Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ!

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಜುಲೈ 23ರಿಂದ ಪ್ರಾರಂಭವಾಗಿದೆ. ಈ ಮಾರಾಟದ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ನೀವು ಅಗ್ಗವಾಗಿ ಖರೀದಿಸಬಹುದು. ಇಲ್ಲಿ ನೋಕಿಯಾದ 32-ಇಂಚಿನ ಡಿಸ್ಪ್ಲೇ ಸ್ಮಾರ್ಟ್ ಟಿವಿಯನ್ನು ನೀವು 700 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Written by - Puttaraj K Alur | Last Updated : Jul 24, 2022, 12:12 PM IST
  • ‘ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್’ ಸೇಲ್‍ನಲ್ಲಿ ಸಿಗುತ್ತಿದೆ ಭರ್ಜರಿ ರಿಯಾಯತಿ
  • ಕಡಿಮೆ ಬೆಲೆಗೆ Nokia HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಖರೀದಿಸಿ
  • ಕೇವಲ 700 ರೂ.ಗೆ ಅತ್ಯುತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್ ಟಿವಿ ಮನೆಗೆ ಕೊಂಡೊಯ್ಯಿರಿ
Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ! title=
Flipkart Big Saving Days Offer

ನವದೆಹಲಿ: ಜುಲೈ 23 ರಿಂದ ‘ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್’ ಆನ್‌ಲೈನ್ ಶಾಪಿಂಗ್ ಉತ್ಸವ ನಡೆಯುತ್ತಿದೆ. ಈ ಸೇಲ್‌ನಲ್ಲಿ ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಇಂದು ನಾವು ನಿಮಗಾಗಿ ವಿಶೇಷ ಸ್ಮಾರ್ಟ್ ಟಿವಿ ಡೀಲ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ನೀವು ಕೇವಲ 700 ರೂ.ಗಿಂತ ಕಡಿಮೆ ಬೆಲೆಗೆ ನೋಕಿಯಾದ ಸ್ಮಾರ್ಟ್ ಟಿವಿಯನ್ನು ಮನೆಗೆ ಕೊಂಡೊಯ್ಯಬಹುದು.  

ಅಗ್ಗದ ನೋಕಿಯಾ ಸ್ಮಾರ್ಟ್ ಟಿವಿ ಖರೀದಿಸಿ

ನಾವು ಇಲ್ಲಿ Nokia HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬಗ್ಗೆ ಮಾತನಾಡುತ್ತಿದ್ದೇವೆ. 81cm ಅಂದರೆ 32-ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ  24,999 ರೂ. ಇದೆ. ಆದರೆ ಫ್ಲಿಪ್‌ಕಾರ್ಟ್‌ ಸೇಲ್‍ನಡಿ ಈ ಟಿವಿ ಮೇಲೆ ಶೇ.44ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಈ ಟಿವಿ ನಿಮಗೆ 13,999 ರೂ.ಗೆ ಸಿಗುತ್ತಿದೆ. ಬ್ಯಾಂಕ್ ಆಫರ್‍ನಡಿ ನೀವು ಹೆಚ್ಚುವರಿ 1,300 ರೂ.ವರೆಗೆ ಉಳಿಸಬಹುದು. ಇದಲ್ಲದೆ 6,000 ರೂ.ಗೆ ಆಯ್ದ ಉತ್ಪನ್ನಗಳ ಶಾಪಿಂಗ್ ಮಾಡಿದರೆ 1,000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಎರಡೂ ಕೊಡುಗೆ ಬಳಸಿಕೊಂಡರೆ ನಿಮಗೆ ಈ ಟಿವಿ 11,699 ರೂ.ಗೆ ಸಿಗುತ್ತದೆ.

ಇದನ್ನೂ ಓದಿ: Amazon Prime Day 2022: ಜುಲೈ 23 ರಿಂದ ಗೃಹ ಬಳಕೆ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ, ಈ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

ಈ ರೀತಿ 700 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಿ

ನೀವು Nokia HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು 2,500 ರೂ.ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಯಸಿದರೆ, ಅದಕ್ಕಾಗಿ ನೀವು ಡೀಲ್‌ನ ವಿನಿಮಯ ಕೊಡುಗೆ ಬಳಸಬೇಕಾಗುತ್ತದೆ. ನಿಮ್ಮ ಹಳೆಯ ಟಿವಿಗೆ ಬದಲಿಯಾಗಿ ಇದನ್ನು ಖರೀದಿಸುವ ಮೂಲಕ ನೀವು 11 ಸಾವಿರ ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಕೊಡುಗೆಯ ಸಂಪೂರ್ಣ ಪ್ರಯೋಜನ ಪಡೆದರೆ ನಿಮಗೆ ಈ ಟಿವಿಯ ಬೆಲೆಯು 11,699 ರೂ.ದಿಂದ  699ಕ್ಕೆ ಇಳಿಕೆಯಾಗಲಿದೆ.

Nokia ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು

32-ಇಂಚಿನ ಡಿಸ್ಪ್ಲೇಯ Nokia HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗೆ 1366 x 768 ಪಿಕ್ಸೆಲ್ಗಳ HD ರೆಡಿ ರೆಸಲ್ಯೂಶನ್ ನೀಡಲಾಗುತ್ತಿದೆ. Androidನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಟಿವಿ Google ಸಹಾಯಕ ಬೆಂಬಲ ಮತ್ತು ಅಂತರ್ನಿರ್ಮಿತ Chromecast ನೊಂದಿಗೆ ಬರುತ್ತದೆ. ಇದರಲ್ಲಿ ನೀವು 60Hz ನ ರಿಫ್ರೆಶ್ ರೇಟ್ ಮತ್ತು 39W ನ ಸೌಂಡ್ ಔಟ್‌ಪುಟ್ ಪಡೆಯುತ್ತೀರಿ. ಈ ಸ್ಮಾರ್ಟ್ ಟಿವಿಯಲ್ಲಿ ನೀವು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: ಕೇವಲ 750 ರೂಪಾಯಿಗೆ ಖರೀದಿಸಿ Redmiಯ ಸ್ಮಾರ್ಟ್ ಫೋನ್ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News