುಂಬಾ ವಿಶೇಷ ದಿನವಾಗಿರಲಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಮತ್ತಷ್ಟು ವಿಶೇಷವಾಗಿಸಲು ಭಾರತ ಸರ್ಕಾರವು ಕೂಡ 'ಹರ್ ಘರ್ ತಿರಂಗಾ' ಅಭಿಯಾನವನ್ನು ಆರಂಭಿಸಿದೆ, ಇದರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ, ಅಂಗಡಿಗಳ ಮೇಲೆ ಧ್ವಜಾರೋಹಣ ಮಾಡುವಂತೆ ಮನವಿ ಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತ್ರಿವರ್ಣ ಧ್ವಜದ ಡಿಪಿ ಹಾಕಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ. ಇದಲ್ಲದೆ, ಆಗಸ್ಟ್ 13-15 ರ ನಡುವೆ ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ, ಈ ಅಭಿಯಾನದಲ್ಲಿ ಭಾಗವಹಿಸಿದವರು ಪ್ರತಿಯೊಬ್ಬರೂ ಕೂಡ ತ್ರಿವರ್ಣ ಪ್ರಮಾಣಪತ್ರವನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ಈ ರೀತಿಯ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ
ಆಗಸ್ಟ್ 13-5 ರ ನಡುವೆ ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ದೇಶದ ನಾಗರಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಲಿದ್ದಾರೆ. ಇದಕ್ಕಾಗಿ ಸರ್ಕಾರ ವೆಬ್‌ಸೈಟ್ ಕೂಡ ಸಿದ್ಧಪಡಿಸಿದೆ. ಬಳಕೆದಾರರು ಹರ್ ಘರ್ ತಿರಂಗಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ-“ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಹೀಗಿರಲಿದೆ”… ಕೆಂಪುಕೋಟೆಯಲ್ಲಿ ಪ್ರಧಾನಿ ಮಾತು

ಪ್ರಕ್ರಿಯೆ ತುಂಬಾ ಸುಲಭವಾಗಿದೆ
>> ಹರ್ ಘರ್ ತಿರಂಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
>> ವೆಬ್‌ಸೈಟ್ ತೆರೆದುಕೊಂಡ ಬಳಿಕ PIN A FLAG ಆಯ್ಕೆಯನ್ನು ಆರಿಸಿ
>> ನಿಮ್ಮ ಲೋಕೇಶನ್ ಗೆ ನೀವು ಅನುಮತಿಯನ್ನು ನೀಡಬೇಕು
>> PIN A FLAG ಆಯ್ಕೆಯನ್ನು ಆಯ್ದ ಬಳಿಕ ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ
>>  ಅದರಲ್ಲಿ ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ಹಂಚಿಕೊಳ್ಳಿ
>> ಪ್ರೊಫೈಲ್ ಚಿತ್ರ ವಿಭಾಗಕ್ಕೆ ಹೋಗುವ ಮೂಲಕ ಫೋಟೋವನ್ನು ಅಪ್‌ಲೋಡ್ ಮಾಡಿ

ಇದನ್ನೂ ಓದಿ-Independence Day 2022: ಇದೇ ಮೊದಲ ಬಾರಿಗೆ ಸ್ವದೇಶಿ ಫಿರಂಗಿಯೊಂದಿಗೆ ಗೌರವ : ಕೆಂಪು ಕೋಟೆಯಲ್ಲಿ ಅನಾವರಣಗೊಂಡಿತು 'ದೇಸಿ ಧಮ್ '

>> ಫೋಟೋವನ್ನು ಅಪ್‌ಲೋಡ್ ಮಾಡಿದ ನಂತರ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ
>> ಇದಾದ ಬಳಿಕ ನಿಮ್ಮ ಮುಂದೆ ಮ್ಯಾಪ್ ತೆರೆದುಕೊಳ್ಳಲಿದೆ, ನೀವು ನಕ್ಷೆಯಲ್ಲಿ ಸರಿಯಾದ ಸ್ಥಳವನ್ನು ಆರಿಸಬೇಕಾಗುತ್ತದೆ
>> ತ್ರಿವರ್ಣ ಧ್ವಜದ ಮಾಹಿತಿಯನ್ನು ಸಿಸ್ಟಂನಲ್ಲಿ ನಮೂದಿಸಿದ ತಕ್ಷಣ ನಿಮ್ಮ ಪ್ರಮಾಣಪತ್ರವು ಪರದೆಯ ಮೇಲೆ ಕಾಣಿಸುತ್ತದೆ.
>> ಈಗ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News