ಬಜೆಟ್‌ಗೂ ಮುನ್ನ ಸರ್ಕಾರ ಮೊಬೈಲ್‌ ಮಾನಿಫ್ಯಾಕ್ಚರಿಂಗ್ ಮೇಲಿನ ಆಮದು ಸುಂಕದಲ್ಲಿ ಕಡಿತ : ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಗಣನೀಯ ಇಳಿಕೆ !

ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚ ತುಂಬಾ ಹೆಚ್ಚಾಗಿದೆ ಎನ್ನುವುದು ಫೋನ್ ಉತ್ಪಾದನಾ ಕಂಪನಿಗಳ ಮಾತು. ಹಾಗಾಗಿ ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆ ಈ ಕಂಪನಿಗಳದ್ದು.  

Written by - Ranjitha R K | Last Updated : Jan 31, 2024, 12:29 PM IST
  • ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ
  • ಫೋನ್‌ಗಳನ್ನು ತಯಾರಿಸಲು ಬಳಸುವ ಅಗತ್ಯ ಸರಕುಗಳ ಮೇಲೆ ಕಡಿಮೆ ತೆರಿಗೆ
  • ಇದು ದೇಶದ ಗಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬಜೆಟ್‌ಗೂ ಮುನ್ನ ಸರ್ಕಾರ ಮೊಬೈಲ್‌ ಮಾನಿಫ್ಯಾಕ್ಚರಿಂಗ್ ಮೇಲಿನ ಆಮದು ಸುಂಕದಲ್ಲಿ  ಕಡಿತ : ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಗಣನೀಯ ಇಳಿಕೆ !  title=

ಬೆಂಗಳೂರು : ಮೊಬೈಲ್ ಫೋನ್ ತಯಾರಿಸಲು ಬಳಸುವ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಭಾರತ ಕಡಿಮೆ ಮಾಡಿದೆ. ಈಗ ಶೇ.15ರ ಬದಲು ಶೇ.10ರಷ್ಟು ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ವಿಶೇಷವಾಗಿ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬ್ಯಾಟರಿ ಕವರ್, ಮುಖ್ಯ ಲೆನ್ಸ್, ಬ್ಯಾಕ್ ಕವರ್, ಪ್ಲಾಸ್ಟಿಕ್ ಮತ್ತು ಇತರ ಲೋಹದ ಭಾಗಗಳ ಮೇಲಿನ ಆಮದು ಸುಂಕವನ್ನು ಸರ್ಕಾರ ಕಡಿಮೆ ಮಾಡಿದೆ.

ಪ್ರಯೋಜನ ಪಡೆಯಲಿದೆ Apple :  
ಕೆಲವೇ ದಿನಗಳ ಹಿಂದೆ ಅಂದರೆ ಜನವರಿ 11ರಂದು ಪ್ರೀಮಿಯಂ ಮೊಬೈಲ್ ಫೋನ್ ತಯಾರಿಸಲು ಅಗತ್ಯವಿರುವ ವಸ್ತುಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸುದ್ದಿಯಲ್ಲಿ ವರದಿಯಾಗಿತ್ತು. ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಸುದ್ದಿ ಬಂದಿದೆ. ಇದರರ್ಥ ಹೆಚ್ಚಿನ ಬೆಲೆಯ ಫೋನ್‌ಗಳನ್ನು ತಯಾರಿಸಲು ಬಳಸುವ ಅಗತ್ಯ ಸರಕುಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತದೆ. ಆಪಲ್ ನಂತಹ ಕಂಪನಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಲಾಭವಾಗಲಿದೆ. ಭಾರತದಿಂದ ವಿದೇಶಕ್ಕೆ ಹೆಚ್ಚಿನ ಫೋನ್ ಗಳನ್ನೂ ರಫ್ತು ಮಾಡಬಹುದು. ಇದು ದೇಶದ ಗಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಯಂತ್ರ ಪತ್ರಕರ್ತರ ಹೆಚ್ಚಳ: ಸುದ್ದಿಮನೆಯನ್ನು ಕೈವಶ ಮಾಡಿಕೊಳ್ಳುವುದೇ ಕೃತಕ ಬುದ್ಧಿಮತ್ತೆ?

ಚೀನೀ ಕಂಪನಿಗಳೊಂದಿಗೆ ಸ್ಪರ್ಧಿಸುವುದು ಸುಲಭ :
ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚ ತುಂಬಾ ಹೆಚ್ಚಾಗಿದೆ ಎನ್ನುವುದು ಫೋನ್ ಉತ್ಪಾದನಾ ಕಂಪನಿಗಳ ಮಾತು. ಹಾಗಾಗಿ ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆ ಈ ಕಂಪನಿಗಳದ್ದು. ಇದರಲ್ಲಿ ಸುಮಾರು 12 ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಿದರೆ ಫೋನ್ ತಯಾರಿಕೆಯ ವೆಚ್ಚ ಕಡಿಮೆಯಾಗಿ, ಹೆಚ್ಚಿನ ಲಾಭವನ್ನು ಗಳಿಸುವುದು ಸಾಧ್ಯವಾಗುತ್ತದೆ. ಇದಲ್ಲದೆ, ಚೈನೀಸ್ ಮತ್ತು ವಿಯೆಟ್ನಾಂ ಕಂಪನಿಗಳೊಂದಿಗೆ ಸ್ಪರ್ಧಿಸಲು ಇದು ಸುಲಭ ಅವಕಾಶ ನೀಡುತ್ತದೆ ಎನ್ನುವ ಭಾವನೆ ಫೋನ್ ತಯಾರಿಕಾ ಕಂಪನಿಗಳದ್ದು.  

2023-24 ರ ಬಜೆಟ್‌ನಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಲ್ಲಿ ಉನ್ನತ-ಮಟ್ಟದ ಮೊಬೈಲ್ ಫೋನ್‌ಗಳ ಉತ್ಪಾದನೆಯನ್ನು ಉತ್ತೇಜಿಸಲು ಮೊಬೈಲ್ ಕ್ಯಾಮೆರಾ ಫೋನ್‌ಗಳ ಘಟಕಗಳ ಮೇಲಿನ ಶೇಕಡಾ 2.5 ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. 

ಇದನ್ನೂ ಓದಿ : Google Photos: ಗ್ಯಾಲರಿ ಕ್ಲೀನ್ ಮಾಡಲು AI ಬಳಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News